25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ತಾಲೂಕಿನ ಆಂಬುಲೆನ್ಸ್ ವಾಹನದ ಚಾಲಕರು ಮತ್ತು ಮಾಲಕರಿಗೆ ಸನ್ಮಾನ

ಉಜಿರೆ: ಬೆನಕ ಹೆಲ್ತ್ ಸೆಂಟರ್ ಉಜಿರೆ ವತಿಯಿಂದ ಅದರ ರಜತ ಮಹೋತ್ಸವ ಮತ್ತು ದೀಪಾವಳಿ ಪ್ರಯುಕ್ತ ಸಾಂಪ್ರದಾಯಿಕ ಪೂಜೆಯೊಂದಿಗೆ ತಾಲೂಕಿನ ಆಂಬುಲೆನ್ಸ್ ವಾಹನದ ಚಾಲಕರು ಮತ್ತು ಮಾಲಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ ಗೋಪಾಲಕೃಷ್ಣ ರವರು ಮಾತನಾಡುತ್ತ ಆಂಬುಲೆನ್ಸ್ ಚಾಲಕರು ನಿಜವಾದ ಅರ್ಥದಲ್ಲಿ ಜೀವರಕ್ಷಕರು ಯಾವುದೇ ಕಾಲವಿರಲಿ , ಯಾವುದೇ ಸಮಯವಿರಲಿ ಕರೆದಾಗ ಯಾವುದೇ ಹಳ್ಳಿಯ ಮೂಲೆಯಲ್ಲೂ ಸ್ಪಂದಿಸಿ ರೋಗಿಗಳನ್ನು ಆಸ್ಪತ್ರೆಗೆ ತುರ್ತಾಗಿ ಸೇರಿಸಿ ಅವರ ಜೀವವನ್ನು ಉಳಿಸುವ ಕಾರ್ಯ ಸದಾ ಸುಸ್ತ್ಯಾರ್ಹ ಮತ್ತು ಅಭಿನಂದನೀಯ ಎಂದು ಎಲ್ಲ ಆಂಬುಲೆನ್ಸ್ ಚಾಲಕರ ಈ ಸೇವೆಯನ್ನು ಸ್ಮರಿಸಿದರು .
ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಹಿರಿಯ ಆಂಬುಲೆನ್ಸ್ ಚಾಲಕರಾದ ಅಬ್ದುಲ್ ಹಮೀದರವರನ್ನು ಶಾಲು ಹೊದಿಸಿ , ಫಲಪುಷ್ಪ & ಸ್ಮರಣಿಕೆ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಹಮೀದ್ ರವರು ತನ್ನ ಪ್ರಾರಂಭದ ದಿನಗಳಲ್ಲಿ ಬೆನಕ ಆಸ್ಪತ್ರೆ ನೀಡಿದ ಸಹಕಾರ ಮತ್ತು ಡಾ.ಗೋಪಾಲಕೃಷ್ಣ ರವರು ತೋರಿದ ಪ್ರೀತಿ ವಿಶ್ವಾಸವನ್ನು ನೆನಪಿಸಿ ಕೊಂಡು ಈ ಆಸ್ಪತ್ರೆ ಇನ್ನಷ್ಟು ಬೆಳೆದು ಇನ್ನು ಹೆಚ್ಚಿನ ರೋಗಿಗಳ ಪಾಲಿಗೆ ವರದಾನವಾಗಲಿ ಎಂದು ಆಶಿಸಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ 20 ಕ್ಕೂ ಹೆಚ್ಚು ಆಂಬುಲೆನ್ಸ್ ಚಾಲಕರನ್ನು ಪ್ರತ್ಯೇಕವಾಗಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು . ಈ ಕಾರ್ಯಕ್ರಮದಲ್ಲಿ ಡಾ.ಭಾರತಿ ಜಿ ಕೆ ಮತ್ತು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು . ಎಸ್ .ಜಿ ಭಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವಾಗತಿಸಿ ವಂದಿಸಿದರು.

Related posts

ನಿಡ್ಲೆ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಮತ್ತು ಮಹಿಳಾ ಗ್ರಾಮಸಭೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಜನಮಂಗಲ ಕಾರ್ಯಕ್ರಮದ ಮೂಲಕ ವಾಟರ್ ಬೆಡ್ ವಿತರಣೆ

Suddi Udaya

ನಿಡ್ಲೆ: ಕಂರ್ಬಿತ್ಲು ನಿವಾಸಿ ಅಚ್ಚುತ ಹೆಬ್ಬಾರ್ ನಿಧನ

Suddi Udaya

ಬಂಗ್ಲೆಗುಡ್ಡೆ ಪ್ರದೇಶಕ್ಕೆ ಮತ್ತೆ ಎಸ್.ಐ‌.ಟಿ ಎಂಟ್ರಿ

Suddi Udaya

ಗುರುವಾಯನಕೆರೆ : ಸ.ಹಿ.ಪ್ರಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ರೂ. 6 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಮರು ಡಾಮರೀಕರಣ ಕಾಮಗಾರಿ: ಶಾಸಕ ಹರೀಶ್‌ ಪೂಂಜ ಉಪಸ್ಥಿತಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಶಿಲಾನ್ಯಾಸ

Suddi Udaya
error: Content is protected !!