22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್‌ ಮೋಟಾರು ರಿವೈಂಡಿಂಗ್‌ ಮತ್ತು ಪಂಪ್‌ ಸೆಟ್‌ ರಿಪೇರಿ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ಜೀವನ ಅನ್ನುವಂತಹದ್ದು ಬಹಳ ದೀರ್ಘವಾಗಿವಂತಹದ್ದು ಹೇಳಿ ನಾವು ಯಾವತ್ತೂ ಈ ಭೂಮಿ ಮೇಲೆ ಜನ್ಮ ಪಡೆಯುತ್ತೇವೆ. ಅಥವಾ ಮರಣ ಹೊಂದುತ್ತೇವೆ ಎಂದು ಎರಡು ಸಹ ನಮಗೆ ಗೊತ್ತಿರುವುದಿಲ್ಲ. ಅರ್ಜಿ ಹಾಕಿ ಬರುವಂತದಲ್ಲ, ಅರ್ಜಿ ಹೋಗುವಂತದ್ದಲ್ಲ ಆದರೆ ಈ ಜೀವನಕ್ಕೆ ಬಂದ ಮೇಲೆ ನಾವು ಏನು ಮಾಡಬೇಕು ಅಥವಾ ಏನು ಮಾಡಲು ಬಾರದು ಅನ್ನವಂತಹದ್ದು ತಿಳಿಯಬೇಕು. ಎಲ್ಲರನ್ನೂ ನೆನಪು ಇಟ್ಟುಕೊಳ್ಳುವುದಿಲ್ಲ, ಕೆಲವು ಸಾಧಕರನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ. ಇವತ್ತಿನ ಬದಲಾದ ಜೀವನ ಶೈಲಿಯಲ್ಲಿ ಬೇರೆ ಎಲ್ಲ ವೃತ್ತಿಕ್ಕಿಂತ ಸ್ವಂತ ಉದ್ಯಮ ಮಾಡುವುದೇ ಸೂಕ್ತ ಎಂದು ಭಾವಿಸುತ್ತದೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಶೇಕಾಡ 83 ಜನ ಸ್ವಂತ ಉದ್ಯಮಿಗಳು ಇದ್ದಾರೆ. ಹಾಗಾಗಿ ಈ ಉದ್ಯಮ ನಡೆಸಲು ನಿಮ್ಮ ವರ್ತನೆಯ ಮೇಲೆ ಹೆಚ್ಚಿನ ಗಮನ ಇರಿಸಬೇಕು. ನಿಮ್ಮಲ್ಲಿ ಉತ್ತಮ ಮನೋಭಾವ ಇದ್ದರೆ ಸಾಧನೆ ಸುಲಭ ಸಾಧ್ಯ. ವೃತ್ತಿಯಲ್ಲಿ ನಿರಂತರ ಕಲಿಕೆ ಇರುಬೇಕು ಅದಕ್ಕೆ ಕುತೂಹಲ ಇರಬೇಕು. ವೃತ್ತಿಯಲ್ಲಿ ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು ಹಾಗೂ ವ್ಯವಹಾರದಲ್ಲಿ ಬದ್ಧತೆ ಇಟ್ಟುಕೊಂಡು ಮುಂದುವರೆಯಬೇಕು. ಉದ್ಯಮದಲ್ಲಿ ಕೆಲವೊಂದು ಸಲ ಸಮಸ್ಯೆಗಳು ಬರುತ್ತೇವೆ. ನಿಮ್ಮ ಕೆಲಸ ಜನರ ಸಮಸ್ಯೆಗಳಿಗೆ ಸ್ವಂದಿಸಿ ಉತ್ತಮ ಸೇವೆಯನ್ನು ಕೊಡಿ ಎಂದು ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ಪ್ರಾಶುಂಪಾಲರಾದ ವಿಶ್ವೇಶ್ವರ ಪ್ರಸಾದ್ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಇಲೆಕ್ಟ್ರಿಕಲ್‌ ಮೋಟಾರು ರಿವೈಂಡಿಂಗ್‌ ಮತ್ತು ಪಂಪ್‌ ಸೆಟ್‌ ರಿಪೇರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಅವರು ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು. ತೇಜಸ್ಸು ಪ್ರಾರ್ಥನೆ ಮಾಡಿದರು, ಆನಂದ, ರೋಹಿತ್, ಸಂಗಮೇಶ್ ತರಬೇತಿಯ ಅನುಭವ ಹಂಚಿಕೊಂಡರು.

Related posts

ಬೆಳ್ತಂಗಡಿ ತಾಲೂಕಿನಲ್ಲಿ ನೈತಿಕ ಪೊಲೀಸ್ ಗಿರಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್‌ವೈಎಸ್ ಬೆಳ್ತಂಗಡಿ ಝೋನ್ ನಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿಶೇಷ ತರಗತಿಯ ಸಮಾರೋಪ ಕಾರ್ಯಕ್ರಮ

Suddi Udaya

ಏಕಾಏಕಿ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಅಳದಂಗಡಿ ಸ. ಪ್ರೌ. ಶಾಲೆ ಮಕ್ಕಳಿಂದ ನಗರ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ

Suddi Udaya

ಮರುಮೌಲ್ಯಮಾಪನ ಕಾಯರ್ತಡ್ಕ ಪ್ರೌಢಶಾಲೆ 100% ಫಲಿತಾಂಶ

Suddi Udaya

ಲಾಯಿಲ ಗ್ರಾಮಸಭೆಯಲ್ಲಿ ಗ್ರಾ.ಪಂ ಮತ್ತು ಅಧಿಕಾರಿಗಳ ನಿದ್ರಾವಸ್ಥೆಯನ್ನು ಖಂಡಿಸಿ ಶೇಖರ್ ಲಾಯಿಲ ಪಂಚಾಯತ್ ಸಭಾಭವನದ ಎದುರು ನಿದ್ದೆ ಮಾಡುವ ಮೂಲಕ ಆಕ್ರೋಶ

Suddi Udaya
error: Content is protected !!