30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯ ವಿಶೇಷ ಮಕ್ಕಳ ಸಾನಿಧ್ಯ ಕೇಂದ್ರದಲ್ಲಿ ದೀಪಾವಳಿ ಸಂಭ್ರಮ

ಉಜಿರೆ: ಬೆನಕ ಆಸ್ಪತ್ರೆ ವತಿಯಿಂದ ಉಜಿರೆಯ ವಿಶೇಷ ಮಕ್ಕಳ ಸಾನಿಧ್ಯ ಕೇಂದ್ರಲ್ಲಿ ಅ.21 ರಂದು ಸಂಭ್ರಮ ಮತ್ತು ಸಡಗರದಿಂದ ದೀಪಾವಳಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಹಾಗೂ ಡಾ. ಭಾರತಿ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಡಾ. ಗೋಪಾಲಕೃಷ್ಣ ಅವರು ಮಾತನಾಡಿ, ದೀಪಾವಳಿ ಎಂದರೆ ಕೇವಲ ಪಟಾಕಿ, ಬೆಳಕು, ಸಿಹಿ ಅಷ್ಟೇ ಅಲ್ಲ — ಅದು ಸ್ನೇಹ, ಹಂಚಿಕೊಳ್ಳುವಿಕೆ ಮತ್ತು ಕೃತಜ್ಞತೆಯ ಹಬ್ಬ. ಈ ಮಕ್ಕಳು ತಮ್ಮ ನಿಷ್ಕಲ್ಮಶ ನಗು ಮತ್ತು ಪ್ರಾಮಾಣಿಕ ಹೃದಯದಿಂದ ಈ ಹಬ್ಬದ ಅರ್ಥವನ್ನು ನಮಗೆ ತೋರಿಸಿದ್ದಾರೆ. ಬೆನಕ ಆಸ್ಪತ್ರೆ ಸದಾ ಆರೋಗ್ಯ ಸೇವೆಯ ಜೊತೆಗೆ ಸಮಾಜದ ಎಲ್ಲ ವರ್ಗದವರಿಗೂ ಸ್ಪಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಇಂದಿನ ಈ ದೀಪಾವಳಿ ಸಂಭ್ರಮವು ಆ ಸಾಮಾಜಿಕ ಬದ್ಧತೆಯ ಇನ್ನೊಂದು ಉದಾಹರಣೆ. ನಿಮ್ಮೆಲ್ಲರ ಹೃದಯದಲ್ಲಿ ಬೆಳಕಿನಂತೆ ಸಂತೋಷ, ಆರೋಗ್ಯ ಮತ್ತು ಶಾಂತಿ ಸದಾ ತುಂಬಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಮಂಗಳೂರು ಸಾನಿಧ್ಯ ಕೇಂದ್ರದ ನಿರ್ದೇಶಕರಾದ ಡಾ. ವಸಂತ ಕುಮಾರ್ ಶೆಟ್ಟಿ ಅವರು ಮಾತನಾಡಿ ಸಾನಿಧ್ಯ ಕೇಂದ್ರದ ಮಕ್ಕಳು ಹೆತ್ತವರಿಗೆ ವರವೇ ಹೊರತು ಶಾಪವಲ್ಲ. ಅವರ ಪ್ರತಿಭೆಯನ್ನು ಗುರುತಿಸಿ, ಸೂಕ್ತ ಕೌಶಲ್ಯ ತರಬೇತಿಯನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರಬಹುದೆಂದು ನುಡಿದರು.

ಪ್ರಾರಂಭದಲ್ಲಿ ಸಾನಿಧ್ಯ ಕೇಂದ್ರದ ಸಂಚಾಲಕರಾದ ರೋಷನ್ ಸೀಕ್ವೇರಾ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬೆನಕ ಆಸ್ಪತ್ರೆಯ ಡಾ. ಆದಿತ್ಯ ರಾವ್, ಡಾ. ಅಂಕಿತಾ ಜಿ. ಭಟ್, ಡಾ. ರೋಹಿತ್ ಜಿ. ಭಟ್ ಹಾಗೂ ಡಾ. ನವ್ಯಾ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಮಕ್ಕಳೊಂದಿಗೆ ಪಟಾಕಿ ಸಿಡಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಆನಂತರ ಸಾನಿಧ್ಯ ಕೇಂದ್ರದ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ವೀಕ್ಷಿಸಿ, ಅವರ ಕಲೆ ಮತ್ತು ಪ್ರತಿಭೆಯನ್ನು ಮನಸಾರೆ ಮೆಚ್ಚಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಾನಿಧ್ಯ ಸಂಸ್ಥೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ಸಿಹಿ ವಿತರಣೆ ನಡೆಸಲಾಯಿತು.

ಈ ಕಾರ್ಯಕ್ರಮದ ಮೂಲಕ ಬೆನಕ ಆಸ್ಪತ್ರೆ ಆರೋಗ್ಯ ಸೇವೆಯ ಜೊತೆಗೆ ಸಮಾಜದ ಪ್ರತಿ ವರ್ಗದವರೊಂದಿಗೆ ಸಂತೋಷ ಹಂಚಿಕೊಳ್ಳುವ ಸಂದೇಶವನ್ನು ನೀಡಿತು.

Related posts

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಸಾರ್ವಜನಿಕರು ಬೆಂಬಲ ನೀಡಬೇಕು: ಧರ್ಮಗುರು ಫಾ. ಆದರ್ಶ್ ಜೋಸೆಫ್

Suddi Udaya

ಶ್ರೀ ಸತ್ಯಚಾವಡಿ ತರವಾಡು ಮನೆಯ ಪ್ರವೇಶೋತ್ಸವ, ದೈವ ದೇವರುಗಳ ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ:

Suddi Udaya

ಬಿಜೆಪಿ ನಿಡ್ಲೆ ಶಕ್ತಿಕೇಂದ್ರದ ಅಧ್ಯಕ್ಷರಾಗಿ ನವೀನ್ ಆಯ್ಕೆ

Suddi Udaya

ಕಲಾಪೋಷಕ ಟಿ.ಶಾಮ್ ಭಟ್ ಇವರಿಗೆ ಯಕ್ಷಭಾರತಿ ದಶಮಾನೋತ್ಸವ ಗೌರವ

Suddi Udaya

ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣವನ್ನು ಮರುತನಿಖೆ ನಡೆಸುವಂತೆ ತಾ| ಮಹಿಳಾ ಮಂಡಲ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಎಸ್.ಎಸ್.ಎಲ್.ಸಿ ಉತ್ತಮ ಅಂಕ ಪಡೆದ ಬೆಳ್ತಂಗಡಿ ವಿದ್ಯಾರ್ಥಿ ಸಿಮ್ರಾ ಪರ್ವೀನ್ ಳಿಗೆ ಸನ್ಮಾನ

Suddi Udaya
error: Content is protected !!