25.7 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಶಿರ್ಲಾಲುವಿನಲ್ಲಿ ಮೊಬೈಲ್ ಟವರನ್ನು ನುಂಗಿದ ಕಳೆಗಿಡಗಂಟಿ ಬಳ್ಳಿಗಳು, ಅಧಿಕಾರಿಗಳ ನಿರ್ಲಕ್ಷ್ಯ

ಶಿರ್ಲಾಲು: ಮೊಬೈಲ್ ಟವರ್ ಸರಬರಾಜು ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೊಬೈಲ್ ಟವರಲ್ಲಿ ಗಿಡಗಂಟಿ, ಬಳ್ಳಿಗಳು ಬೆಳೆದು ಮುತ್ತಿಕೊಂಡು, ಮೊಬೈಲ್ ಟವರನ್ನೇ ಬಳ್ಳಿಗಳು ನುಂಗಿ ಅಪಾಯಕ್ಕೆ ಆಹ್ವಾನ ನೀಡುವಂತಿವೆ.

ಶಿರ್ಲಾಲು ಗ್ರಾಮ ಪಂಚಾಯತ್ ನ ಪಕ್ಕದಲ್ಲಿರುವ ಮೊಬೈಲ್ ಟವರ್ ನ ಬುಡದಿಂದ ಕೊಡಿಯವರೆಗೆ ಸಂಪೂರ್ಣ ಬಳ್ಳಿಗಳು ಮುತ್ತಿಕೊಂಡಿದೆ. ಈ ರೀತಿ ಬಳ್ಳಿಗಳು ಬೆಳೆಯಲು ಸುಮಾರು ಸಮಯ ಬೇಕಾಗುತ್ತೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿದೆ ಹೋಗಿದ್ದು ಮಾತ್ರ ವಿಪರ್ಯಾಸ ಎಂದು ಶಿರ್ಲಾಲು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬೆಳ್ತಂಗಡಿ ಸುದ್ದಿ ಉದಯ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ಸಮಯದಲ್ಲಿ ಶಿರ್ಲಾಲು ಪರಿಸರದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಎಲ್ಲರಿಗೂ ತೊಂದರೆಯಾಗಿದೆ. ಶಿರ್ಲಾಲುವಿನ‌ ಸಾರ್ವಜನಿಕರು ಎಷ್ಟೋ ಸಲ ಅಧಿಕಾರಿಗಳಿಗೆ ನೆಟ್ವರ್ಕ್ ಸಮಸ್ಯೆಯ ಗಂಭೀರತೆ ಬಗ್ಗೆ ತಿಳಿಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಈ ರೀತಿ ಟವರಲ್ಲಿ ಬಳ್ಳಿಗಳು ಬೆಳೆದರೆ ನೆಟ್ವರ್ಕ್ ಬರುವುದಾದರೂ ಹೇಗೆ ಎಂದು ಸಾರ್ವಜನಿಕರು ಮಾತಾಡುತ್ತಿದ್ದಾರೆ‌.

ಮೊಬೈಲ್ ಟವರ್ ಸುತ್ತ ಮರಗಳು ಬೆಳೆದಿದೆ. ಜೊತೆಗೆ ಬಳ್ಳಿಗಳ ರಾಶಿಯಿದೆ. ಆದರೂ ಇದರ ಬಗ್ಗೆ ಗಮನಹರಿಸುವವರು ಅಥವಾ ಕೇಳುವವರು ಇಲ್ಲದಾಗಿದೆ. ಜನರಿಗೆ ಪ್ರಯೋಜನವಾಗದ ಮೊಬೈಲ್ ಟವರ್ ಇದ್ದರೇನು, ಬಿಟ್ಟರೇನು ಎಂದು ಜನರು ಅಧಿಕಾರಿಗಳನ್ನು ದೂರುತ್ತಿದ್ದಾರೆ.

Related posts

ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಕಲಿಕೆಯಲ್ಲಿ ಕಲೆ’ ಕಾರ್ಯಾಗಾರ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ

Suddi Udaya

ಬೆಂಗಳೂರಿನಿಂದ ಮೈಸೂರು ನವರೆಗೆ ಬೃಹತ್ ಪಾದಯಾತ್ರೆಗೆ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ

Suddi Udaya

ಕ್ವಿಜ್ ಸ್ಪರ್ಧೆ: ನಾರಾವಿಯ ಸಂತ ಅಂತೋನಿ ಪದವಿ ಕಾಲೇಜಿಗೆ ಪ್ರಶಸ್ತಿ

Suddi Udaya

ನಾಲ್ಕೂರು: ನಿಟ್ಟಡ್ಕ, ಪುಣ್ಕೆದೊಟ್ಟು, ಪರಿಸರದಲ್ಲಿ ಹೆಚ್ಚಿದ ಚಿರತೆ ಕಾಟ, ಭಯಭೀತರಾದ ಗ್ರಾಮಸ್ಥರು

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 341 ಕೋಟಿ ವ್ಯವಹಾರ, ರೂ. 1.53 ಕೋಟಿ ಲಾಭ, ಸದಸ್ಯರಿಗೆ ಶೇ. 13 ಡಿವಿಡೆಂಟ್

Suddi Udaya
error: Content is protected !!