23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಜ್ಯ ಪಠ್ಯಕ್ರಮ ಉಜಿರೆಯಲ್ಲಿ ಅ.18 ರಂದು ದೀಪಾವಳಿ ಹಬ್ಬ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮೀ ನಾಯಕ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ದೀಪಾವಳಿಯ ಹಿನ್ನೆಲೆಯನ್ನು ವಿವರಿಸಿದರು.

ಶತಮಾನಗಳಿಂದ ಆಚರಿಸಲಾಗುತ್ತಿರುವ ಈ ಹಬ್ಬ ಜೀವನದಲ್ಲಿ ಹೊಸತನ, ಚೈತನ್ಯ ಮತ್ತು ನೆಮ್ಮದಿಯ ಬೆಳಕನ್ನು ತುಂಬುತ್ತದೆ ಎಂದರು.

ಕಾರ್ಯಕ್ರಮದ ಅತಿಥಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕರು ಕಿರಿಯಾಡಿ ಶ್ರೀಮತಿ ರಾಜೇಶ್ವರಿ ಮಾತನಾಡಿ, ದೀಪಾವಳಿ ಹಬ್ಬವು ಕೇವಲ ಭಾರತದಲ್ಲೇ ಅಲ್ಲ, ವಿಶ್ವದಾದ್ಯಂತ ಸಂತೋಷದಿಂದ ಆಚರಿಸಲಾಗುತ್ತಿರುವ ಹಬ್ಬ. ದೀಪಾವಳಿಯ ಆಚರಣೆಯು ಕೇವಲ ಹಬ್ಬವಲ್ಲ, ನಮ್ಮ ಸಂಸ್ಕೃತಿ ಸಂಸ್ಕಾರ. ನಮ್ಮ ಆಚರಣೆಗಳ ಹಿನ್ನಲೆ ತಿಳಿದುಕೊಂಡು ಆಚರಣೆಗಳನ್ನು ಮುಂದುವರೆಸುತ್ತಾ ಬರುವುದು ನಮ್ಮ ಕರ್ತವ್ಯ ಎಂದರು.

ದೀಪಾವಳಿ ಹಬ್ಬ ಜೀವನದಲ್ಲಿ ಬೆಳಕು, ಸತ್ಯ ಮತ್ತು ಧನಾತ್ಮಕ ಚಿಂತನೆಯ ಸಂದೇಶವನ್ನು ಸಾರುತ್ತದೆ ಎಂದರು.
ವಿದ್ಯಾರ್ಥಿ ತೌಫೀರಾ ಸ್ವಾಗತಿಸಿ, ತಸ್ಮಯಿ ಅತಿಥಿ ಪರಿಚಯಿಸಿದರು.ಫಾಯೀಝಾ ವಂದಿಸಿದರು. ಸಚಿತ್ ಭಟ್ ನಿರೂಪಿಸಿದರು.

ವಿದ್ಯಾರ್ಥಿಗಳು ಕುಣಿತ ಭಜನೆ, ಸಾಂಸ್ಕೃತಿಕ ನೃತ್ಯ, ದೀಪಾವಳಿ ದಿನಗಳ ವಿಶೇಷತೆಯ ವಾಚನ ಮಾಡಲಾಯಿತು. ಮಕ್ಕಳೇ ರಚಿಸಿದ ಗೂಡುದೀಪಗಳ ಅಲಂಕಾರ, ತಳಿರುತೋರಣ ದೀಪಾವಳಿ ಆಚರಣೆಗೆ ವಿಶೇಷ ಮೆರುಗು ತಂದಿತು.ವಿದ್ಯಾರ್ಥಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ನಾಳೆ ಬೆಳ್ತಂಗಡಿಗೆ ಜಿಲ್ಲಾಧಿಕಾರಿ ಭೇಟಿ

Suddi Udaya

72 ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನಾರಾವಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿರುವ ಎನ್.ಶಶಿಕಾಂತ್ ಜೈನ್ ಅವರಿಗೆ ಕಾಯಕ ದೀಕ್ಷಾಮಣಿ ಪ್ರಶಸ್ತಿ

Suddi Udaya

ಬಿ.ಎಸ್ಸಿ. ಕೃಷಿ ಸ್ನಾತಕ ಪದವಿಯಲ್ಲಿ ಪ್ರಥಮ ಶ್ರೇಣಿ ಪಡೆದ ತೆಕ್ಕಾರುವಿನ ಅಕ್ಷತಾ ರಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ

Suddi Udaya

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಬಾಯ೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಾಧನ ಶ್ರೀ ಪ್ರಶಸ್ತಿ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯುಧ ಪೂಜೆ

Suddi Udaya

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya
error: Content is protected !!