25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ಉಮಿದ್ ಪೋರ್ಟಲ್ ಬಗ್ಗೆ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ಹಾಗೂ ವಖ್ಫ್ -ಮೈನಾರಿಟಿ ಇನ್ಫೋ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿಗೊಳಪಟ್ಟ ಎಲ್ಲಾ ಮೊಹಲ್ಲಾಗಳ ನಾಯಕರುಗಳಿಗೆ ಉಮಿದ್ ಪೋರ್ಟಲ್ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಗುರುವಾಯನಕೆರೆ ಸಮುದಾಯ ಭವನ ಸಭಾಂಗಣದಲ್ಲಿ ನಡೆಸಲಾಯಿತು. ತಾಲೂಕಿನ ಹಲವು ಮಸೀದಿ, ಮೊಹಲ್ಲಾದ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದ.ಕ ಜಿಲ್ಲಾ ವಕ್ಫ್ ಕಾರ್ಯಾಲಯದ ಆಡಿಟರ್ ಅನ್ವರ್ ಮುಸ್ತಫ ಉಮಿದ್ ಪೋರ್ಟಲ್ ನಲ್ಲಿ ವಖ್ಫ್ ಆಸ್ತಿಗಳ ಮಾಹಿತಿ ತುಂಬುವುದರ ಬಗ್ಗೆ ವಿವರವಾಗಿ ವಿವರಿಸಿದರು. ವಖ್ಫ್-ಮೈನಾರಿ ಟಿ ಇನ್ಫೋ ಇದರ ಅಡ್ಮಿನ್ ಅಬ್ದುಲ್ ಖಾದರ್ ನಾವೂರು ಪ್ರಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ವೇದಿಕೆಯಲ್ಲಿ ಎಕ್ಸ್ ಮಿಲಿಟರಿ ಮಹಮ್ಮದ್ ರಫಿ, ದ.ಕ ಜಿಲ್ಲಾ ವಖ್ಫ್ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಸಿದ್ದೀಕ್ ಕಾಜೂರು ಹಾಗೂ ಸಾಧಿಕ್ ಮಾಸ್ಟರ್ ಮಲೆಬೆಟ್ಟು
ಉಪಸ್ಥಿತರಿದ್ದರು.

ಉಮೀದ್ ಪೋರ್ಟಲ್ ಮಾಹಿತಿ ತುಂಬುವ ಬಗ್ಗೆ ಆನ್ಲೈನ್ ಡೆಮೋ ತೋರಿಸಲಾಯಿತು. ಬೆಳ್ತಂಗಡಿ ಖಿಲ್ರ್ ಜುಮಾ ಮಸೀದಿ ಅಧ್ಯಕ್ಷ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಗುರುವಾಯನಕೆರೆ ಮಸೀದಿಯ ಕಾರ್ಯದರ್ಶಿ ಹನೀಫ್, ಜಮೀಯತುಲ್ ಫಲಾಹ್ ಬೆಳ್ತಂಗಡಿ ಪೂರ್ವ ಅಧ್ಯಕ್ಷ ಅಲಿಯಬ್ಬ ಪುಲಾಬೆ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡ ಕರೀಮ್ ಗೇರುಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Related posts

ಜನಪದ ಗೀತಗಾಯನ ಸ್ಪರ್ಧೆ: ವಾಣಿ ಕಾಲೇಜಿನ ರೇಂಜರ್ಸ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ವೇಣೂರು: ಅಕ್ರಮ ಗೋ ಸಾಗಾಟ: ಆರೋಪಿಗಳು ಪೊಲೀಸರ ವಶ

Suddi Udaya

ಕಡಿರುದ್ಯಾವರದಲ್ಲಿ ಗ್ರಾಮ ಒನ್ ನಾಗರಿಕ‌ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಚಂದ್ರಯಾನ -3 ಯಶಸ್ವಿ ಸಂಭ್ರಮಿಸಿದ ಬೆಳ್ತಂಗಡಿ ಎಸ್ ಡಿಎಮ್ ಸ್ಕೌಟ್ ಗೈಡ್ಸ್ ನ ವಿದ್ಯಾರ್ಥಿಗಳು

Suddi Udaya

ಫೆ.10-ಮಾರ್ಚ್ 10: ಎಸ್‌ಡಿಪಿಐ ಸದಸ್ಯತ್ವ ಅಭಿಯಾನ: ಜನಸಾಮಾನ್ಯರ ಧ್ವನಿಗೆ ಶಕ್ತಿ ನೀಡಲು ಎಸ್‌ಡಿಪಿಐ ಸೇರಿ: ನವಾಝ್ ಕಟ್ಟೆ ಕರೆ

Suddi Udaya

ರೂ. 6 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಮರು ಡಾಮರೀಕರಣ ಕಾಮಗಾರಿ: ಶಾಸಕ ಹರೀಶ್‌ ಪೂಂಜ ಉಪಸ್ಥಿತಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಶಿಲಾನ್ಯಾಸ

Suddi Udaya
error: Content is protected !!