

ನಾರಾವಿ :ನಾರಾವಿ ಸೊಸೈಟಿಯ ಆರ್ಥಿಕ ಸಹಕಾರದೊಂದಿಗೆ,ಊರವರ ಹಾಗೂ ಆಟೋ ಚಾಲಕರ ಮಾಲಕರ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಿದ ರಿಕ್ಷಾ ನಿಲ್ದಾಣ ಇದರ ಉದ್ಘಾಟನೆಯನ್ನು ನಾರಾವಿ ಸೊಸೈಟಿ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ನೇರವೇರಿಸಿ ಶುಭ ಕೋರಿದರು.

ದೀಪಾವಳಿಯ ಶುಭ ಸಮಯದಲ್ಲಿ ಪಾರ್ಕ್ ನಲ್ಲಿ ವಾಹನ ಪೂಜೆ ನೇರವೇರಿಸಲಾಯಿತು. ನೂರಾರು ಮಂದಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ನಾರಾವಿ ಗ್ರಾ.ಪಂ ಅಧ್ಯಕ್ಷ ರಾಜವರ್ಮ ಜೈನ್, ಪಂಚಾಯತ್ ಸದಸ್ಯರಾದ ಯಶೋಧ, ಸರಿತಾ, ಮಾಜಿ ಉಪಾಧ್ಯಕ್ಷ ಉದಯ್ ಹೆಗ್ಡೆ, ಪ್ರಮುಖರಾದ ಕೃಷ್ಣ ತಂತ್ರಿಗಳು, ಜಯರಾಜ್ ಜೈನ್, ಮುನಿರಾಜ್ ಜೈನ್, ದಿವಾಕರ ಭಂಡಾರಿ , ಅಜಿಜ್, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.











