23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಉಜಿರೆ: ಸ್ವಚ್ಛತಾ ಕಾರ್ಯಕ್ರಮದ ಉದ್ಘಾಟನೆ

ಉಜಿರೆ: ಆರ್ಥಿಕ ಸಂಸ್ಥೆಗಳು ವ್ಯಾವಹಾರಿಕ ಬದ್ಧತೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿಕೊಂಡು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಸ್ವಚ್ಛತೆಯು ಪ್ರತಿಯೊಬ್ಬ ನಾಗರಿಕನ ಮೂಲಬೂತವಾದ ಕರ್ತವ್ಯವಾಗಿರಬೇಕು. ಆದ್ದುದರಿಂದ ಸ್ವಚ್ಛ ಪರಿಸರ ನಮ್ಮ ವೈಯಕ್ತಿಕ ಜವಾಬ್ದಾರಿ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್.ಆರ್. ಹರೀಶ್ ಆಚಾರ್ಯ ಹೇಳಿದರು.

ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ ‘ಸ್ವಚ್ಛತಾ ಹೀ ಸೇವಾ”ಎಂಬ ಆಶಯದಂತೆ, ಉಜಿರೆ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ನಡೆದ ಸ್ವಚ್ಚ ಭಾರತ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸ್ವಚ್ಛ ಪರಿಸರ ರೂಪಿಸುವುದು ವೈಯಕ್ತಿಕ ಜವಾಬ್ದಾರಿಯಿಂದ ಮಾತ್ರವಲ್ಲದೇ ಪ್ರತಿಯೊಬ್ಬ ನಾಗರೀಕನ ಸಾಮೂಹಿಕ ಭಾಗಿದಾರಿಕೆಯೂ ಗತ್ಯವಿದೆ. ನಮ್ಮ ಕಸ, ನಮ್ಮ ಪರಿಸರ, ಅದು ನಮ್ಮ ಜವಾಬ್ದಾರಿ ಎಂಬ ಧ್ಯೇಯವಾದಾಗ ಮಾತ್ರ ಸ್ವಚ್ಛ ಭಾರತ ಸಾಧ್ಯ ಎಂಬುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಗೌಡರ ಯಾನೆ ವಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಗೋಪಾಲ ಕೃಷ್ಣ ಜಿ.ಕೆ ಮಾತನಾಡಿ ವಿಶ್ವಕರ್ಮ ಸಹಕಾರ ಬ್ಯಾಂಕ್ ತನ್ನ ಬ್ಯಾಂಕಿಗ್ ಚಟುವಟಿಕೆಗಳ ಜೊತೆ ಜೊತೆಗೆ ಸ್ವಚ್ಛತೆಯಂತಹ ಪ್ರಮುಖ ಸಾಮಾಜಿಕ ಕಾರ್ಯಕ್ರಮವನ್ನು ಮುಂದಿನ ಹತ್ತು ತಿಂಗಳು ನಿರಂತರವಾಗಿ ಉಜಿರೆಯ ಪರಿಸರದಲ್ಲಿ ಹಮ್ಮಿಕೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಇದರ ಮಾಲಕರಾದ ಕೆ ಮೋಹನ್ ಕುಮಾರ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಡಾ. ಮಹೇಶ್ ಶೆಟ್ಟಿಯವರು ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನವನ್ನು ಚಾಲನೆ ಮಾಡಿದರು. ಉಜಿರೆಯ ಬಸ್ ನಿಲ್ದಾಣದ ಆವರಣ ಮತ್ತು ಸುತ್ತಲಿನ ಪರಿಸರ, ರಿಕ್ಷಾ ನಿಲ್ದಾಣ, ಉಜಿರೆಯ ಸರ್ಕಲ್ ಸುತ್ತಲಿನ ಪರಿಸರದ ಸ್ವಚ್ಛತೆಯ ಶ್ರಮದಾನ ಕಾರ್ಯಕ್ರಮ ಜರುಗಿತು.

ಬ್ಯಾಂಕಿನ ಹಿರಿಯ ನಿರ್ದೇಶಕರಾದ ಡಿ. ಭಾಸ್ಕರ ಆಚಾರ್ಯ, ಚಾರ್ಟರ್ಡ್ ಅಕೌಂಟೆಂಟ್ ಅಭಿನಯ್ ಕುಲಾಲ್, ಗೌಡರ ಯಾನೆ ವಕ್ಕಲಿಗರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಮತ್ತು ಸದಸ್ಯರು, ಉಜಿರೆ ವರ್ತಕರ ಸಂಘದ ಅಧ್ಯಕ್ಷರಾದ ಪ್ರಸಾದ್ ಬಿಎಸ್ ಮತ್ತು ಉಪಾಧ್ಯಕ್ಷ ಜಯಂತ್ ಮಡಿವಾಳ ಮತ್ತು ಸದಸ್ಯರು, ಸಿಎ ಅಭಿನವ್ ಕುಲಾಲ್, ಸಾಮಾಜಿಕ ಕಾರ್ಯಕರ್ತರಾದ ಉಮೇಶ್ ಆಚಾರ್ಯ ಕಾನರ್ಪ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಮಾಲಿನಿ ಅಂಚನ್ ಹಾಗೂ ವಿದ್ಯಾರ್ಥಿಗಳು, ಗ್ರಾಮ ಪಂಚಾಯತಿ ಉಜಿರೆಯ ಸಿಬ್ಬಂದಿಗಳು, ಶಾಖಾ ವ್ಯವಸ್ಥಾಪಕರಾದ ಲೋಕೇಶ್ ಎಸ್ಆರ್ ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

ಜೂ.21: “ಪ್ರಭು ಸ್ವೀಟ್ಸ್” 2ನೇ ಫ್ಯಾಕ್ಟರಿ ಔಟ್‌ಲೆಟ್ ಗುರುವಾಯನಕೆರೆಯಲ್ಲಿ ಶುಭಾರಂಭ

Suddi Udaya

ಧರ್ಮಸ್ಥಳ: ಗಾಳಿ ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ

Suddi Udaya

ಕೊಕ್ಕಡ: ಮಾಯಿಲಕೋಟೆ ದೈವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ವಿಶೇಷ ಪೂಜೆ

Suddi Udaya

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ತೇಜಲ್ ಕೆ.ಆರ್ ಮುಂಡಾಜೆ ರವರಿಗೆ ಬೆಳ್ಳಿಯ ಪದಕ

Suddi Udaya

ಜಿಲ್ಲಾ ಮಟ್ಟದ ಸಹಕಾರಿಗಳ ಹಾಗೂ ನವೋದಯ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಗುರುವಾಯನಕೆರೆಯ ಸಿಬ್ಬಂದಿ ಪ್ರವೀಣ್ ಕುಮಾರ್ ರವರಿಗೆ ಪ್ರಶಸ್ತಿ

Suddi Udaya

ಜ.7 : ಧರ್ಮಸ್ಥಳದಲ್ಲಿ ನೂತನ ಸಂಕೀರ್ಣ ಶ್ರೀ ಸಾನ್ನಿಧ್ಯ ಉದ್ಘಾಟನೆ ಹಾಗೂ ಜ್ಞಾನ ದೀಪ ಕಾರ್ಯಕ್ರಮ

Suddi Udaya
error: Content is protected !!