37.9 C
ಪುತ್ತೂರು, ಬೆಳ್ತಂಗಡಿ
March 6, 2026
ಸಂಘ-ಸಂಸ್ಥೆಗಳು

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಇದರ 2024-2025ನೇ ಸಾಲಿನ ವಾರ್ಷಿಕ ಮಹಾಸಭೆ

ಬೆಳ್ತಂಗಡಿ :ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಇದರ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಅ. 26ರಂದು ಜರುಗಿತು.


ಮಹಾಸಭೆಯ ಅಧ್ಯಕ್ಷತೆಯನ್ನು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ವಹಿಸಿದ್ದರು.
ಕು. ಹಂಸಿನಿ ಮತ್ತು ಕು. ಶ್ರೇಯ ಪ್ರಾರ್ಥಿಸಿದರು. ನಿರ್ದೇಶಕ ಗೋಪಾಲಕೃಷ್ಣ ಗುಲ್ಲೋಡಿ ಸ್ವಾಗತಿಸಿದರು. ಸಭೆಯ ನೋಟೀಸ್ ನ್ನು ನಿರ್ದೇಶಕ ವಿಜಯ ಕುಮಾರ್ ನ್ಯಾಯತರ್ಪು ಓದಿ ದಾಖಲು ಮಾಡಿದರು. ಕಾರ್ಯದರ್ಶಿ ಗಣೇಶ್ ಗೌಡ ವರದಿ ನೀಡಿದರು. ಕೋಶಾಧಿಕಾರಿ ಯುವರಾಜ್ ಅನಾರು 2024-25ನೇ ಸಾಲಿನ ಲೆಕ್ಕ ಪತ್ರ ನೀಡಿದರು. ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ ಮುಂದಿನ ವರ್ಷದ ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡಿದರು. ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ. ಎಂ. ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ದಿನೇಶ್ ಕೊಯ್ಯೂರು ಧನ್ಯವಾದವಿತ್ತರು.


ವೇದಿಕೆಯಲ್ಲಿ ನಿಕಟ ಪೂರ್ವಧ್ಯಕ್ಷ ಸೋಮೇ ಗೌಡ, ಉಪಾಧ್ಯಕ್ಷರಾದ ಧರ್ನಪ್ಪ ಗೌಡ ಬಾನಡ್ಕ, ನಾರಾಯಣ ಗೌಡ ದೇವಸ್ಯ, ನಿರ್ದೇಶಕರಾದ ಡಿ. ಎಂ. ಗೌಡ, ಮಾಧವ ಗೌಡ, ದಿನೇಶ್ ಕೊಯ್ಯೂರು, ವಸಂತ ನಡ, ಕೃಷ್ಣಪ್ಪ ಗೌಡ ಸವಣಾಲು ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ನಿಡ್ದಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಿಜಯ ಕುಮಾರ್ ಕೊಯ್ಯೂರು ಇವರನ್ನು ಸನ್ಮಾನಿಸಲಾಯಿತು

Related posts

ಯುವವಾಹಿನಿ ಕೆಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಸಾಧಕ ಹರೀಶ್ ಕೆ ಪೂಜಾರಿ ಬೈಲಬರಿ ಬಳಂಜ

Suddi Udaya

ಮಹಿಳಾ ವೃಂದ ಬೆಳ್ತಂಗಡಿ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಡೆಂಗ್ಯೂ ಜ್ವರದ ಮಾಹಿತಿ ಮತ್ತು ಜಾಗೃತಿ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಉದ್ಯಮಿ ವಾಸುದೇವ ಗೌಡ ರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ

Suddi Udaya

ಅಭಿವೃದ್ದಿ ಹೊಂದುತ್ತಿರುವ ಉಜಿರೆ ಹಳೆಪೇಟೆ ಸರಕಾರಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ ಶ್ರಮದಾನ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ

Suddi Udaya
error: Content is protected !!