September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾರ್ಯ ಗ್ರಾ.ಪಂ ನಲ್ಲಿ ಮಾನಸಿಕ ಆರೋಗ್ಯದ ಅರಿವು ಕಾರ್ಯಕ್ರಮ

ಬಾರ್ಯ : ಗ್ರಾಮ ಪಂಚಾಯತ್ ಬಾರ್ಯ ಮತ್ತು ಕನಸು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಬಾರ್ಯ ಮತ್ತು ಇಂಚರ ಫೌಂಡೇಶನ್ ಪುತ್ತೂರು ಇವರ ಸಹಯೋಗದೊಂದಿಗೆ ಮಾನಸಿಕ ಆರೋಗ್ಯದ ಅರಿವು ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಕೆ ಉಸ್ಮಾನ್ , ಪಂಚಾಯತ್ ಕಾರ್ಯದರ್ಶಿಯಾದ ಶ್ರೀಮತಿ ಶೀಲಾ ಮತ್ತು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚೈತ್ರ ಮತ್ತು ಕಾರ್ಯದರ್ಶಿಯಾದ ವಿನೋದ, ತಾಲೂಕು ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಇಂಚರ ಫೌಂಡೇಶನ್ ಆಪ್ತ ಸಮಾಲೋಚಕಿ ಶ್ರೀಮತಿ ಸೌಮ್ಯ ಅವರು ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸಿದರು..ಅವರು ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಹಾಗೂ ಮಕ್ಕಳ ಮತ್ತು ಹದಿಹರೆಯದ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಲು ಸಲಹೆಗಳನ್ನು ನೀಡಿದರು. ಕಾರ್ಯಕ್ರಮ ಸಂಯೋಜಕರಾಗಿ ಅನುಶ್ರೀ ಗ್ರೀಷ್ಮಯಂ, ಲತಿಕಾ ನಾಸಿರ್ ಸುಶ್ಮಿತಾ ಎಂ ಕೆ. ಕಾರ್ಯಕ್ರಮದಲ್ಲಿ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

Related posts

ಕಳೆಂಜ: ಮಾಪಳದಡ್ಡ ಚಂದ್ರಾವತಿರಿಗೆ ಶ್ರೀ ಕ್ಷೇ. ಧ.ಗ್ರಾ. ಯೋಜನೆಯಿಂದ ಮಾಶಾಸನ ಮಂಜೂರು ಪತ್ರ ವಿತರಣೆ

Suddi Udaya

ಬೈಕ್‌ಗಳ ನಡುವೆ ಭೀಕರ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ

Suddi Udaya

ಹಿರಿಯ ಸಾಹಿತಿ ಕೆ.ಟಿ ಗಟ್ಟಿ ನಿಧನ

Suddi Udaya

ನಿಡ್ಲೆ: ಮುಳಂಪಾಯ ಲಕ್ಷ್ಮಿ ದೇವಧರ್ ನಿಧನ

Suddi Udaya

ಕುಕ್ಕೇಡಿ ಗ್ರಾ.ಪಂ. ನಲ್ಲಿ ಆರ್ ಟಿ ಸಿ ಗೆ ಆಧಾರ್ ಜೋಡಣಾ ಕಾರ್ಯಕ್ರಮ: ತಹಸೀಲ್ದಾರ್ ಪೃಥ್ವಿ ಸಾನಿಕಾಂ ಭೇಟಿ, ಪರಿಶೀಲನೆ

Suddi Udaya

ಉಜಿರೆ ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Suddi Udaya
error: Content is protected !!