32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ “ಪರೋಪಕಾರ ಸಪ್ತಾಹ”

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇದರ ಶಾಲಾ ಆವರಣದಲ್ಲಿ ದತ್ತಿ ಸಪ್ತಾಹವನ್ನು ಅ.13 ರಿಂದ 18 ರವರೆಗೆ ಬಹಳ ಉತ್ಸಾಹ ಮತ್ತು ದಯೆಯ ಮನೋಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಶಾಲಾ ಪ್ರಾಂಶುಪಾಲರಾದ ವಂ|ಫಾ ವಿಜಯ್ ಲೋಬೊ ಅವರ ಕನಸಾಗಿದ್ದುಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ವಿದ್ಯಾರ್ಥಿಗಳು ಕರುಣೆಯನ್ನು ತೋರಿಸಲು ಮತ್ತು ಸಹಾಯಹಸ್ತ ಚಾಚಲು ಪ್ರೋತ್ಸಾಹಿಸುತ್ತದೆ.“ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಲ್ಲಿ ಪರೋಪಕಾರ ಮಾಡುವ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಮೂಡಿದರೆ ಮುಂದಕ್ಕೆ ಅವರ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಖಂಡಿತ ಸಾಧ್ಯವೆಂದು” ಶಾಲಾ ಸಂಚಾಲಕರಾದ ಫಾ| ಅಬೆಲ್ ಲೋಬೊ ಅವರು ಹೇಳಿದರು.

ಪ್ರತಿದಿನ ಬೆಳಿಗ್ಗೆ ವಿದ್ಯಾರ್ಥಿಗಳು ಅಕ್ಕಿ ಬೇಳೆಕಾಳುಗಳು ದವಸ ಧಾನ್ಯಗಳು ದಿನಸಿ ಸಾಮಗ್ರಿಗಳು ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಸ್ತುಗಳನ್ನುಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಉಜಿರೆ, ಸಿಯೋನ್ ಆಶ್ರಮ ಗಂಡಿಬಾಗಿಲು, ದಯಾ ಸ್ಪೆಷಲ್ ಸ್ಕೂಲ್ ಬೆಳ್ತಂಗಡಿ, ನವಚೇತನ ಸ್ಪೆಷಲ್ ಸ್ಕೂಲ್ ವೇಣೂರು, ಅನುಗ್ರಹ ವೃದ್ಧಾಶ್ರಮ ಬೆಳ್ತಂಗಡಿಈ ಸಂಸ್ಥೆಗಳಿಗೆ ವಿತರಿಸಲಾಯಿತು.

ದಾನ ಎಂದರೆ ಕೇವಲ ಹಣವನ್ನು ನೀಡುವುದಲ್ಲ, ಬದಲಿಗೆ ಅಗತ್ಯವಿರುವವರೊಂದಿಗೆ ಪ್ರೀತಿ, ಕಾಳಜಿ ಮತ್ತು ಸಮಯವನ್ನು ಹಂಚಿಕೊಳ್ಳುವುದೆಂದು ಅರ್ಥಮಾಡಿಕೊಳ್ಳಲು ಈ ವಾರ ಎಲ್ಲರಿಗೂ ಸಹಾಯ ಮಾಡಿತು. ಇದು ನಿಜವಾಗಿಯೂ ಅರ್ಥಪೂರ್ಣ ಅನುಭವವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ.

Related posts

ತೆಂಕಕಾರಾಂದೂರು ಗ್ರಾಮದಲ್ಲೊಂದು ಕೇಳುವವರಿಲ್ಲದ ಅಂಬೇಡ್ಕರ್ ಭವನ: ಗಾಳಿ ಮಳೆಗೆ ಮೇಲ್ಛಾವಣಿ ಕುಸಿದರು ಗಮನಿಸಿದ ಸಂಬಂಧಪಟ್ಟ ಇಲಾಖೆ: ನೂತನ ಅಂಬೇಡ್ಕರ್ ಭವನ ನಿರ್ಮಿಸಿ ಅಥವಾ ದುರಸ್ತಿಗೊಳಿಸುವಂತೆ ಅಶ್ರಫ್ ಕಟ್ಟೆಯವರಿಂದ ಮನವಿ

Suddi Udaya

ಮಾ 26-29: ಕೊಕ್ರಾಡಿಯ ಬಾಕ್ಯಾರು ಹೇರ್ದಂಡಿ ಗರಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ, ನೇಮೋತ್ಸವ

Suddi Udaya

ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬ್ರಹ್ಮಶ್ರೀ‌ ನಾರಾಯಣ ಗುರು ‌ಕುಣಿತ ಭಜನಾ ತಂಡ‌ ಉದ್ಘಾಟನೆ

Suddi Udaya

ಸುಜಾತಾ ಭಟ್ ನೀಡಿದ ನಾಪತ್ತೆ ಪ್ರಕರಣ: ಎಸ್ಐಟಿ ಕಚೇರಿಗೆ ಹಾಜರಾದ ವಸಂತಿ ಸಹೋದರ ವಿಜಯ್

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ. ಕುಶಾಲಪ್ಪ ಗೌಡ, ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ ಆಯ್ಕೆ

Suddi Udaya
error: Content is protected !!