25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರಶಾಂತ್ ಲಾೖಲ ರವರಿಗೆ ಜೆಸಿಐ ಭಾರತದ ವಲಯ 15 ರ ಅತ್ಯುನ್ನತ “ಕಮಲ ಪತ್ರ” ಪ್ರಶಸ್ತಿ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷರಾದ ಜೇಸಿ ಪ್ರಶಾಂತ್ ಲಾೖಲ ಇವರ ಜೇಸಿ ಮತ್ತು ಜೇಸಿಯೇತರ ಸೇವೆಗಳನ್ನು ಪರಿಗಣಿಸಿ ಜೆಸಿಐ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ “ಕಮಲ ಪತ್ರ” ಪ್ರಶಸ್ತಿಯನ್ನು ಜೆಸಿಐ ವಲಯ 15ರ ವಲಯ ಸಮ್ಮೇಳನದಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ಸಮ್ಮೇಳನದ ಸಭಾಧ್ಯಕ್ಷ, ವಲಯ 15 ರ ವಲಯಾಧ್ಯಕ್ಷ ಜೆಸಿಐ ‌ಸೆನೆಟರ್ ಅಭಿಲಾಷ್ ಬಿಎ ಹಾಗೂ ಇತರೆ ಗಣ್ಯರ ಸಮಕ್ಷಮದಲ್ಲಿ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್ ಭಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಪ್ರಶಾಂತ್ ಲಾೖಲ ಇವರು 2012 ರಲ್ಲಿ ಜೆಸಿಐ ಬೆಳ್ತಂಗಡಿ ಮೂಲಕ ಘಟಕದ ವಿವಿಧ ಜವಾಬ್ದಾರಿ ನಿರ್ವಹಿಸಿ 2019 ರಲ್ಲಿ ಜೆಸಿಐ ಬೆಳ್ತಂಗಡಿ ಇದರ ಅಧ್ಯಕ್ಷನಾಗಿ ಮೂಡಿಬಂದವರು. 2022 ರಲ್ಲಿ ಜೆಸಿಐ ವಲಯ 15 ರ ವಲಯ ಉಪಾಧ್ಯಕ್ಷನಾಗಿ ಚುನಾಯಿತರಾಗಿ 2023 ರಲ್ಲಿ ವಲಯ 15 ಆಡಳಿತ ವಿಭಾಗದ ನಿರ್ದೇಶಕರಾಗಿ ತನ್ನ ಹುದ್ದೆಗೆ ನ್ಯಾಯ ಕೊಟ್ಟವರು. 2025 ನೇ ಸಾಲಿನ ವಲಯಾಧ್ಯಕ್ಷ ಸ್ಥಾನಕ್ಕೆ ಪೈಪೊಟಿ ನೀಡಿ ಕೊನೆಯ ಗಳಿಗೆಯಲ್ಲಿ ನಾಮಪತ್ರ ಹಿಂಪಡೆಯುವ ಮೂಲಕ ಇನ್ನೊಬ್ಬರಿಗೆ ಅವಕಾಶ ಮಾಡಿಕೊಟ್ಟವರು.

‘ಕಮಲ ಪತ್ರ’ ಪ್ರಶಸ್ತಿ ಎಂಬುದು ಜೂನಿಯರ್ ಛೇಂಬರ್ ಇಂಟರ್ನ್ಯಾಷನಲ್, ಇಂಡಿಯಾ ಸಂಸ್ಥೆಯಿಂದ ನೀಡಲ್ಪಡುವ ಒಂದು ಅತ್ಯುನ್ನತ ಗೌರವವಾಗಿದೆ. ಇದು ಜೆಸಿಐ ಇಂಡಿಯಾದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದು ಆಗಿದ್ದು, ಅಸಾಧಾರಣ ಸಾಧನೆಗಳನ್ನು ಮಾಡಿದ ಹಾಗೂ ಜೆಸಿಐ ಚಳವಳಿಗೆ ತಮ್ಮ ಸಮರ್ಪಣೆಯನ್ನು ತೋರಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಈ ವರ್ಷದ ‘ಕಮಲ ಪತ್ರ’ ಪ್ರಶಸ್ತಿ ಜೆಸಿಐ ಬೆಳ್ತಂಗಡಿಯ ಒಬ್ಬ ನೈಜ ಜೇಸಿಗೆ ಲಭಿಸಿರುವುದು ಹೆಮ್ಮೆಯ ಸಂಗತಿ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೆಸಿಐ ಭಾರತದ ರಾಷ್ಟ್ರೀಯ ಹಾಗೂ ವಲಯದ ನಾಯಕರುಗಳು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಸಾವಿರಕ್ಕೂ ಹೆಚ್ಚಿನ ಜೇಸಿ ಸದಸ್ಯರು ಜೆಸಿಐ ಬೆಳ್ತಂಗಡಿ ನಿಕಟಪೂರ್ವಾಧ್ಯಕ್ಷ ಹಾಗೂ ವಲಯ ಉಪಾಧ್ಯಕ್ಷ ರಂಜಿತ್ ಎಚ್‌ಡಿ, ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಆಶಾಲತಾ ಪ್ರಶಾಂತ್, ಘಟಕದ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Related posts

ಕುವೆಟ್ಟು ಬೂತ್ 114ರಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

Suddi Udaya

ಶಾಸಕ ಹರೀಶ್ ಪೂಂಜ ಹಾಗೂ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ‘ದಸ್ಕತ್’ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

Suddi Udaya

ಮದ್ದಡ್ಕ ಎಸ್ ಡಿ ಪಿ ಐ ಸಂಸ್ಥಾಪನ ದಿನಾಚರಣೆ

Suddi Udaya

ಮುಂಡಾಜೆ ಸಿ ಎ ಬ್ಯಾಂಕ್ ನಿಂದ ಎನ್ ಎಸ್ ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಣೆ

Suddi Udaya

ಫೆ.8: ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ “ವಾಕ್-ಇನ್ ವಿದ್ವತ್”-ಎ ಸ್ಟೆಪ್ ಇಂಟು ಸಕ್ಸಸ್” :ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟನೆ

Suddi Udaya
error: Content is protected !!