32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

ಬೆಳ್ತಂಗಡಿ ರೋಟರಿ ಕ್ಲಬ್ ನಡೆಸಿದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಉಜಿರೆಯ ಶ್ರೀ ಧ.ಮ ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ನಡೆಯಿತು.

ರೋಟರೀ ಕ್ಲಬ್ ನ ಅಧ್ಯಕ್ಷ ರೊ. ಪ್ರೊ ಪ್ರಕಾಶ ಪ್ರಭು ಸ್ವಾಗತಿಸಿದರು. ವಲಯ ನಾಲ್ಕು (ಬಿ) ಅಸಿಸ್ಟೆಂಟ್ ಗವರ್ನರ್ ರೋ. ಡಾ ಎ. ಜಯಕುಮಾರ್ ಶೆಟ್ಟಿಯವರು ಉದ್ಛಾಟನೆ ಮಾಡಿದರು. ವಲಯ ನಾಲ್ಕು (ಡಿ) ಅಸಿಸ್ಟೆಂಟ್ ಗವರ್ನರ್ ರೋ. ಡಾ. ರಾಜಾರಾಮರು ಇಂದಿನ ಎಲ್ಲಾ ವರ್ಗದ ಜನರು, ಈ ಶಟಲ್ ಬ್ಯಾಡ್ಮಿಂಟನ್ ಆಟ ಆರೋಗ್ಯವನ್ನು ಕಾಪಾಡಲು ಹೇಗೆ ಸಹಕಾರಿ ಎಂದು ವಿವರಿಸಿದರು.

ವೇದಿಕೆಯಲ್ಲಿ ಕ್ಲಬ್ ವಿಸ್ತರಣಾ ಅಧ್ಯಕ್ಷೆ ರೋ| ಶ್ರುತಿ ಮಾರ್ಥಾ , ಜಿಲ್ಲಾ ಬ್ಯಾಡ್ಮಿಂಟನ್ ಚೆಯರ್ ಮ್ಯಾನ್ ಹಾಗೂ ರೋಟರೀ ಕ್ಲಬ್ ಪುತ್ತೂರು ಸಿಟಿಯ ಮಾಜಿ ಅಧ್ಯಕ್ಷ ರೋ. ಪ್ರಶಾಂತ್ ಶೆಣೈ, ಬೆಳ್ತಂಗಡಿ ರೋಟರಿ ಕ್ಲಬ್ ನ ಕ್ರೀಡಾ ಚೇರ್ ಮ್ಯಾನ್ ರೋ. ಆದರ್ಶ ಕಾರಂತ ಉಪಸ್ಥಿತರಿದ್ದರು. ಕಾರ್ಯದರ್ಶಿ ರೊ. ಡಾ ಎಂ ಎಂ ದಯಾಕರ್ ವಂದಿಸಿದರು.
ಒಟ್ಟು 14 ರೋಟರಿ ಕ್ಲಬ್ ಗಳ ರೋಟೇರಿಯನ್ಸ, ಆ್ಯನ್ಸ, ಆ್ಯನೆಟ್ಸಗಳಿಗೆ, ಸಿಂಗಲ್ಸ, ಡಬಲ್ಸ ಮತ್ತು ಮಿಕ್ಸೆಡ್ ಡಬಲ್ಸ – ಹೀಗೆ ವಯಸ್ಸಿಗೆ ಅನುಗುಣವಾಗಿ ಒಟ್ಟು 17 ವಿವಿಧ ವರ್ಗಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Related posts

ಪಡಂಗಡಿ ಗ್ರಾ.ಪಂ. ನಲ್ಲಿ ಕ್ರಿಯಾ ಯೋಜನೆ ತಯಾರಿ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya

ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ: ಮತ್ತೊಬ್ಬನ ಗುರುತು ಪತ್ತೆ ಹಚ್ಚಿದ ಎಸ್.ಐ.ಟಿ

Suddi Udaya

ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Suddi Udaya

ಇಂದಬೆಟ್ಟು ಪ್ರಕೃತಿ ಜ್ಞಾನವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಬೆದ್ರಬೆಟ್ಟು ರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!