September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಲವಂತಿಗೆ: ದಿಡುಪೆಯಲ್ಲಿ ಕೃಷಿ ತೋಟಗಳಿಗೆ ಕಾಡಾನೆಗಳ ದಾಳಿ : ಅಪಾರ ಕೃಷಿ ಹಾನಿ

ಮಲವಂತಿಗೆ: ಇಲ್ಲಿಯ ದಿಡುಪೆ ಪರಿಸರದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು, ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಉಂಟು ಮಾಡುತ್ತಿರುವ ಕುರಿತು ಸ್ಥಳಿಯರು ತಿಳಿಸಿದ್ದಾರೆ.

ಅ.25ರಂದು ರಾತ್ರಿ ಪನೋಡಿಬೈಲು ಪ್ರದೇಶದಲ್ಲಿ ಅಡಿಕೆ, ಬಾಳೆ ಸಹಿತ ಗದ್ದೆಗಳಿಗೆ ದಾಳಿ ಇಟ್ಟ ಕಾಡಾನೆಗಳ ಹಿಂಡು ಭಾರಿ ಪ್ರಮಾಣದಲ್ಲಿ ಕೃಷಿಹಾನಿ ಉಂಟುಮಾಡಿವೆ. ದಿಡುಪೆ ಪರಿಸರದ ಅಡ್ಡದಕೋಡಿ, ಪೂರ್ಜೆಬೈಲ, ಕಡಮಗುಂಡಿ, ಕುಮೇರು ಮೊದಲಾದ ಪರಿಸರಗಳಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ಪ್ರತಿದಿನ ನುಗ್ಗುತ್ತಿವೆ. ಸ್ಥಳೀಯರು ಹೇಳುವ ಪ್ರಕಾರ 10 ರಿಂದ 12 ಕಾಡಾನೆಗಳು ತೋಟಗಳಿಗೆ ದಾಳಿ ಇಡುತ್ತಿವೆ. ಈ ಪರಿಸರಗಳಲ್ಲಿ ಹಗಲು ಹೊತ್ತು ತಿರುಗಾಟ ನಡೆಸಲು ಭಯದ ವಾತಾವರಣ ಇದೆ.

ಇತ್ತೀಚಿನ ಕೆಲವು ದಿನಗಳ ಹಿಂದೆ 10ಕ್ಕಿಂತ ಅಧಿಕ ಕಾಡಾನೆಗಳು ಮೂಡಿಗೆರೆ ಕಡೆಯಿಂದ ಚಾರ್ಮಾಡಿ ಗ್ರಾಮದತ್ತ ಕಾಲಿಟ್ಟಿದ್ದವು. ಬಳಿಕ ಆನೆಗಳ ಹಿಂಡು ಇಲ್ಲಿಂದ ದಿಡುಪೆ ಪರಿಸರದತ್ತ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ದಿಡುಪೆ ಪರಿಸರದಲ್ಲಿ ಒಂಟಿ ಸಲಗ ಅಥವಾ ಮರಿಯಾನೆ ಸಹಿತ ಮೂರು ಕಾಡಾನೆಗಳು ಆಗಾಗ ಕಂಡುಬರುತ್ತವೆ. ಆದರೆ ಈ ಬಾರಿ ಹತ್ತರಿಂದ ಹೆಚ್ಚಿನ ಸಂಖ್ಯೆಯ ಆನೆಗಳು ತೋಟಗಳಿಗೆ ದಾಳಿ ನಡೆಸುತ್ತಿವೆ.

Related posts

ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ: ರಂಗ ಮಂಟಪ ಲೋಕಾರ್ಪಣೆ, ನವದುರ್ಗೆಯರ ಮೂರ್ತಿ ಪ್ರತಿಷ್ಠೆ, ದೇವರ ಪ್ರಭಾವಳಿ ಸಮರ್ಪಣೆ: ಇಂದು (ಫೆ.5) ನವ ಗುಳಿಗಗಳ ವಿಶೇಷ ಗಗ್ಗರ ಸೇವೆ

Suddi Udaya

ಅಭ್ಯಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫಾಕ್-೨೦೨೬

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಬಂದಾರಿನಲ್ಲಿ ಸಿಡಿಮದ್ದು ಸ್ಫೋಟಗೊಂಡು ಆಟವಾಡುತ್ತಿದ್ದ ಬಾಲಕನಿಗೆ ಗಾಯ

Suddi Udaya

ಮುಂಡಾಜೆ: ಕಾರುಗಳು ಮುಖಾಮುಖಿ ಡಿಕ್ಕಿ

Suddi Udaya

ವೇಣೂರು ಪಚ್ಚೇರಿ ಬಳಿ ಚಿರತೆ ಹಾವಳಿ: ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Suddi Udaya
error: Content is protected !!