September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಯನ್ಸ್ ಕ್ಲಬ್ ನಲ್ಲಿ ದೀಪಾವಳಿ ಆಚರಣೆ

ಬೆಳ್ತಂಗಡಿ: ಹಬ್ಬಗಳ ಪೈಕಿ ರಾಜನ ಸ್ಥಾನದಲ್ಲಿರುವ ಹಬ್ಬ ದೀಪಾವಳಿ. ಕತ್ತಲೆಯನ್ನು ಓಡಿಸುವ ಶಕ್ತಿ ಬೆಳಕಿಗಿದೆ. ಆದ್ದರಿಂದ ಅಂಧಕಾರ ತೊಲಗಿ‌ ಎಲ್ಲರ ಬಾಳಲ್ಲಿ ಹೊಸ ಬೆಳಕು ಮೂಡಲಿ. ಋಣಾತ್ಮಕತೆಯಿಂದ ಧನಾತ್ಮಕತೆಗೆ ಕೊಂಡೊಯ್ಯುವ ಬೆಳಕಿನ ಹಬ್ಬವೇ ಈ ದೀಪಾವಳಿ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಹೇಳಿದರು.

ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಬಲಿಪ ರೆಸಾರ್ಟ್ ಸಭಾಂಗಣದಲ್ಲಿ ಅ.28 ರಂದು ನಡೆದ ಸಾಮೂಹಿಕ ದೀಪಾವಳಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ ವಹಿಸಿದ್ದರು. ಉದ್ಘಾಟನೆಯ ವೇಳೆ ಮುರಳಿ ಬಲಿಪ ಅವರ ಮಾತೃಶ್ರೀಯವರು, ಧರ್ಮಪತ್ನಿ ಮನೋರಮಾ ಬಲಿಪ ಜೊತೆಯಾಗಿ ದೀಪ ಪ್ರಜ್ವಲನಗೊಳಿಸಿದರು.

ಶಿಕ್ಷಣ ಕ್ಷೇತ್ರದ ಸಾಧನೆಗೆ ಪ್ರಶಸ್ತಿ ಪಡೆದ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಮಿತಾನಂದ ಹೆಗ್ಡೆ ಅವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಲಿಯೋ ಕ್ಲಬ್ ಅಧ್ಯಕ್ಷೆ ಡಾ. ಭಾಷಿಣಿ ಪ್ರಾರ್ಥನೆ ಹಾಡುವುದರ ಜೊತೆಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ನಾಣ್ಯಪ್ಪ ನಾಯ್ಕ್ ಸ್ವಾಗತಿಸಿದರು. ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ನಿರೂಪಿಸಿದರು. ವಸಂತ ಶೆಟ್ಟಿ ಹಾಗೂ ಕೃಷ್ಣ ಆಚಾರ್ ಅತಿಥಿ ಮತ್ತು ಸನ್ಮಾನಿತರ ಪರಿಚಯ ಮಾಡಿದರು. ಉಪಾಹಾರದ ಪ್ರಾಯೋಜಕರಾದ ಜಯರಾಂ ಭಂಡಾರಿ ಧರ್ಮಸ್ಥಳ, ನಾಣ್ಯಪ್ಪ ನಾಯ್ಕ್ ಮತ್ತು ಕೃಷ್ಣ ಆಚಾರ್ ಅವರನ್ನು ಗೌರವಿಸಲಾಯಿತು.

ದೀಪಾವಳಿ ಪ್ರಯುಕ್ತ ರಂಗೋಲಿ ಬಿಡಿಸಲಾಯಿತು. ದೋಸೆ ಸಹಿತ ಇರುವ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಸ್ಪರ್ಧೆ ಇತ್ಯಾಧಿ ಆಟೋಟ ಸ್ಪರ್ಧೆಗಳನ್ನು ಮನೋರಂಜನಾತ್ಮಕವಾಗಿ ಆಚರಿಸಲಾಯಿತು. ಕೋಶಾಧಿಕಾರಿ ಅಮಿತಾನಂದ ಹೆಗ್ಡೆ ವಂದಿಸಿದರು.

Related posts

ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಗುರುವಾಯನಕೆರೆ ವ್ಯಾಪ್ತಿಯಲ್ಲಿ ದಾಖಲೆಗಳಿದ್ದ ಪರ್ಸ್ ಕಳೆದುಹೋಗಿದೆ: ಸಿಕ್ಕಿದ್ದಲ್ಲಿ ಹಿಂದಿರುಗಿಸುವಂತೆ ಮನವಿ

Suddi Udaya

ವಿ.ಹಿ.ಪಂ. ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ: ಸೆ.1 ರಂದು ಉಜಿರೆಯಲ್ಲಿ ಬೆಳ್ತಂಗಡಿ ಪ್ರಖಂಡ ಇದರ ನೇತೃತ್ವದಲ್ಲಿ ಬೃಹತ್ ಹಿಂದೂ ಸಮಾವೇಶ- ಆಕರ್ಷಕ ಶೋಭಾಯಾತ್ರೆ

Suddi Udaya

ದೆಹಲಿಯಲ್ಲಿ ಕೇಂದ್ರ ಸರ್ಕಾರದಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನೇಶನಲ್ ಅಕಾಡೆಮಿ ಆಫ್ ರುಡ್‌ಸೆಟಿ ಮಧ್ಯೆ ಒಪ್ಪಂದ ಪತ್ರಕ್ಕೆ ಸಹಿ

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ಹಿರಿಯ ಧರ್ಮಗುರು ಅಹ್ಮದ್ ಕುಂಞಿ ಮುಸ್ಲಿಯಾರ್ ಬೀಟಿಗೆ ನಿಧನ

Suddi Udaya
error: Content is protected !!