September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿ

ಕಾರು – ಬೈಕ್ ಅಪಘಾತ: ಬೈಕ್ ಸವಾರ ನಾವೂರಿನ ಚಂದ್ರಹಾಸ ಮೃತ್ಯು

ಧರ್ಮಸ್ಥಳ: ಇಲ್ಲಿಯ ಕನ್ಯಾಡಿ ಸಮೀಪ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಅ.೨೯ರಂದು ವರದಿಯಾಗಿದೆ.


ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ನಾವೂರಿನ ಹೊಡಿಕ್ಕಾರು ನಿವಾಸಿ ಕಬ್ಬಡಿ ಕ್ರೀಡಾಪಟು ಚಂದ್ರಹಾಸ(೨೮ವ) ಅವರಿಗೆ ತಲೆ ಹಾಗೂ ಕಾಲಿಗೆ ಬಲವಾದ ಗಾಯಗೊಂಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.


ಅವಿವಾಹಿತರಾದ ಅವರು ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು ಮನೆಯ ಆಧಾರಸ್ತಂಭವಾಗಿದ್ದು ತಂದೆ ಗಂಗಯ್ಯ, ತಾಯಿ ಕುಸುಮ ಹಾಗೂ ಇಬ್ಬರು ಸಹೋದರಿಯರಾದ ಲೀಲಾವತಿ, ಸುಮಲತಾರವರನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ : ರೆಂಕೆದಗುತ್ತು ನಿವಾಸಿ ಉದಯ ಪೂಜಾರಿ ನಿಧನ

Suddi Udaya

ಅಂಡಿಂಜೆ: ನೆಲ್ಲಿಂಗೇರಿ ನಿವಾಸಿ ವಿಶ್ವನಾಥ ಭಂಡಾರಿ ನಿಧನ

Suddi Udaya

ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಎಸೆದವರಿಂದಲೇ ತೆರವುಗೊಳಿಸಿ ದಂಡ ವಿಧಿಸಿದ ಪಡಂಗಡಿ ಗ್ರಾ.ಪಂ.

Suddi Udaya

ಅ.24: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಪುಂಜಾಲಕಟ್ಟೆ : ದಾಖಲೆ ಇಲ್ಲದೆ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ ರೂ.10 ಲಕ್ಷ ಹಣ ವಶ

Suddi Udaya

ಇಂದಬೆಟ್ಟು ಎಮ್.ಜೆ.ಎಮ್ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya
error: Content is protected !!