23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಮಹಿಳಾ ವೇದಿಕೆಯ ರಜತ ಸಂಭ್ರಮ

ಬಂಟ್ವಾಳ : ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಮಹಿಳಾ ವೇದಿಕೆಯ ರಜತ ಸಂಭ್ರಮ ಅ.26 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ವಿಜೃಂಭಣೆಯಿಂದ ನಡೆಯಿತು.


ಸಮ್ಮೇಳನದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಸ್ಥಾಪನಾಧ್ಯಕ್ಷೆ ಭಾರತಿ ಶ್ರೀಧರ್ ತುಂಬೆ ವಹಿಸಿದ್ದರು.
ವೇದಿಕೆಯ ಅಧ್ಯಕ್ಷೆ ಉಷಾ ಪ್ರಭಾಕರ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ವೇದಿಕೆಯು ನಡೆದುಬಂದ ದಾರಿಯನ್ನು ಮೆಲುಕು ಹಾಕಿದರು. ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ಅಧ್ಯಕ್ಷ ಕೆ ಎಸ್ ಕಾರಂತ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಸಂದೇಶ ನೀಡಿದರು. ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ. ಸುರೇಶ ತುಂಗ ‘ರಜತ ದೀವಿಗೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ವೇದಿಕೆಯ ಚಟುವಟಿಕೆಗಳನ್ನು ಶ್ಲಾಘಿಸಿದರು.

ನಿವೃತ್ತ ಅಧ್ಯಾಪಕಿ ಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೆತ್ತವರು ಮಕ್ಕಳಿಗೆ ನೀಡಬೇಕಾದ ಸಂಸ್ಕಾರ, ಕುಟುಂಬದ ಸಾಮರಸ್ಯದ ಬಗ್ಗೆ ಮತ್ತು ಈಗಿನ ಸಮಾಜದ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದರು.
ಸಮಾರಂಭದಲ್ಲಿ ವೇದಿಕೆಯ ಹಿಂದಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ವಿಶೇಷ ಸಾದಕರಿಗೆ ಹಾಗೂ ೮೦ ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಎಲ್ಲಾ ಆಹ್ವಾನಿತ ಅಂಗಸಂಸ್ಥೆಗಳ ಮಹಿಳಾ ವೇದಿಕೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಹಾಗೂ ಬೆಳ್ತಂಗಡಿ ಅಂಗ ಸಂಸ್ಥೆಯಿಂದ ಅನೇಕ ಮಹಿಳಾ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.


ಕಾರ್ಯಕ್ರಮವನ್ನು ವೇದಿಕೆಯ ಉಪಾಧ್ಯಕ್ಷೆ ಯಮುನಾ ಐಗಳ್ ಸ್ವಾಗತಿಸಿ, ಹೇಮಾ ಆರ್ ಮಯ್ಯ ಹಾಗೂ ಸರಸ್ವತಿ ಮಯ್ಯ ನಿರೂಪಿಸಿ, ಪವಿತ್ರ ವಿನಯ್ ಮಯ್ಯ ಧನ್ಯವಾದ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ವೇದಿಕೆಯ ಸದಸ್ಯೆಯರು ಅಭಿನಯಿಸಿದ ‘ನಾರೀ ಶಕ್ತಿ’ ಎಂಬ ನಾಟ್ಯ ರೂಪಕ ಜನಮನ ಗೆದ್ದು ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು.

Related posts

ಮುಂಡಾಜೆ : ಸಂವಿಧಾನ ಜಾಗೃತಿ ಜಾಥಾ

Suddi Udaya

ತಾಲೂಕು ಮಟ್ಟದ ಕ್ರೀಡಾಕೂಟ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಉಜಿರೆ: ರಾಜಾರಾಮ್ ಭಟ್ ನಿಧನ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು

Suddi Udaya

ಶಿಶಿಲ: ನಿಷೇಧಿತ ಪ್ರದೇಶದಲ್ಲಿ ರಾತ್ರಿ ಮೀನು ಹಿಡಿಯಲು ಬಂದವರನ್ನು ಪತ್ತೆ ಹಚ್ಚಿದ ಸ್ಥಳೀಯರು

Suddi Udaya

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಪುಸ್ತಕ ವಿತರಣೆ : ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ – ನಿವೃತ್ತ ಯೋಧರಿಗೆ ಗೌರವಾರ್ಪಣೆ

Suddi Udaya
error: Content is protected !!