ಬೆಳ್ತಂಗಡಿ: ಶೊರಿನ್ ರಿಯೋ ಕರಾಟೆ ಅಸೋಸಿಯೇಷನ್ ಹಾಗೂ ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಮತ್ತು ಎಂ.ಕೆ. ಅನಂತರಾಜು ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಮೂಡಬಿದ್ರೆಯ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಅ.25ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾಕೂಟದಲ್ಲಿ ಹಿಮಾನ್ಸ್ ರವರು ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದು, ಉಜಿರೆ ಶ್ರೀರಾಮ್ ತರಕಾರಿ ಅಂಗಡಿಯ ವಿಜಯ್ ಕುಮಾರ್ ಹಾಗೂ ಸುಮಾ ದಂಪತಿ ಪುತ್ರ. ಇವರಿಗೆ ಶಿಹಾನ್ ಅಬ್ದುಲ್ ರಹಮಾನ್ ರವರು ಕರಾಟೆ ತರಬೇತಿಯನ್ನು ನೀಡಿರುತ್ತಾರೆ.











