September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಲಾಡಿಯಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಬೆಳ್ತಂಗಡಿ: ಮಾಲಾಡಿ ಗ್ರಾಮದ ಕೊಲ್ಪೆದಬೈಲು ವ್ಯಾಪ್ತಿಯ ಹಿತ್ತಿಲಬೈಲು ಎಂಬಲ್ಲಿ ಪಂಚಾಯಿತಿ ವತಿಯಿಂದ ನಿರ್ಮಾಣವಾಗಿರುವ ನೂತನ ಹಿಂದೂ ರುದ್ರ ಭೂಮಿಯ ಲೋಕಾರ್ಪಣೆ ಕಾರ್ಯಕ್ರಮ ಅ.30 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ರಾವ್ ವೈಧಿಕ ವಿಧಿ ವಿಧಾನ ನೇರವೇರಿಸಿದರು.

ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್ ಮಾತನಾಡಿ 2023-24ನೇ ಸಾಲಿನ 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಕಟ್ಟಡದ ಕಾಮಗಾರಿಯನ್ನು ಪ್ರಾರಂಭಿಸಿದ್ದು ಮುಂದೆ ಮೂಲಭೂತ ಸೌಕರ್ಯಗಳಾದ ಕಟ್ಟಿಗೆ ದಾಸ್ತಾನು, ಸ್ನಾನಗೃಹ ಮತ್ತು ಶೌಚಾಲಯ ಹಾಗೂ ಸುತ್ತ ತಡೆಗೋಡೆ ನಿರ್ಮಾಣವಾಗಲಿದೆ. ಇಲ್ಲಿ ರುದ್ರಭೂಮಿ ನಿರ್ಮಾಣವಾಗಿರುವುದರಿಂದ ಮಾಲಾಡಿ ಹಾಗೂ ಸೋಣಂದೂರು ಗ್ರಾಮಗಳ ನಾಗರಿಕರಿಗೆ ಅನುಕೂಲವಾಗಿದೆ.

ಈ ಕಾಮಗಾರಿಗಳಿಗೆ ಸಂಘ ಸಂಸ್ಥೆಗಳ ಹಾಗೂ ದಾನಿಗಳನ್ನು ಸಹಕಾರವನ್ನು ಯಾಚಿಸುತ್ತಾ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಹಿಂದೂ ರುದ್ರ ಭೂಮಿ 1 ಎಕ್ರೆ 66 ಸೆಂಟ್ಸ್ ಜಾಗದಲ್ಲಿದ್ದು ಈಗಾಗಲೇ ಅಂದಾಜು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಹಿಂದೂ ರುದ್ರ ಭೂಮಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಉಪಾಧ್ಯಕ್ಷ ಸೆಲೆಸ್ತೀನ್ ಡಿಸೋಜ, ಗ್ರಾಮ ಪಂಚಾಯತ್ ಸದಸ್ಯರಾದ ಬೇಬಿ ಸುವರ್ಣ, ಸುಧಾಕರ್ ಆಳ್ವ, ಉಮೇಶ್, ಜಯಂತಿ, ವಸಂತ ಪೂಜಾರಿ, ಬೇಬಿ ಸುಸ್ಸಾನ, ವಿದ್ಯಾ ಪಿ.ಸಾಲಿಯಾನ್, ರುಬಿನಾ, ತುಳಸಿ ಬಿ. ಹಾಗೂ ಬೆನೆಡಿಕ್ಟ್ ಮಿರಾಂದ, ಪಿಡಿಒ ಕೆ.ರಾಜಶೇಖರ್ ರೈ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ , ರವಿಶಂಕರ್ ಶೆಟ್ಟಿ ಹಾಗೂ ಜಗನ್ನಾಥ ಶೆಟ್ಟಿ, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮತ್ತು ಕ್ಯಾಲೆಂಡರ್ ಬಿಡುಗಡೆ

Suddi Udaya

ಬೆಳ್ತಂಗಡಿ: ಮಾತೃ ವೃಂದ ಶಿಶುಪಾಲನ ಕೇಂದ್ರ ಉದ್ಘಾಟನೆ

Suddi Udaya

ಮುಂಡಾಜೆ: ವಿಶೇಷ ಚೇತನ ವಾರ್ಷಿಕ ದಿನಾಚರಣೆ ಅಂಗವಾಗಿ ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗದ ವತಿಯಿಂದ ಸಮನ್ವಯ ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ ಮಾಹಿತಿ ಕಾರ್ಯಾಗಾರ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನಗೈದು ಮಾದರಿಯಾದ ಅಳದಂಗಡಿಯ ಹೇಮಚಂದ್ರ

Suddi Udaya

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ: ಸುಮಾರು 65 ಬಗೆಯ ವಿವಿಧ ಖಾದ್ಯಗಳು

Suddi Udaya

ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ. 95.7 ಫಲಿತಾಂಶ

Suddi Udaya
error: Content is protected !!