ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಬೆಳ್ತಂಗಡಿ: ಮಾತೃ ವೃಂದ ಶಿಶುಪಾಲನ ಕೇಂದ್ರ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿಯ ಮಹಿಳಾ ವೃಂದ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಗೊಂಡ ಮಾತೃ ವೃಂದ ಶಿಶು ಪಾಲನ ಕೇಂದ್ರ ಉದ್ಘಾಟನಾ ಸಮಾರಂಭವು ಜೂ.2ರಂದು ಮಹಿಳಾ ವೃಂದ ಸಭಾಂಗಣದಲ್ಲಿ ನಡೆಯಿತು.

ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಗಂಧಿ ಮತ್ತು ಜಗನ್ನಾಥ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ನೇತ್ರ ಬಿ., ವಕೀಲರಾದ ಶೈಲೇಶ್ ಆರ್. ಠೋಸರ್ ಭಾಗವಹಿಸಿದರು.

ಈ ಸಂದರ್ಭದಲ್ಲಿ ವಕೀಲ ವೃಂದದವರು, ಪೋಷಕರು ಉಪಸ್ಥಿತರಿದ್ದರು.

ಮಾತೃ ವೃಂದ ಶಿಶುಪಾಲನ ಕೇಂದ್ರದ ಸಂಚಾಲಕಿ ಮಮತಾ ಪ್ರಭಾಕರ್ ಪ್ರಾರ್ಥಿಸಿದರು. ವಕೀಲರಾದ ಪ್ರಿಯಾಂಕ ಶಿವನ್ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಥಮ ಪ್ರಶಸ್ತಿ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನಿಯೋಗದಿಂದ ಹೈಕೋರ್ಟ್ ರಿಜಿಸ್ಟ್ರಾರ್ ರಾಧಾ ರವರ ಭೇಟಿ; ನೂತನ ನ್ಯಾಯಾಲಯ ಸಂಕೀರ್ಣ ಶಂಕು ಸ್ಥಾಪನೆಯ ರೂಪುರೇಷೆಗಳ ಬಗ್ಗೆ ಚರ್ಚೆ

Suddi Udaya

ಕಿಲ್ಲೂರು ದರ್ಖಾಸು ನಿವಾಸಿ ರಾಧಾಕೃಷ್ಣ ಆಚಾರ್ಯ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿಯಲ್ಲಿ ಅರಿಹಂತ್ ಜೈನ್ ಮಾಲೀಕತ್ವದ ಅಯಾನ್ಶ್ ಮೊಬೈಲ್ ಮಳಿಗೆ ನವೀಕರಣಗೊಂಡು ಶುಭಾರಂಭ

Suddi Udaya

ಪುತ್ತಿಲ ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಕೊಕ್ಕಡ: ಸಂಗಮ ಹಾಳೆತಟ್ಟೆ ಉತ್ಪಾದಕ ಘಟಕ ಉದ್ಘಾಟನೆ

Suddi Udaya
error: Content is protected !!