37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ನಶಾ ಮುಕ್ತ ಭಾರತ ಅಭಿಯಾನ ಕಾರ್ಯ ಕ್ರಮ

ಮುಂಡಾಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿಗಳ, ಸಹಯೋಗದೊಂದಿಗೆ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಅ.30 ರಂದು ವಿವೇಕಾನಂದ ವಿದ್ಯಾವರ್ಧಕ ಅನುದಾನಿತ ಪ್ರೌಡ ಶಾಲೆಯಲ್ಲಿ ನಡೆಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಗಣೇಶ್ ಬಂಗೇರ ರವರ ಉದ್ಘಾಟನೆ ನೆರವೇರಿಸಿ, ಮಾಹಿತಿ ಯೊಂದಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆದು ಮುಂದಿನ, ಪೀಳಿಗೆಗೆ ಪರಿಚಯಿಸುವ ಮಾದಕ ವಸ್ತುಗಳ ಸೇವನೆಗಳಿಂದ ದೂರ ಮಾಡುವ ಉತ್ತಮ ಸಮಾಜ ನಿರ್ಮಾಣಕ್ಕೆ ಮಕ್ಕಳ ಅಭಿವೃದ್ದಿ ಮನ ಪರಿವರ್ತನೆ ಗೆ ನೀತಿ ಬೋಧಕ ವಾಕ್ಯ ರಚನೆ ಮತ್ತು ಅರಿಯೂ ಮೂಡಿಸುವ ನಿಟ್ಟಿನಲ್ಲಿ ಬಿತ್ತಿ ಚಿತ್ರದ ಮೂಲಕ ರಚಿಸುವ ಸ್ಪರ್ಧೆ ಗಳನ್ನು ಏರ್ಪಡಿಸಿ ವಿಮರ್ಶೆ ಬರೆದು ಜಾಗೃತಿ ಕರಪತ್ರದೊಂದಿಗೆ ನಶಾ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ ವಿಧಿ ಸ್ವೀಕರಿಸಿ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ಸ್ಫರ್ಧೆ ಗಳಲ್ಲಿ ಜಾಗೃತಿ ಕರಪತ್ರ ದೊಂದಿಗೆ ವಿಚೇತ ರಿಗೆ ಬಹುಮಾನ ವಿತರಣೆ ಹಾಗೂ ಅರಿವು ಮಾಹಿತಿ ಕಾರ್ಯಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ದೈಹಿಕ ಶಿಕ್ಷಕ ಶೀನಪ್ಪ ಗೌಡ ಮತ್ತು ಸುರೇಶ ಮಕ್ಕಳಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ಜಾಗೃತಿ ಮೂಡಿಸಿದರು. ವಿದ್ಯಾವರ್ಧಕ ಪ್ರೌಡ ಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ರವರು ಅನಿಸಿಕೆ ವ್ಯಕ್ತ ಪಡಿಸಿದರು.
ಮುಂಡಾಜೆ, ಗ್ರಾಮ ಪಂಚಾಯತ್ ಪುನರ್ ವಸತಿ ಕಾರ್ಯ ವಿಭಾಗದ, ಮಜೀದ್ ರವರು ಪ್ರಸ್ತಾವನೆ ಗೈದು ಮಾದಕ ದ್ರವ್ಯ ಮತ್ತು ಮಕ್ಕಳ ಮೇಲೆ ಆಗುವ ದುಷ್ಪರಿಣಾಮ ಕುರಿತಾದ ಅಭಿಯಾನದ ಉದ್ದೇಶದ ಬಗ್ಗೆ ವಿವರಣೆ ನೀಡಿದರು. ಸಮಾಜ ಕಾರ್ಯ ವಿಭಾಗ ವಿಧ್ಯಾರ್ಥಿ ಗಳಾದ ವಿಜೇತ, ಯಶ್ಮಿತ, ಅಭಿಷೇಕ್, ಕೆ. ಬ್ಬರತ್, ವಂದಿತ ಪ್ರಭು, ಸಭಾ ನಡವಳಿಗಳನ್ನೂ, ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ವಿವೇಕಾನಂದ ವಿದ್ಯಾವರ್ಧಕ ಶಾಲಾ ಸಹ ಶಿಕ್ಷಕರು. ಸಿಬ್ಬಂದಿಗಳು ಉಪಸ್ಥಿತರಿದ್ದು,ಸಹಕರಿಸಿದರು.
ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗ ಗ್ರಾಮ ಪಂಚಾಯಿತಿ ಮುಂಡಾಜೆ ಹಾಗೂ ಯಂಗ್ ಚಾಲೆಂಜರ್ಸ್ ವತಿಯಿಂದ
ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ವಿಶೇಷ ಸಹಕಾರ ಅಗತ್ಯ ನೆರವು ನೀಡುವ ಮೂಲಕ ಜಾಗೃತಿ ಮೂಡಿಸಿದರು.

Related posts

ರಾಜ್ಯಮಟ್ಟದ ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ

Suddi Udaya

ನಡ: ಹೊಕ್ಕಿಲ ನಿವಾಸಿ ಕುಸುಮ ನಿಧನ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯಿಂದ ಉದ್ಯಮದೊಂದಿಗೆ ಸಮಾಜಮುಖಿ ಸೇವೆ:

Suddi Udaya

ಮೇ.8(ನಾಳೆ): ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ರವರಿಂದ ಬೃಹತ್ ರೋಡ್ ಶೋ ಮತ್ತು ಮತ ಯಾಚನೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya
error: Content is protected !!