25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಒಕ್ಕಲೆಬ್ಬಿಸಿದ ಕ್ರಮಕ್ಕೆ ಬೆಳ್ತಂಗಡಿಯ ಕರ್ನಾಟಕ ಸೀರೋ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್ ನಿಂದ ಖಂಡನೆ

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಜೋಸೆಫ್ ಕುಟುಂಬ ಕಳೆದ 50 ಕ್ಕಿಂತ ಹೆಚ್ಚು ವರ್ಷಗಳು ವಾಸಿಸುತ್ತಿದ್ದು ಸರಕಾರ ಸಾಗುವಳಿಚೀಟಿ ನೀಡಿದ ಕೃಷಿ ಸ್ಥಳವನ್ನು ಅರಣ್ಯ ಪ್ರದೇಶ ಎಂಬ ಹೆಸರಿನಲ್ಲಿ ಏಕಾ ಏಕಿ ಒಕ್ಕಲೆಬ್ಬಿಸುವ ಕ್ರಮ ಕೃಷಿಕರಿಗೆ ಮಾಡಿದ ಅನ್ಯಾಯ ಎಂದು ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಆರೋಪಿಸಿದೆ.

ಬಿಟ್ಟಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಸೇರಿ ಈ ಖಂಡನಾ ನಿರ್ಣಯವನ್ನು ಮಾಡಿದೆ. ನಿರ್ದೇಶಕರಾದ ರೆ| ಫಾ| ಆದರ್ಶ್ ಜೋಸೆಫ್ ಮಾತನಾಡಿ ಬಡ ಕೃಷಿಕರನ್ನು ಒಕ್ಕಲೆಬ್ಬಿಸುವ ಸರಕಾರದ ಇಂಥ ಹೀನಾಕೃತ್ಯಗಳು ಕೂಡಲೇ ನಿಲ್ಲಿಸದಿದ್ದಲ್ಲಿ ಕೃಷಿಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಸಂಬಂಧ ಪಟ್ಟ ಇಲಾಖೆಗಳು ಈ ಬಗ್ಗೆ ಎಚ್ಚೆತ್ತು ಅನ್ನದಾತರನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಮಲಯಾಟ್ಟಿಲ್ ಅನೇಕ ವರ್ಷಗಳಿಂದ ಕೃಷಿ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದ ಈ ಬಡವರನ್ನು ಬೀದಿಗಿಳಿಸಿದ್ದು ಅನ್ಯಾಯದ ಪರಮೋನ್ನತಿ ಎಂದು ಹೇಳಿದರು. ಅಧ್ಯಕ್ಷರು ಮಾತನಾಡುತ್ತಾ, ನಮಗೆ ವಿಷಯ ತಿಳಿದದ್ದು ಕೊನೆಯ ಗಳಿಗೆಯಲ್ಲಿ ಆದರೂ ಎಲ್ಲಾ ಅಧಿಕಾರಿಗಳಿಗೂ ರಾಜಕೀಯ ಮುಖಂಡರುಗಳಿಗೂ ವಿಷಯ ತಿಳಿಸಿ ಒಕ್ಕಲೆಬ್ಬಿಸುವ ಕಾರ್ಯ ತಡೆಹಿಡಿಯಬೇಕೆಂದು ವಿಂತಿಸಿಕೊಂಡರು ಸಮಯ ಮೀರಿತ್ತು ಇನ್ನು ಏನೂ ಮಾಡಲು ಸಾಧ್ಯ ಇಲ್ಲ ಎಂಬ ಉತ್ತರ ಸಿಕ್ಕಿರುತ್ತದೆ. ಈ ಬಗ್ಗೆ ಸರಕಾರಕ್ಕೆ ತಿಳಿಸಿ ಒಕ್ಕಲೆಬ್ಬಿಸುವ ಕಾರ್ಯ ನಿಲ್ಲಿಸಲು ಪತ್ರ ಬರೆಯಲಾಗುವುದು ಎಂದು ಹೇಳಿದರು.

ಜಿಮ್ಸೆನ್ ಗುಂಡ್ಯ, ಪಿ. ಆರ್. ಓ. ಸೆಬಾಸ್ಟಿಯನ್ ಪಿ ಸಿ, ಜಾಗತಿಕ ಸಮಿತಿ ಕಾರ್ಯದರ್ಶಿ ಜೇಸನ್ ಪಟೆರಿಲ್, ಕೇಂದ್ರ ಸಮಿತಿ ಸದಸ್ಯರಾದ ಅಲ್ಪೋನ್ಸ ,ರೀನಾ ಸಿಬಿ, ಜಾರ್ಜ್ ಟಿ ವಿ., ಮುಂತಾದವರು ಪಾಲ್ಗೊಂಡರು.

Related posts

ಕೊಕ್ಕಡ ಜೇಸಿಐ ಕಪಿಲಾ ಘಟಕದಿಂದ ಶ್ರೀಧರ ರಾವ್ ಕೆ. ರವರಿಗೆ “ಕಪಿಲಾಶ್ರೀ 2025” ಪ್ರಶಸ್ತಿ

Suddi Udaya

ಅರಸಿನಮಕ್ಕಿ, ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮಾದರಿ ಕಾರ್ಯ

Suddi Udaya

ಉಜಿರೆ: ಎಸ್ ಡಿ ಎಂ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ನಡ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಹೊಸಂಗಡಿ ಹಿಂದೂ ರುದ್ರ ಭೂಮಿಯಲ್ಲಿ ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya

ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆ

Suddi Udaya
error: Content is protected !!