22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ: ಸ್ಟಾರ್ ಲೈನ್ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ ಸ್ಟಾರ್ ಲೈನ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಜನಾಬ್ ಸೈಯದ್ ಹಬೀಬ್ ಸಾಹೇಬ್ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಕಾರ್ಯದರ್ಶಿಯಾದ ಸೈಯದ್ ಅಯ್ಯುಬ್ , ಕೋಶಾಧಿಕಾರಿ ಸಯ್ಯದ್ ಇರ್ಫಾನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಉಪಸ್ಥಿತರಿದ್ದರು. ಶಾಲೆಯ ಕನ್ನಡ ಶಿಕ್ಷಕಿ ಕುಮಾರಿ ಶ್ವೇತ ರಾಜ್ಯೋತ್ಸವದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಅತಿಥಿಗಳಿಗೆ ಧನ್ಯವಾದವನ್ನು ಕೋರಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸುಂದರ್ ಕಾರ್ಯಕ್ರಮ ನಿರೂಪಿಸಿದರು.

Related posts

ಕನ್ಯಾಡಿ ರಾಮ ಕ್ಷೇತ್ರದಲ್ಲಿ ನವರಾತ್ರಿಯ ವಿಶೇಷ ಪೂಜೆ

Suddi Udaya

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ: ದೇವರಿಗೆ ಪಂಚಾಮೃತ ಅಭಿಷೇಕ

Suddi Udaya

ಲಾಯಿಲ: ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಚಾರ್ಮಾಡಿ ಬೀಟಿಗೆಯಲ್ಲಿ ರಸ್ತೆ ದಾಟುತ್ತಿದ್ದ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಬಾಲಕ ಮೃತ್ಯು

Suddi Udaya

ಬೆಳಾಲು ನಿವೃತ್ತ ಶಿಕ್ಷಕನ ಬರ್ಬರ ಕೊಲೆ ಪ್ರಕರಣ: ಸ್ಥಳಕ್ಕೆ ಎಸ್ಪಿ ಸೇರಿದಂತೆ ವಿವಿಧ ತಂಡದಿಂದ ತನಿಖೆ

Suddi Udaya

ನಿಡ್ಲೆ ಸ.ಪ್ರೌ. ಶಾಲೆಗೆ ಶೇ. 100 ಫಲಿತಾಂಶ: ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!