24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಡಾ. ಭೋಜಮ್ಮ ಕೆಎನ್ ದೀಪ ಬೆಳಗಿಸಿ ಮಾತನಾಡಿ ಕನ್ನಡ ಭಾಷೆಯ ಮಹತ್ವ ಹಾಗೂ ಕನ್ನಡ ಉಳಿವಿಗಾಗಿ ಮುಂದಿನ ಯುವ ಪೀಳಿಗೆ ಸಂಸ್ಕೃತಿ , ಸಂಸ್ಕಾರಗಳಿಗೆ ,ಪ್ರಾಧ್ಯಾನತೆ ಕೊಡಬೇಕು ಎಂಬುದನ್ನು ತಿಳಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು.

ಮಕ್ಕಳಿಗೆ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ, ಸಾಂಸ್ಕೃತಿಕ ಕಾರ್ಯಕ್ರಮ ಗಾದೆ ಮಾತುಗಳು ಸುಂದರ ಕೈಬರಹ, ಒಗಟುಗಳು, ಪದ್ಯ ರಚನೆ, ನೃತ್ಯ, ರಸಪ್ರಶ್ನೆ, ಗುಂಪು ಗೀತ ಗಾಯನ, ಭಾಷಣ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಅಂಜಲಿ ಸ್ವಾಗತಿಸಿ, ದಿಶಾ ಪಿ ಶೆಟ್ಟಿ ಧನ್ಯವಾದವಿತ್ತರು. ಲಾಸ್ಯ ಅತಿಥಿ ಪರಿಚಯವನ್ನುಮಾಡಿದರು. ಅನಘ ಮರಾಠೆ ನಿರೂಪಿಸಿದರು.
‌ ‌‌ ‌ ಶಿಕ್ಷಕರುಗಳಾದ ಸೌಮ್ಯ ಪಿ, ನೀತಾ ಕೆ.ಎಸ್, ಶ್ರೇಯಾಂಸ ಜೈನ್, ಸಹನಾ, ಅಮಿತಾ ಪ್ರವೀಣ್ ಎನ್ ರವರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕ / ಕಿಯರ ಸಹಕರಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚರ್ಮರೋಗ ತಪಾಸಣಾ ಶಿಬಿರ : 200 ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗಿ

Suddi Udaya

ಜನರ ನೆಮ್ಮದಿ ಕೆಡಿಸಿದೆ ನೆಮ್ಮದಿ ಕೇಂದ್ರ: ಶೀಘ್ರವೇ ಬಾಜರು – ಜೋಡುಕಟ್ಟೆ ರಸ್ತೆ ದುರಸ್ತಿ – ಶಾಸಕ ಹರೀಶ್ ಪೂಂಜ

Suddi Udaya

ವಾಲಿಬಾಲ್ ಪಂದ್ಯಾಟ; ರಕ್ಷಿತಾ ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ’ ಪ್ರಶಸ್ತಿ

Suddi Udaya

ಬೆಳ್ತಂಗಡಿ: ತಾಲೂಕು ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya

ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ಕನಕದಾಸ ಜಯಂತಿಯ ಆಚರಣೆ

Suddi Udaya
error: Content is protected !!