ಅಭಿನಂದನೆಬೆಳ್ತಂಗಡಿವರದಿ

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೇದೆ ಸುಬ್ಬ ಪೂಜಾರಿ, ಮಿತ್ತಮಾರು ಬಿರ್ಮಣ್ಣ ಪೂಜಾರಿ, ಕುಂಜೀರ ಯಾನೆ ಸಿದ್ದಪ್ಪ ಪೂಜಾರಿ,ಸಮಾಜದ ಹಿರಿಯರು,ಮಾಜಿ ಶಾಸಕ ಕೆ.ವಸಂತ ಬಂಗೇರರವರು ಸೇರಿ ಸ್ಥಾಪಿಸಿದ ಸಂಘ ಬ್ರಹ್ಮಶ್ರೀ ನಾರಾಯಣ ಗುರುಗಳ ತಥವ ಸಿದ್ದಾಂತಕ್ಕೆ ಅನುಗುಣವಾಗಿ ಸಮಾಜಮುಖಿ ಸೇವಾ ಕಾರ್ಯ

ಬೆಳ್ತಂಗಡಿ: ಮಂಗಳೂರಿನ ನೆಹರೂ ಮೈದಾನದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯಾತಿ ಗಣ್ಯರು ಸೇರಿಕೊಂಡು ಪ್ರಧಾನ ಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸಮಾಜ ಸೇವೆಯಲ್ಲಿ ಮಂಚೂಣಿಯಲ್ಲಿ ಇರುವ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ)ಬೆಳ್ತಂಗಡಿಗೆ ಈ ಬಾರಿ ಲಭಿಸಿದೆ.

ಬ್ರಹ್ಮ ಶ್ರೀ ನಾರಾಯಣ ಗುರುಗಳ “ಒಂದೇ ಜಾತಿ,ಒಂದೇ ಮತ,ಒಬ್ಬನೇ ದೇವರು” ಎಂಬ ತತ್ವದಡಿಯಲ್ಲಿ “ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ “ ಎಂಬ ದ್ಯೇಯ ವಾಕ್ಯಕ್ಕೆ ಅನುಗುಣವಾಗಿಕೇದೆ ಸುಬ್ಬ ಪೂಜಾರಿ,ಮಿತ್ತಮಾರು ಬಿರ್ಮಣ್ಣ ಪೂಜಾರಿ,ಕುಂಜೀರ ಯಾನೆ ಸಿದ್ದಪ್ಪ ಪೂಜಾರಿ ಹಾಗೂ ತಾಲೂಕಿನ ಸಮಾಜದ ಹಿರಿಯರು ಸೇರಿ ಸ್ಥಾಪಿಸಿದ ಸಂಘವು ನಂತರ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರು,ಸಂಘದ ಗೌರವಾಧ್ಯಕ್ಷರಾದ ದಿ.ಕೆ.ವಸಂತ ಬಂಗೇರರೂ ಬೆಳ್ತಂಗಡಿಯ ಹೃದಯ ಭಾಗದಲ್ಲಿ ತನಗೆ ಬಂದಂತಹ ನಿವೇಶನವನ್ನು ಸಂಘದ ಹೆಸರಿಗೆ ದಾಖಲಿಸಿ ಅದರಲ್ಲಿ ಬಂದಂತಹ ಆದಾಯವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ,ವಿದ್ಯಾರ್ಥಿ ವೇತನವನ್ನು ನೀಡಿ,ಅನಾರೋಗ್ಯ ಪೀಡಿತರಿಗೆ “ಸಾಂತ್ವನ ನಿಧಿ” ವಿಶೇಷ ಚೇತನರಿಗೆ ವ್ಹೀಲ್ ಚಯರ್,ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ ಪರಿಹಾರ,ರಕ್ತ ದಾನ ಶಿಬಿರ,ಮೆಡಿಕಲ್ ಕ್ಯಾಂಪ್ ಗಳನ್ನು ನಡೆಸಿ ,ಗುರು ಜಯಂತಿ ಹಾಗೂ ಮಹಿಳಾ ದಿನಾಚರಣೆ ಮತ್ತು ಆಟಿದ ಕೂಟವನ್ನು ಆಯೋಜಿಸಿ ,ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಮಾರ್ಗದರ್ಶನ ಹಾಗೂ ಸಮಾಜ ಭಾಂಧವರಿಗೆ ಕ್ರೀಡಾ ಕೂಟ ಮತ್ತು ಯುವಕ ಯುವತಿಯರ ವಧು -ವರ ಅನ್ವೇಷಣಾ ಕಾರ್ಯಕ್ರಮ ,ನಾಟಿ ವೈದ್ಯರಿಗೆ ಸನ್ಮಾನ,ವೈದಿಕರ(ಶಾಂತಿ)ಸಮ್ಮೇಳನ,ದೈವಗಳ ಪಾತ್ರಿಗಳಿಗೆ ಅಭಿನಂದನಾ ಸಮಾರಂಭ ,ಮೂರ್ತೆದಾರರ ಗುರುತಿಸುವಿಕೆ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಸಂಘದ ಮಾಜಿ ಅದ್ಯಕ್ಷರುಗಳು ಹಾಗೂ ನಿರ್ದೇಶಕರು,ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ವೇದಿಕೆ ಅದ್ಯಕ್ಷರು ಹಾಗೂ ಸದಸ್ಯರ ಸಹಕಾರದಿಂದ ಪ್ರಸ್ತುತ ಅಧ್ಯಕ್ಷರಾದ ಜಯವಿಕ್ರಮ್ ಕಲ್ಲಾಪು ಮತ್ತುಎಲ್ಲಾ ನಿರ್ದೇಶಕರ ಮತ್ತು ಸದಸ್ಯರ ಸಹಕಾರದಿಂದ ಮುನ್ನಡೆಯುತ್ತಿದೆ.

Related posts

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಧರ್ಮಸ್ಥಳದಲ್ಲಿ ಶಾಖೆ ಪ್ರಾರಂಭ; ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ

Suddi Udaya

ತೆಕ್ಕಾರು ಶ್ರೀ ಕ್ಷೇತ್ರ ದೇವರಗುಡ್ಡೆ ಗೋಪಾಲಕೃಷ್ಣನಿಗೆ ಬ್ರಹ್ಮಕಲಶೋತ್ಸವ

Suddi Udaya

ಡಿಸಿ ಮನ್ನಾ ಜಮೀನು ಹಂಚಿಕೆ,: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಹಾಗೂ ಸಚಿವ ಯು.ಟಿ ಖಾದರ್ ರವರನ್ನು ಭೇಟಿಯಾದ ದಲಿತ ನಾಯಕರು

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ಹಾಗೂ ಚಿಂತನಾ ದಿನಾಚರಣೆ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ತಿಗೆ ಆಗ್ರಹಿಸಿ ಎಸ್.ಡಿ.ಪಿ.ಐ ಪ್ರತಿಭಟನೆ

Suddi Udaya

ಉಜಿರೆ : ಶ್ರೀ ಧ.ಮ. ಕಾಲೇಜು ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ – ವಿಶೇಷ ಸಾಧಕರಿಗೆ ಸನ್ಮಾನ – ಚಿಗುರು ಪತ್ರಿಕೆ ಅನಾವರಣ

Suddi Udaya
error: Content is protected !!