22.9 C
ಪುತ್ತೂರು, ಬೆಳ್ತಂಗಡಿ
March 7, 2026
ಆಯ್ಕೆಬೆಳ್ತಂಗಡಿವರದಿ

ಬೆಳ್ತಂಗಡಿ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಪೊಸಲಾಯಿ ಆಯ್ಕೆ

ಬೆಳ್ತಂಗಡಿ : ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯ 2025 – 26 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಪೊಸಲಾಯಿ, ಉಪಾಧ್ಯಕ್ಷರುಗಳಾಗಿ ಆನಂದ ಹೆಗ್ಡೆ ಹಾಗೂ ಸುರೇಶ್ ಆಚಾರ್, ಕಾರ್ಯದರ್ಶಿಯಾಗಿ ಗಣೇಶ್ ಮೆಸ್ಕಾಂ, ಜೊತೆ ಕಾರ್ಯದರ್ಶಿಯಾಗಿ ಆನಂದ ದೇವಾಡಿಗ, ಕೋಶಾಧಿಕಾರಿಯಾಗಿ ಎಂ. ಡಿ ಸಂಜೀವ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕೃಷ್ಣಕುಮಾರ್ ಐತಾಳ್ , ಜಗನ್ನಾಥ, ಹರಿದಾಸ್ ಕೆ, ಸದಾಶಿವ ಶೆಟ್ಟಿ,ಯೋಗೀಶ, ವೆಂಕಟರಮಣ ಆಚಾರ್, ಸಲಹೆಗಾರರುಗಳಾಗಿ ವಿಜಯಕುಮಾರ್, ಪದ್ಮ ಕುಮಾರ್ ಎಚ್ , ಕೃಷ್ಣ ಕೆ, ರವಿಚಂದ್ರ ಭಟ್, ರವೀಂದ್ರ ಗೌಡ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಪ್ರಧಾನ ಸಂಚಾಲಕರಾಗಿ ಡಾ| ಕೆ. ಜಿ. ಪಣಿಕ್ಕರ್ ಸಂಚಾಲಕರುಗಳಾಗಿ ಆನಂದ ಶೆಟ್ಟಿ ಕೆ.ಎನ್ , ಗಣೇಶ್ ಐತಾಳ್ , ಅನಂತಕೃಷ್ಣ , ಸುರೇಶ್ ಶೆಟ್ಟಿ ಲಾಯಿಲ, ಉದಯಕುಮಾರ್ ಲಾಯಿಲ ಇವರುಗಳನ್ನು ಮುಂದುವರಿಸಲಾಯಿತು.
ವಿಜಯ್ ಕುಮಾರ್ ಸ್ವಾಗತಿಸಿದರು. ಅನಂತ ಕೃಷ್ಣರವರು ಕಳೆದ ಸಾಲಿನ ಲೆಕ್ಕಪತ್ರ ಮಂಡಿಸಿ, ಧನ್ಯವಾದ ಸಮರ್ಪಿಸಿದರು.

Related posts

ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾಗಿ ಇಸುಬು ಯು.ಕೆ ನೇಮಕ

Suddi Udaya

ಮುಂಡೂರುಪಳಿಕೆ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಬಾಲಚಂದ್ರ ರವರಿಗೆ ಸಹಾಯಧನ ಹಸ್ತಾಂತರ

Suddi Udaya

ಫೆ.12: ಉಜಿರೆ ಶ್ರೀ ದುರ್ಗಾ ನಿಲಯದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ, ಹಾಗೂ ಶ್ರೀ ಶನೀಶ್ವರ ಪೂಜೆ

Suddi Udaya

ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

Suddi Udaya

ದಿಡುಪೆ- ಕಜಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಚಾಲನೆ: ಬಸ್ ನ್ನು ಸ್ವಾಗತಿಸಿದ, ಮಲವಂತಿಗೆ, ಕಜಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು

Suddi Udaya

ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಪಲಿಗರ ಸಂಘದ ವಾರ್ಷಿಕ ಮಹಾಸಭೆ: ಸಾಮೂಹಿಕ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

Suddi Udaya
error: Content is protected !!