September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರಾಯ ಮತ್ತು ಪುಂಜಾಲಕಟ್ಟೆ ವಲಯ ಮಟ್ಟದ ಕ್ರೀಡಾಕೂಟ

ಮಡಂತ್ಯಾರು : ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಕರಾಯ, ಪುಂಜಾಲಕಟ್ಟೆ ವಲಯ ಮತ್ತು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು ಇವರ ಸಹಯೋಗದಲ್ಲಿ ವಲಯ ಮಟ್ಟದ 14 ರ ವಯೋಮಾನದ ಬಾಲಕ-ಬಾಲಕಿಯರ ಕ್ರೀಡಾಕೂಟ ನ.3ರಂದು ಸೇಕ್ರೆಡ್ ಹಾರ್ಟ್ ಕ್ರೀಡಾಂಗಣದಲ್ಲಿ ನೆರವೇರಿತು.

ಈ ಕ್ರೀಡಾಕೂಟವನ್ನು ಪ್ರಾರ್ಥನ ಗೀತೆಯನ್ನು ಹಾಡಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕ್ರೀಡಾಕೂಟದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ವಂ|ಡಾ| ಸ್ಟ್ಯಾನಿ ಗೋವಿಯಸ್ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ಈ ಕ್ರೀಡಾಕೂಟವು ಒಳ್ಳೆಯ ರೀತಿಯಲ್ಲಿ ನೆರವೇರಲಿ, ಸೋಲು-ಗೆಲುವು ಎಂಬುದು ಕ್ರೀಡೆಯಲ್ಲಿ ಸಾಮಾನ್ಯ ಎಂದು ಹೇಳಿ, ಕ್ರೀಡಾಪಟುಗಳಿಗೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ರಾಜಶೇಖರ ಶೆಟ್ಟಿ ಆಗಮಿಸಿದ್ದರು. ಶಿಕ್ಷಕರ ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮಹಮ್ಮದ್ ಶರೀಫ್, ಶ್ರೀಮತಿ ಚೇತನ, ರಾಜೇಶ್ ರವರು, ಪುಂಜಾಲ್ ಕಟ್ಟೆ ವಲಯದ ನೋಡಲ್ ಅಧಿಕಾರಿಯಾದ ಜಯರಾಜ್ ಜೈನ್, ಬೆಳ್ತಂಗಡಿ ತಾಲೂಕು ಮುಖ್ಯೋಪಾಧ್ಯಾಯರ ಸಂಘದ ನಿರ್ದೇಶಕರಾದ ಕೃಷ್ಣಪ್ಪ, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ರವಿರಾಜ್, ಪುಂಜಾಲ್ ಕಟ್ಟೆ ವಲಯದ ನೋಡಲ್ ಅಧಿಕಾರಿಯಾದ ಗೋಪಾಲ ಮತ್ತು ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ರಾಜೇಶ್ ನಿರೂಪಿಸಿ, ವಲೇರಿಯನ್ ಡಿಸೋಜ ಸ್ವಾಗತಿಸಿ, ಶ್ರೀಮತಿ ಚೇತನ ಧನ್ಯವಾದವನ್ನು ಸಮರ್ಪಿಸಿದರು.

Related posts

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಉಜಿರೆ ಮೋಹನ್ ಕುಮಾರ್ ರವರಿಗೆ ‘ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿ- 2023’

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಭಜನಾ ಪರಿಷತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರಿಗೆ ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದನೆ

Suddi Udaya

ಪದ್ಮುಂಜ: ಶ್ರೀ ವಿಷ್ಣು ಅಸೋಸಿಯೇಟ್ಸ್, ಗ್ರಾಮ ಒನ್, ಶ್ರೀ ವಿಷ್ಣು ಡಿಜಿಟಲ್ ಸೇವಾ ಕೇಂದ್ರದಲ್ಲಿ ಇ -ಸ್ಟ್ಯಾಂಪ್ (ಠಸ್ಸೆ) ಪೇಪರ್ ಸೇವೆಯ ಶುಭಾರoಭ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ

Suddi Udaya

ಶಿಶಿಲ ಹಾ.ಉ.ಸ. ಸಂಘದ ಅಧ್ಯಕ್ಷರಾಗಿ ಸಂತೋಷ್ ಎ.ಎಸ್ ಹಾಗೂ ಉಪಾಧ್ಯಕ್ಷರಾಗಿ ಡಿ ಲಕ್ಷ್ಮೀಶ ಗೌಡ ಆಯ್ಕೆ

Suddi Udaya

ಸಿಯೋನ್ ಆಶ್ರಮದಲ್ಲಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ನೌಕರರ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುಹಾಸ್ ಅಡಿಗ ಬೆಳ್ತಂಗಡಿ ಅವಿರೋಧವಾಗಿ ಆಯ್ಕೆ

Suddi Udaya
error: Content is protected !!