ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪದ್ಮುಂಜ: ಶ್ರೀ ವಿಷ್ಣು ಅಸೋಸಿಯೇಟ್ಸ್, ಗ್ರಾಮ ಒನ್, ಶ್ರೀ ವಿಷ್ಣು ಡಿಜಿಟಲ್ ಸೇವಾ ಕೇಂದ್ರದಲ್ಲಿ ಇ -ಸ್ಟ್ಯಾಂಪ್ (ಠಸ್ಸೆ) ಪೇಪರ್ ಸೇವೆಯ ಶುಭಾರoಭ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ

ಪದ್ಮುಂಜ: ಕಣಿಯೂರು ಗ್ರಾಮದ ಪದ್ಮುಂಜ ಶ್ರೀ ವಿಷ್ಣು ಅಸೋಸಿಯೇಟ್ಸ್, ಗ್ರಾಮ ಒನ್, ಶ್ರೀ ವಿಷ್ಣು ಡಿಜಿಟಲ್ ಸೇವಾ ಕೇಂದ್ರದಲ್ಲಿ , ಇ -ಸ್ಟ್ಯಾಂಪ್ (ಠಸೆ) ಪೇಪರ್ ಸೇವೆಯ ಶುಭಾರoಭ, ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪದ್ಮುಂಜ ಸಿ.ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ನಡೆಯಿತು.

ಪದ್ಮುಂಜ ಸಿ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಇ ಸ್ಟ್ಯಾಂಪ್ ಗೆ ಚಾಲನೆ ನೀಡಿ ಶುಭಹಾರೈಸಿದರು, ಗೌರವ ಉಪಸ್ಥಿತರಾಗಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಮೆನೇಜರ್ ಶ್ರೀಮತಿ ಅಂಕಿತಾ, ಪದ್ಮುಂಜ ಕೆನರಾ ಬ್ಯಾಂಕ್ ಮೆನೇಜರ್ ರೂಪೇಶ್, ತಣ್ಣೀರುಪoತ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಜಗದೀಶ್ ಮೈರ, ಪದ್ಮುಂಜ ಸಿ ಎ ಬ್ಯಾಂಕ್ ಮಾಜಿ ಅಧ್ಯಕ್ಷರಾದ ರಾಜೀವ್ ರೈ, ಉದಯ್ ಮೇಲಾoಟ,ಪ್ರಗತಿಪರ ಕೃಷಿಕ ಯುವ ಉದ್ಯಮಿ ದೇವಿಪ್ರಸಾದ್ ಕಡಮ್ಮಾಜೆ ಫಾರ್ಮ್ಸ್, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗದಲ್ಲಿ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ ಯೋಗ ಗುರು ಕುಶಾಲಪ್ಪ ಗೌಡ, ನಿವೃತ್ತ ಯೋಧರಾದ ಗಣೇಶ್ ಶೆಟ್ಟಿ ಪದ್ಮುಂಜ, ರಾಜ್ಯಮಟ್ಟದ ಕ್ರೀಡಾಪಟು ಕು. ತೇಜಶ್ವಿನಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಹಿತಿ ಚಂದ್ರಹಾಸ ಕುಂಬಾರ, ಇವರಿಗೆ ಸನ್ಮಾನಿಸಲಾಯಿತು,ಹಲವಾರು ಗಣ್ಯರು,ಹಿತೈಷಿಗಳು,ಗ್ರಾಹಕರು ಆಗಮಿಸಿ ಶುಭಹಾರೈಸಿದರು.

ಮಾಲಕರಾದ ವಕೀಲ ಉದಯ ಬಿ.ಕೆ, ಪತ್ನಿ ಶ್ರೀಮತಿ ಸುಚಿತ್ರ ಉದಯ ಬಿ.ಕೆ, ಸಹೋದರರು, ಕಚೇರಿ ಸಹಾಯಕರಾದ ದುರ್ಗೇಶ್, ಶ್ರೀಮತಿ ಪೂರ್ಣಿಮ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು,ಗ್ರಾಹಕರನ್ನು ಸತ್ಕರಿಸಿ ಉಪಚರಿಸಿದರು.

Related posts

ಗೇರುಕಟ್ಟೆ : ಕೊರಂಜ ಭಾರಿ ಮಳೆಗೆ ಚರಂಡಿ ನೀರು ಮನೆಯೊಳಗೆ

Suddi Udaya

ಉಜಿರೆ ನಿವಾಸಿ ಲಲಿತಾ ಪೂಜಾರಿ ನಿಧನ

Suddi Udaya

ತೆಂಕಕಾರಂದೂರು: ಶ್ರೀ ಸಂತಾನ ಗೋಪಾಲಕೃಷ್ಣ ದೇವರ ವಾರ್ಷಿಕ ಜಾತ್ರಾಮಹೋತ್ಸವ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿಯ ಎಸ್.ಡಿ.ಎಂ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಮಿತ್ತರೋಡಿ ಪ್ರಸಾದ್ ಆಚಾರ್ಯ ರವರಿಂದ ಕಾಪಿನಡ್ಕ ಶಾಲಾ ಮಕ್ಕಳಿಗೆ ಉಚಿತ ಡ್ರಾಯಿಂಗ್ ಪುಸ್ತಕ ವಿತರಣೆ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ “ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ

Suddi Udaya
error: Content is protected !!