ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನ 27: ಎಕ್ಸೆಲ್ ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರೋತ್ಸವ-ರಾಷ್ಟ್ರ ಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ

ಗುರುವಾಯನಕೆರೆ: ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಪ್ರತಿ ವರ್ಷ ಹಮ್ಮಿಕೊಳ್ಳುವ ಪ್ರತಿಷ್ಠಿತ ಎಕ್ಸೆಲ್ ಅಕ್ಷರೋತ್ಸವ ನಾಡು – ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಆಮಂತ್ರಣ ಸಾಂಸ್ಕೃತಿಕ – ಸಾಹಿತ್ಯ ವೇದಿಕೆಯ ದಶಮಾನೋತ್ಸವ ಜೊತೆಯಾಗಿ ಈ ಬಾರಿ ನ.27ರಂದು ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಸಂಪನ್ನಗೊಳ್ಳಲಿದೆ.

ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕನ್ನಡ ಕವಿಗೋಷ್ಠಿ ನಡೆಯಲಿದೆ.ಆಯ್ದ ಕವಿಗಳ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ, ಕವನ ವಾಚನ – ಗಾಯನ – ನೃತ್ಯ – ಕುಂಚ ಪರಿಕಲ್ಪನೆಯಲ್ಲಿ ಗೋಷ್ಠಿ ನಡೆಯಲಿದೆ .
ಕವಿತೆಗಳು ಕನ್ನಡ ಭಾಷೆಯಲ್ಲಿ ಇರಬೇಕು. ಕವಿತೆಗೆ ವಸ್ತು ನಿರ್ಬಂಧವಿಲ್ಲ. ಕವಿಗೋಷ್ಠಿಗೆ ಆಯ್ಕೆಯಾದ ಕವಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ, ಗ್ರಂಥ ಗೌರವ ಹಾಗೂ ಊಟೋಪಚಾರ ಮತ್ತು ಬಸ್ಸಿನ ಪ್ರಯಾಣ ವೆಚ್ಚವನ್ನು ನೀಡಲಾಗುವುದು.

ಕವಿಗೋಷ್ಠಿಗೆ ಆಯ್ಕೆಯಾಗುವ ಮತ್ತು ಯೋಗ್ಯವೆನಿಸಿದ ಆಯ್ದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಆಸಕ್ತ ಕವಿಗಳು ತಮ್ಮ ಕವಿತೆಗಳನ್ನು ಪ್ರಾಂಶುಪಾಲರು ಎಕ್ಸೆಲ್ ಪದವಿ ಪೂರ್ವ ಕಾಲೇಜು,
ವಿದ್ಯಾ ಸಾಗರ ಕ್ಯಾಂಪಸ್,ಕುವೆಟ್ಟು ಗ್ರಾಮ, ಗುರುವಾಯನಕೆರೆ-574217 ಈ ವಿಳಾಸಕ್ಕೆ ಅಥವಾ ಮಿಂಚಂಚೆ [email protected] ಗೆ ಕಳುಹಿಸಿಕೊಡಬಹುದು.

ದೇಶದ ಯಾವುದೇ ಭಾಗದವರು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದು. ಲಕೋಟೆಯ ಮೇಲೆ ಎಕ್ಸೆಲ್ ಅಕ್ಷರೋತ್ಸವ – 2025 ಎಂದು ಸ್ಪಷ್ಟವಾಗಿ ನಮೂದಿಸಿರಬೇಕು.
ಆಯ್ಕೆಯಾದ ಕವಿಗಳಿಗೆ ಸಂಸ್ಥೆಯ ಕಡೆಯಿಂದ ಪ್ರತ್ಯೇಕ ಕರೆ ಬರುತ್ತದೆ. ಈ ಬಗ್ಗೆ ಯಾರನ್ನೂ ಸಂಪರ್ಕಿಸಬೇಕಾದ ಅವಶ್ಯಕತೆಯಿಲ್ಲ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕಕ್ಯಪದವು ಎಲ್.ಸಿ.ಆರ್ ಪ.ಪೂ. ಕಾಲೇಜು: ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ

Suddi Udaya

ಭಾರೀ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ: ಪಜಿರಡ್ಕದಲ್ಲಿ ಗಂಗಾಪೂಜೆ

Suddi Udaya

ಧರ್ಮಸ್ಥಳ: ಅನ್ಯಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜಿನ ಸ್ಥಾಪಕ ಪ್ರಾಚಾರ್ಯ ಪ್ರೊ.ಎಸ್.ಪ್ರಭಾಕರ್ ಅವರಿಗೆ ನುಡಿನಮನ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪದವಿಪೂರ್ವ ಕಾಲೇಜು ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!