22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ನಲ್ಲಿ ಬೋಶ್ ಇಂಟರ್ನ್‌ಶಿಪ್ ಆಯ್ಕೆ ಪ್ರಕ್ರಿಯೆ

ಉಜಿರೆ: ಬೋಶ್ ಆಟೋಮೊಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಎಂಬ ವಿಶ್ವಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯು ಎಸ್‌ಡಿಎಂ ಪಾಲಿಟೆಕ್ನಿಕ್, ಉಜಿರೆಯಲ್ಲಿ ಯಶಸ್ವಿಯಾಗಿ ಇಂಟರ್ನ್‌ಶಿಪ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿತು.

ಈ ಆಯ್ಕೆ ಪ್ರಕ್ರಿಯೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಯಿತು. ಒಟ್ಟು 25 ಮಂದಿ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಬೋಶ್ ಕಂಪನಿಯ ಮಾನವ ಸಂಪನ್ಮೂಲ (HR) ಪ್ರತಿನಿಧಿಗಳಾದ ಪ್ರದೀಪ್ ಹಾಗೂ ಧೀರಜ್ ಶೆಟ್ಟಿಗಾರ್, ತಮ್ಮ ತಂಡದೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಕೈಗಾರಿಕಾ ಪ್ರಕ್ರಿಯೆಗಳು, ಕೆಲಸದ ಸಂಸ್ಕೃತಿ ಮತ್ತು ಆಟೋಮೊಟಿವ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ನೀಡಿ, ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಪ್ಲೇಸ್ಮೆಂಟ್ ಸಮಿತಿ ಸದಸ್ಯರಾದ ಶಿವರಾಜ್ ಪಿ ಅವರು ಅತಿಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹಾಗೂ ಶ್ರೀಮತಿ ಶಾದ್ವಲ ಸೆಬಾಸ್ಟಿಯನ್, ಅಶೋಕ್, ಮತ್ತು ಶ್ರೀಮತಿ ವಿದ್ಯಾಲಕ್ಷ್ಮಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು.

Related posts

ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಬಾಡಿಗೆದಾರರಿಂದ ಸಹಾಯಧನ ಹಸ್ತಾಂತರ

Suddi Udaya

ಪುಂಜಾಲಕಟ್ಟೆ ಸ.ಪ್ರ.ದ.‌ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ನ ಏಳು ವಿದ್ಯಾರ್ಥಿಗಳಿಗೆ ನಿಪುಣ್ ಪ್ರಶಸ್ತಿ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರಿಂದ ಪ್ರಶಸ್ತಿ ಪ್ರದಾನ

Suddi Udaya

ಅಥ್ಲೆಟಿಕ್ಸ್ ಸ್ಪರ್ಧೆ: ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿ ಅನೀಶ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ರಾಷ್ಟ್ರಮಟ್ಟದ ಟೆಕ್ನೋ ಕಲ್ಚರ್ ಫೆಸ್ಟ್ ಇನ್ಸಿಗ್ನಿಯಾ: ಉಜಿರೆ ಎಸ್.ಡಿ.ಎಂ.ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಬೆಳ್ತಂಗಡಿ: ಡಾ. ಸುಶ್ಮಿತಾ ಸಿ ಎಚ್ ರವರಿಗೆ ಪಿಹೆಚ್ ಡಿ ಪದವಿ

Suddi Udaya
error: Content is protected !!