23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ: ಗುಡ್ ಫ್ಯೂಚರ್ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಅಳದಂಗಡಿ: ಪಿಲ್ಯ ಗುಡ್ ಫ್ಯೂಚರ್ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವು ಶಾಲಾ ಸಂಚಾಲಕ ನಜೀರ್ ಅಹಮದ್ ಖಾನ್ ರವರ ಅಧ್ಯಕ್ಷತೆಯಲ್ಲಿ ಜರಗಿತು .

ಶ್ರೀಮತಿ ಕುಮುದಾಕ್ಷಿ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಪ್ರಭಾಕರ್ ಶೆಟ್ಟಿಯವರು ಪ್ರಾಸ್ತಾವಿಕ ಮಾತಿನೊಂದಿಗೆ 2025ರ ಎಸ್ ಎಸ್ ಎಲ್ ಸಿ ಪರೀಕ್ಷೆಯ 100% ಫಲಿತಾಂಶಕ್ಕಾಗಿ ಎಲ್ಲಾ ಮಕ್ಕಳನ್ನೂ, ಶಿಕ್ಷಕಿಯರನ್ನು ಅಭಿನಂದಿಸಿದರು.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ದಿತೀಕ್ಷ್ ದೀಪೇಶ್, ಶರ್ವಿನ್, ಫೈಹಾ ಮತ್ತು ಆಶೀರ್ ಇವರನ್ನು ವಿಶೇಷವಾಗಿ ಗೌರವಿಸುವುದರ ಜೊತೆಗೆ ಉತ್ತೀರ್ಣರಾದ ಎಲ್ಲರನ್ನೂ ಗೌರವಿಸಲಾಯಿತು.

ವಿಶೇಷ ಆಹ್ವಾನಿತರಾದ ಶಾಜಿ ಕೆ ಕುರಿಯನ್ ರವರು ಅಭಿನಂದಿಸಿ ಮಕ್ಕಳಿಗೆ ಶುಭವನ್ನು ಕೋರಿದರು. ಸಂಚಾಲಕರು ಮಕ್ಕಳನ್ನು ಅಭಿನಂದಿಸುವುದರ ಜೊತೆಗೆ ಇದಕ್ಕೆ ಕಾರಣೀಭೂತರಾದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರ ಪರಿಶ್ರಮಕ್ಕೆ ಕೃತಜ್ಞತೆಯನ್ನು ಅರ್ಪಿಸಿದರು. ವೇದಿಕೆಯಲ್ಲಿ ಶುಕುರ್ ಸಾಹೇಬ್, ಧನಕೀರ್ತಿ ಜೈನ್, ವೀರೇಂದ್ರ ಕುಮಾರ್ ಜೈನ್, ಶ್ರೀಮತಿ ಹರಿಣಾಕ್ಷಿ ಉಪಸ್ಥಿತರಿದ್ದರು. ಶ್ರೀಮತಿ ಸೌಜನ್ಯ ಮಕ್ಕಳನ್ನು ಪರಿಚಯಿಸಿದರು. ಶಿಕ್ಷಕಿಯರಾದ ರೂಪ ನಿರೂಪಿಸಿ, ಶೃತಿ ವಂದಿಸಿದರು.

Related posts

ನಾವರ ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಕಣಿಯೂರು ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ

Suddi Udaya

ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕರ್ನಾಟಕ ಬ್ಯಾಂಕ್ ವತಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ಬಸ್ಸು ಕೊಡುಗೆ

Suddi Udaya

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!