25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಕೌನ್ಸಿಲರ್ಸ್ ಕಾoಕ್ಲೇವ್

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಬೆಳ್ತಂಗಡಿ ಝೋನ್ ವ್ಯಾಪ್ತಿಯ 7 ಸರ್ಕಲುಗಳ ಕೌನ್ಸಿಲರ್ ಗಳನ್ನು ಸೇರಿಸಿ ಕೌನ್ಸಿಲರ್ಸ್ ಕಾoಕ್ಲೇವ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ಆಲoದಿಲ ರವರ ಅಧ್ಯಕ್ಷತೆಯಲ್ಲಿ ನ.2 ರಂದು ಹಯಾತುಲ್ ಅವುಲಿಯ ದರ್ಗಾ ಶರೀಫ್ ಕಾಜೂರು ನಲ್ಲಿ ದರ್ಗಾ ಝಿಯಾರತ್ ನೊಂದಿಗೆ ಚಾಲನೆ ನೀಡಲಾಯಿತು.

ಎಸ್.ವೈ.ಎಸ್ ಝೋನ್ ಕೋಶಾಧಿಕಾರಿ ಅಬ್ದುಲ್ ರಝಕ್ ಸಖಾಫಿ ಮಡಂತ್ಯಾರ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್.ವೈ.ಎಸ್ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮಾಡವು ರವರಿಂದ ಕೌನ್ಸಿಲರ್ಸ್ ಕಾoಕ್ಲೇವ್ ಕಾರ್ಯಕ್ರಮ ನಡೆಸಿದರು.
ಜಿಲ್ಲಾ ಉಪಾಧ್ಯಕ್ಷ ಉಸ್ಮಾನ್ ಸೋಕಿಲ ರವರು ಅವಲೋಕನ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.

ಜಿಲ್ಲಾ ನಾಯಕರಾದ ನಝೀರ್ ಪೆರ್ದಾಡಿ, ಉಪಾಧ್ಯಕ್ಷರುಗಳಾದ ಅಯ್ಯೂಬ್ ಮಹ್ಳರೀ, ಕೆ ವೈ ಇಸ್ಮಾಯಿಲ್, ಕಾರ್ಯದರ್ಶಿಗಳಾದ ಅಝೀಝ್ ಕಾಜೂರು, ಆಶ್ರಫ್ ಎಂ ಎಚ್, ಸಿದ್ದೀಕ್ ಪರಪ್ಪು,ಹಾರಿಸ್ ಕುಕ್ಕುಡಿ, ಝೋನ್ ನಾಯಕರಾದ ನಝೀರ್ ಮದನಿ ,ಝಮಿರ್ ಸಅದಿ , ಹಸೈನಾರ್ ಹಾಜಿ , ಸಲೀಂ ಮಾಚಾರು, ಹಮೀದ್ ಸಅದಿ, ರಿಯಾಝ್ ಏರ್ಮಾಳ, ನಝೀರ್ ಕಾಂತಿಜಾಲ್, ನಿಝಮುದ್ದೀನ್ ಜಿ ಎಚ್ , ಹನೀಫ್ ಬಾಹಸನಿ, ಅಶ್ರಫ್ ಹಿಮಮಿ, ಮುಸ್ತಫಾ ಸಅದಿ , ನಾಸಿರ್ ನಾವೂರ್, ಇಕ್ಬಾಲ್ ಮಾಚಾರ್ ಸ್ಥಳೀಯ ಕಾಜೂರ್ ಕರ್ನಾಟಕ ಮುಸ್ಲಿಂ ಜಮಾಅತ್ &ಎಸ್.ವ್ಯೆ. ಎಸ್ ಯುನಿಟ್ ನಾಯಕರು ಹಾಗೂ 7 ಸರ್ಕಲ್ ಗಳಿಂದ ಆಗಮಿಸಿದ ಕೌನ್ಸಿಲರ್ ಗಳು ಉಪಸ್ಥಿತರಿದ್ದರು.

ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿದರು, ಉಪಾಧ್ಯಕ್ಷ ಜಮಲುದ್ದಿನ್ ಲತೀಫಿ ಧನ್ಯವಾದವಿತ್ತರು.

Related posts

ಆ.15-16: ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಕ್ಷಕ ನಮನ 2025, ಶೈಕ್ಷಣಿಕ ಸಾಧಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿವೇತನ ವಿತರಣೆ

Suddi Udaya

ಪ್ರತಿಭಾ ಕಾರಂಜಿ: ಸ್ಟಾರ್‌ಲೈನ್ ಆಂ.ಮಾ. ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

Suddi Udaya

ದ.ಕ. ಜಿಲ್ಲೆಯ ಹೆಚ್ಚಿನ ರೈತರಿಗೆ ಬೆಳೆ ಸಾಲ ಯೋಜನೆಯ ಸೌಲಭ್ಯ ತಲುಪುವಲ್ಲಿ ವಿಫಲ:ಅಗತ್ಯವಿರುವ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ಅವರಿಗೆ ಆಗ್ರಹ

Suddi Udaya

ನ.9: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಪುರಪ್ರವೇಶ

Suddi Udaya

ಕೋರಂ ಕೊರತೆ ಹಾಗೂ ಇಲಾಖಾಧಿಕಾರಿಗಳ ಗೈರುಹಾಜರಿಯಲ್ಲಿ ರದ್ದುಗೊಂಡ ಮಡಂತ್ಯಾರು ಗ್ರಾಮಸಭೆ

Suddi Udaya

ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೃತಜ್ಞತಾ ಸಮಾರಂಭ

Suddi Udaya
error: Content is protected !!