ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬಾರ್ಯ ಪ್ಯಾಕ್ಸ್ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ದಿಗ್ವಿಜಯ

ಮುರುಗೋಳಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನ.೫ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತೀ ಬೆಂಬಲಿತ ೧೨ ಮಂದಿ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಪರಭಾವಗೊಳಿಸಿದ್ದಾರೆ. ಒಟ್ಟು ೧೨ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಸಾಮಾನ್ಯ ಸ್ಥಾನದಿಂದ ೬ ಮಂದಿ, ಅನೂಸೂಚಿತ ಜಾತಿ ಹಾಗೂ ಪಂಗಡ ಮೀಸಲುವಿನಿಂದ, ಹಿಂದುಳಿದ ವರ್ಗ “ಎ” ಹಾಗೂ “ಬಿ” ಮೀಸಲು ಸ್ಥಾನದಿಂದ ತಲಾ ಒಂದರAತೆ ಹಾಗೂ ಮಹಿಳಾ ಮೀಸಲು ಎರಡು ಸ್ಥಾನಗಳಿಗೆ ಸ್ಪರ್ಧೆ ನಡೆದಿದ್ದು ಅಂತಿಮ ಕಣದಲ್ಲಿ ೨೪ ಅಭ್ಯರ್ಥಿಗಳಿದ್ದರು. ನ.೫ರಂದು ಬೆಳಗ್ಗೆ ೯ರಿಂದ ಸಂಜೆ ೪ರವರೆಗೆ ಬಾರ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮತದಾನ ನಡೆದಿದ್ದು ಒಟ್ಟು ೧೩೨೨ ಮಂದಿ ಮತದಾರರ ಪೈಕಿ ೧೧೮೨ ಮತಗಳು ಚಲಾವಣೆಗೊಂಡು ಶೇ.೮೯.೪೦ರಷ್ಟು ಮತದಾನ ನಡೆದಿದೆ. ಚುನಾವಣಾಧಿಕಾರಿಯಾಗಿ ಸಿಡಿಒ ಪ್ರತಿಮಾ ಹಾಗೂ ಸಹಾಯಕ ಚುನಾವಣಾಧಿಕಾರಿ ಸತೀಶ್ ಟಿ. ಕಾರ್ಯನಿರ್ವಹಿಸಿದರು, ಸಿಬ್ಬಂದಿಗಳು ಸಹಕರಿಸಿದರು.

ಸಾಮಾನ್ಯ ಕೇತ್ರದಿಂದ ಸ್ಪರ್ಧಿಸಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷರಾದ ಪ್ರಸನ್ನ ಗೌಡ ಎನ್, ಪ್ರವೀಣ ರೈ ಪಿ., ಪ್ರಶಾಂತ್ ಪೈ, ಹಾಲಿ ನಿರ್ದೇಶಕ ಚಂದ್ರಶೇಖರ್ ಕುಂಡಡ್ಕ, ಹರ್ಷಿತ್ ಪೂಜಾರಿ ಕಲಾಯ ಹಾಗೂ ಹಾಲಿ ನಿರ್ದೇಶಕ ಮೋಹನ್ ಗೌಡ ಅಜಿರ, ಹಿಂದುಳಿದ ವರ್ಗ”ಎ”ನಿಂದ ಹಾಲಿ ನಿರ್ದೇಶಕ ಶೇಸಪ್ಪ ಸಾಲಿಯಾನ್, ಹಿಂದುಳಿದ ವರ್ಗ “ಬಿ”ನಿಂದ ಹಾಲಿ ನಿರ್ದೇಶಕ ರಾಜೇಶ್ ರೈ ಹೆನ್ನಡ್ಕ, ಮಹಿಳಾ ಮೀಸಲು ಹಾಲಿ ನಿರ್ದೇಶಕಿ ಕೇತ್ರದಿಂದ ಸವಿತಾ ವೆಂಕಟೇಶ್ ಹಾಗೂ ಹೇಮಾವತಿ ಸುರೇಶ್ ಹೇರಾಜೆ, ಪರಿಶಿಷ್ಟ ಪಂಗಡದಿAದ ಹಾಲಿ ಉಪಾಧ್ಯಕ್ಷ ಶಿವಾರಮ್ ಕೆಳಗಿನಂಗಡಿ ಹಾಗೂ ಪರಿಶಿಷ್ಟ ಜಾತಿಯಿಂದ ಹಾಲಿ ನಿರ್ದೇಶಕ ಸುರೇಶ್ ಸುಣ್ಣಾಜೆ ಅಭೂತಪೂರ್ವ ಮತಗಳಿಂದ ವಿಜಯಗಳಿಸಿದ್ದಾರೆ.

Related posts

ನಿಡ್ಲೆಯಲ್ಲಿ 34ನೇ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

Suddi Udaya

ದಿವ್ಯಾಂಗರಿಗೆ ಗಾಲಿ ಕುರ್ಚಿ ಗಳ ವಿತರಣೆ

Suddi Udaya

ಚಿಬಿದ್ರೆ: ಪಿತ್ತಿಲು ನಿವಾಸಿ ದಯಾನಂದ ಪಿ ನಿಧನ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಪಾರೆಂಕಿ ಬಿಸಿಎಂ ಹಾಸ್ಟೆಲ್ ಗೆ ಟಿ.ವಿ. ಕೊಡುಗೆ

Suddi Udaya

ಯಕ್ಷಭಾರತಿಯಿಂದ ಶೋಭಾ ಸುರೇಶ ಕುದ್ರೆಂತ್ತಾಯರಿಗೆ ಗೌರವಾರ್ಪಣೆ ಮತ್ತು ತಾಳಮದ್ದಳೆ

Suddi Udaya

ಎರಡೂ ಕಾಲುಗಳ ಮೂಳೆ ಮುರಿತಕ್ಕೊಳಗಾಗಿರುವ ಕನ್ಯಾಡಿಯ ವಿಶ್ವನಾಥ ರವರ ಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!