ಬೆಳ್ತಂಗಡಿ: ಕ್ಯಾಂಪ್ಕೊ ನಿಯಮಿತ ಮಂಗಳೂರು ಇದರ “ಸಾಂತ್ವನ” ಯೋಜನೆಯಡಿ ಬೆಳ್ತಂಗಡಿ ಶಾಖೆಯ ಸಕ್ರಿಯ ಸದಸ್ಯರಾದ, ದಿನಕರ ಬಂಗೇರ, ಗೇರುಕಟ್ಟೆ, ಇವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯ ಸಹಾಯಧನದ ಮೊತ್ತ, ರೂ. 50,000/- ನ್ನು ಬೈಕಂಪಾಡಿ ವಲಯದ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೋಟ್ಯಾನ್ ಅವರು ದಿನಕರ ಬಂಗೇರ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೊ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಶ್ರೀಕೃಷ್ಣ ಕೆ. ಎಸ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.











