32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ ಸಿ.ಬಿ.ಎಸ್.ಇ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ದಿನಾಚರಣೆ

ಉಜಿರೆ: ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ದಿನಾಚರಣೆ ಆಚರಿಸಲಾಯಿತು.

ಭಾರತವು ಸ್ವಾತಂತ್ರ್ಯ ಪಡೆದ ನಂತರ ನಡೆದ ಸಂಸ್ಥೆಗಳ ವಿಲೀನದ ಫಲವಾಗಿ, ನ. 7, 1950 ರಂದು “ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್” ಎಂಬ ಏಕೀಕೃತ ಸಂಸ್ಥೆ ಸ್ಥಾಪಿತವಾಯಿತು. ಈ ಹಿನ್ನೆಲೆ, ಪ್ರತಿವರ್ಷ ದೇಶದಾದ್ಯಂತ ಸಂಸ್ಥಾಪನಾ ದಿನಾಚರಣೆ ಹಾಗೂ ಧ್ವಜ ದಿನಾಚರಣೆ ಉತ್ಸಾಹಭರಿತವಾಗಿ ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ ಕಳುಹಿಸಲಾದ ಸಂಸ್ಥಾಪನಾ ದಿನಾಚರಣೆಯ ಧ್ವಜ ಚೀಟಿಯನ್ನು ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಅವರು ಶಾಲೆಗೆ ಹಸ್ತಾಂತರಿಸಿದರು. ಶಾಲೆಯ ವತಿಯಿಂದ ಆ ಧ್ವಜ ಚೀಟಿಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅವರಿಗೆ ತಮ್ಮ ಕಾರ್ಯಾಲಯದಲ್ಲಿ ನೀಡಿ ಗೌರವಿಸಿ, ನಂತರ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಕಾರ್ಯಕ್ರಮವು ದೇಶಭಕ್ತಿಯ ಉತ್ಸಾಹದಿಂದ ನೆರವೇರಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಪ್ರಯತ್ನವಾಯಿತು.

ಶಿಕ್ಷಕಿ ಶಮೀಮ್ ದಿನದ ಮಹತ್ವದ ಕುರಿತು ತಿಳಿಸಿ, ಶಿಕ್ಷಕಿ ನಯನಾ ಕಾರ್ಯಕ್ರಮ ನಿರೂಪಿಸಿದರು.

Related posts

ನಂದಿಬೆಟ್ಟ ಬಳಿ ಬೈಕ್ ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ: ಹುಟ್ಟುಹಬ್ಬದ ದಿನದಂದೆ ಓಡೀಲುವಿನ ಯುವಕ ದೀಕ್ಷಿತ್ ಬಲಿ

Suddi Udaya

ನಾಗರಿಕ ಯುವಜನ ವೇದಿಕೆಯಿಂದ ಯೂತ್ ಸಿವಿಲ್ ಫಾರಂ ಬೆಳ್ತಂಗಡಿ ಇದರ ನೂತನ ಸಮಿತಿ ರಚನೆ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಉಜಿರೆಯ ಮೋಹನ್ ರಿಗೆ ಪ್ರಶಸ್ತಿ

Suddi Udaya

ಮುಂಡಾಜೆ ಕಾಯರ್ತೋಡಿ ರಾಧಾ ಹೆಬ್ಬಾರ್‌ರವರ ತೋಟಕ್ಕೆ ನುಗ್ಗಿದ ನೇತ್ರಾವತಿ ನದಿ ನೀರು: 25 ಅಡಿಕೆ ಮರ ಹಾಗೂ 10 ರಬ್ಬರ್ ಮರ ಧರಾಶಾಯಿ

Suddi Udaya

ಕಡಿರುದ್ಯಾವರ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya
error: Content is protected !!