25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಾಲ್ಮೀಕಿ ಸ್ಮರಣಾ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಒಂದು ಕಾಲಕ್ಕೆ ಸಂಸ್ಕೃತ ಭಾಷೆಯು ಜನ ಸಾಮಾನ್ಯರ ಆಡುಭಾಷೆ ಆಗಿತ್ತು. ಈ ಕಾರಣಕ್ಕಾಗಿಯೇ ರಾಮಾಯಣ , ಮಹಾಭಾರತ ಇತ್ಯಾದಿ ಕಾವ್ಯಾದಿಗಳು ರಚನೆಯಾಗಿದ್ದವು. ಇಂತಹ ಕಾವ್ಯಗಳನ್ನು ಪ್ರೀತಿ ಇಟ್ಟು ಓದಿದರೆ ಹಾಗೂ ಆಸಕ್ತಿ ಹುಟ್ಟಿಸಿಕೊಂಡರೆ ಕಾವ್ಯಗಳನ್ನು ಹೆಚ್ಚು ಅರ್ಥೈಸಲು ಸಾಧ್ಯ. ರಾಮನ ಕಥೆಯನ್ನು ವಾಲ್ಮೀಕಿ ಕವಿಗಳು ರಾಮಾಯಣದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ರಾಮನ ಹಾಗೂ ರಾಮಾಯಣದ ಧನಾತ್ಮಕ ಅಂಶಗಳನ್ನು ಹೆಚ್ಚಾಗಿ ಸಮಾಜಕ್ಕೆ ತಲುಪಿಸಬೇಕು. ರಾಮನ ಆದರ್ಶ ಜೀವನ ಎಲ್ಲರಿಗೂ ಸ್ಫೂರ್ತಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಶ್ರೇಯಸ್ ಪಾಳಂದೆ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ವತಿಯಿಂದ ನಡೆದ ವಂದೇ ವಾಲ್ಮೀಕಿ ಕೋಕಿಲಮ್ ಎನ್ನುವ ವಾಲ್ಮೀಕಿ ಸ್ಮರಣಾ ಎನ್ನುವ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು. ಸಮೃದ್ಧಿ ಸ್ವಾಗತಿಸಿ , ತನ್ಮಯಿ ವಂದಿಸಿದರು . ಶಾಂಭವಿ ನಿರೂಪಿಸಿದರು.

Related posts

ಬಂದಾರು : ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ನಿಡ್ಲೆ ಗ್ರಾ.ಪಂ. ಅಧ್ಯಕ್ಷರಾಗಿ ಶ್ಯಾಮಲ, ಉಪಾಧ್ಯಕ್ಷರಾಗಿ ರುಕ್ಮಯ್ಯ ಪೂಜಾರಿ ಆಯ್ಕೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಶ್ರೇಷ್ಠ ಸಾಧನೆಗೆಪ್ರತಿಷ್ಠಿತ ಅರಸು ಪ್ರಶಸ್ತಿ -2025 ಪುರಸ್ಕಾರ

Suddi Udaya

ಯುವ ಸಂಸತ್ತು ಸ್ಪರ್ಧೆ: ಅರ್ಪಿತಾ ಎ. ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಪ್ರದೀಪ್ ಮರೋಡಿ ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಮೈಸೂರು ದಿಗಂತ ಪ್ರಶಸ್ತಿ ಪ್ರಧಾನ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದಿಂದ ಸಹಾಯಧನ ಹಸ್ತಾಂತರ

Suddi Udaya
error: Content is protected !!