ಉಜಿರೆ : ಗ್ರಾಮ ಪಂಚಾಯತ್ ಉಜಿರೆ ಇದರ ವತಿಯಿಂದ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯಲ್ಲಿ ಘನ ಭಾರತ ಸರಕಾರದ ನಶಾಮುಕ್ತ ಅಭಿಮಾನ 2025-26 ಸಾಲಿನಲ್ಲಿ ಒಟ್ಟು 180 ಜನ ಪ್ರತಿಜ್ಞಾ ವಿಧಿಯನ್ನು ಪಡೆದಿದ್ದು ಈ ಪ್ರತಿಜ್ಞಾ ವಿಧಿಯನ್ನು ಬೆಳ್ತಂಗಡಿ ತಾಲೂಕು ಎಮ್.ಆರ್ ಡಬ್ಲ್ಯೂ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಭೋದಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಉಷಾಕಿರಣ ಕಾರಂತ, ಗ್ರಾ.ಪಂ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಸದಸ್ಯರಾದ ಸಂಧ್ಯಾ, ಮಂಜುಳಾ ಉಮೇಶ್, ಲಲಿತಾ ಬಿ, ಸಚಿನ್, ಶರೀಫ್ ಮತ್ತು ಲಲಿತಾ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಶ್ರವಣ್ ಕುಮಾರ್ ಕಾರ್ಯದರ್ಶಿ ಗ್ರಾಮ ಪಂಚಾಯತ್ ಉಜಿರೆ , ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಶ್ರೀಮತಿ ಮಮತ ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ವಿಪುಲ್ ಪಿ ಪೂಜಾರಿ, ಗ್ರಾ.ಪಂ. ಉಜಿರೆ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನೀತಾ, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸೀತಾ ಆರ್ ಸೇಠ್, ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಬೆಳ್ತಂಗಡಿ ಅಧ್ಯಕ್ಷ ಎ.ಯು ಯೋಹಾನ್ , ಸಲಹಾ ಸಮಿತಿ ಸದಸ್ಯ ಅಶ್ರಫ್ ಆಲಿ ಕುಂಞಿ ಮುಂಡಾಜೆ ಉಪಸ್ಥಿತರಿದ್ದರು.
ಸಾನಿಧ್ಯ ವಿಶೇಷ ಶಾಲಾ ಮೇಲ್ವಿಚಾರಕಿ ಮಲ್ಲಿಕಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗಳಾದ ಎಂ.ಜೆ ಜೋಸೆಫ್, ರಾಧಿಕ, ಸುಲೋಚನ, ಈರಣ್ಣ, ಬೆಳ್ತಂಗಡಿ ನಗರ ಪುರ್ನವಸತಿ ಕಾರ್ಯಕರ್ತೆ ಫೌಝಿಯಾ ಮತ್ತು ವಿಕಲಚೇತನರ ಬ್ಯಾಂಕ್ ಪರವಾಗಿ ಸಹನ್ ಕುಮಾರ್, ಭವ್ಯಾ, ಸಿ.ಕೆ ಚಂದ್ರಕಲಾ, ಸುರೇಶ್ ಮಾಸ್ಟರ್ ಲಾಯಿಲ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಚರಿಷ್ಮಾ, ದಕ್ಷಯ್, ಧನುಷ್, ರಷ್ಮತಾ, ಸಿದ್ದು ಸುರ್ಯವಂಶಿ ಉಪಸ್ಥಿತರಿದ್ದರು.











