23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ-ವಿಜಯ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಯಿಂದ ಎಂ‌.ಜಿ ಶೆಟ್ಟಿಯವರಿಗೆ ನುಡಿನಮನ

ಗುರುವಾಯನಕೆರೆ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ವಿಜಯ ಕ್ರೇಡಿಟ್ ಕೋ- ಅಪರೇಟಿವ್ ಸೊಸೈಟಿ ಗುರುವಾಯನಕೆರೆ ಇದರ ವತಿಯಿಂದ ಅ 30 ರಂದು ನಿಧನರಾದ ಎಂ.ಜಿ ಶೆಟ್ಟಿ ಉಜಿರೆ ಅವರಿಗೆ ನುಡಿ ನಮನ ಕಾರ್ಯಕ್ರಮವು ಗುರುವಾಯನಕೆರೆ ಬಂಟರ ಸಭಾಭವನದಲ್ಲಿ ನ.8 ರಂದು ನಡೆಯಿತು.

ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ,ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕ ಉಪಾಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿದ್ದು ಸಂಘದ ಪ್ರಗತಿಗೆ ಸೇವೆ ಸಲ್ಲಿಸಿ ಅನಿರೀಕ್ಷಿತವಾಗಿ ಅಗಲಿದ ಎಂ.ಜಿ ಶೆಟ್ಟಿಯವರಿಗೆ ಬಂಟರ ಸಂಘ ಹಾಗೂ ವಿಜಯ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರು,ಪದಾಧಿಕಾರಿಗಳು ನುಡಿ ನಮನದ ಮೂಲಕ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ ಶೆಟ್ಟಿ ಮಾತನಾಡಿ ವಿಜಯ ಕ್ರೆಡಿಟ್ ಸೊಸೈಟಿ,ಬಂಟರ ಸಂಘ ಮತ್ತು ಸಮಾಜದ ಬಗ್ಗೆ ಎಂ.ಜಿ ಶೆಟ್ಟಿಯವರು ಅಪಾರವಾದ ಕಾಳಜಿ ಹೊಂದಿದ್ದರು.ನಿರಾಡಂಬರ ಹಾಗೂ ಸದಾ ದುಡಿಮೆಯ ಆದರ್ಶಗಳೊಂದಿಗೆ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಯಾವುದೇ ವಿಚಾರವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ವಿವಿಧ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿದ್ದಾರೆ. ಅವರ ಅಗಲುವಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ನುಡಿ ನಮನ ಸಲ್ಲಿಸಿದರು.

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕಾದ್ಯಕ್ಷರಾದ ಎಸ್ ಜಯರಾಮ್ ಶೆಟ್ಟಿ ಮಾತನಾಡಿ ಎಂ.ಜಿ ಶೆಟ್ಟಿಯವರು ಸದಾ ಜನರ ಉದ್ದರಕ್ಕಾಗಿ ಕೆಲಸ ಮಾಡಿ ಸಮಾಜದಲ್ಲಿ ಉತ್ತಮವಾದ ಹೆಸರು ಸಂಪಾದಿಸಿದ್ದಾರೆ.ಹುಟ್ಟು ಸಾವಿನ ನಡುವೆ ನಾವು ಮಾಡುವ ಕೆಲಸ ಮಾತ್ರ ಶಾಶ್ವತವಾಗಿರುತ್ತದೆ.ಹಾಗೇ ಎಂ.ಜಿ ಶೆಟ್ಟಿಯವರು ಸಮಾಜಮುಖಿಯಾಗಿ ಬದುಕಿದ್ದಾರೆ ಎಂದು ನುಡಿ ನಮನ ಸಲ್ಲಿಸಿದರು.

ಬಂಟರ ಸಂಘದ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ,ವಿಜಯ ಕ್ರೆಡಿಟ್ ಸೊಸೈಟಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕೆ, ನಿರ್ದೇಶಕರಾದ ಸೀತಾರಾಮ ಶೆಟ್ಟಿ ಬಿ,ರಘುರಾಮ ಶೆಟ್ಟಿ ಎ,ಎಂ ಜಯರಾಮ ಭಂಡಾರಿ ಧರ್ಮಸ್ಥಳ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು, ನಿರ್ದೇಶಕರು,ಸದಸ್ಯರು,ಶಾಖಾ ಪ್ರಬಂಧಕರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಂಟರ ಸಂಘದ ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ ಕಾರ್ಯಕ್ರಮ ನಿರೂಪಿಸಿದರು, ವಿಜಯ ಕ್ರೆಡಿಟ್ ಸೊಸೈಟಿ ಸಿಇಓ ಸುಜಯ್ ಶೆಟ್ಟಿ ಸಹಕರಿಸಿದರು.

Related posts

ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಧ್ವಜಸ್ತಂಬ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಹಾಗೂ ಪ್ರತಿಷ್ಠಾ ದಿನಾಚರಣೆ, ವಾರ್ಷಿಕ ಜಾತ್ರೆ ರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಫೆ.21: ಗೆಳೆಯರ ಬಳಗ ನೇರೋಳ್ದ್ ಪಲ್ಕೆ ಮುರ ವತಿಯಿಂದ 13ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Suddi Udaya

ಶಿರ್ಲಾಲು ರಮಾನಂದ ಟೈಲರ್ ನಿಧನ

Suddi Udaya

ದಾರಿ ಮಧ್ಯೆ ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ

Suddi Udaya

ನಿಡ್ಲೆ: ಕಂರ್ಬಿತ್ಲು ನಿವಾಸಿ ಅಚ್ಚುತ ಹೆಬ್ಬಾರ್ ನಿಧನ

Suddi Udaya

ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ: ರಸ್ತೆ ಬದಿ ಬ್ಯಾನರ್ ಹಾಕಿ ಸಾರ್ವಜನಿಕರ ಆಕ್ರೋಶ

Suddi Udaya
error: Content is protected !!