37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ಲೈವುಡ್ ಉತ್ಪನ್ನಗಳ ಪ್ರಖ್ಯಾತ ಮಳಿಗೆ “ಆನ್‌ಪ್ಲೈ” ಲಾಯಿಲದಲ್ಲಿ ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಆರಂಭ ಗೊಂಡು ಪ್ರಖ್ಯಾತಿಗಳಿಸಿರುವ ಜವಳಿ ಮಳಿಗೆ ಆನ್ ಸಿಲ್ಕ್ ನ ಸಹ ಸಂಸ್ಥೆ ಹೋಲ್ ಸೇಲ್ ಹಾಗೂ ರಖಂ ಪ್ಲೈವುಡ್ ಉತ್ಪನ್ನಗಳ ಪ್ರಖ್ಯಾತ ಮಳಿಗೆ ‘ಆನ್‌ಪ್ಲೈ’
ಲಾಯಿಲ ವಿಆರ್‌ಎಲ್ ಕಚೇರಿ ಹತ್ತಿರದ ಸಿಕ್ವೇರ ಕಂಪೌಂಡ್‌ನಲ್ಲಿ ನ.8 ರಂದು ಶುಭಾರಂಭ ಗೊಂಡಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೇಮ್ಸ್ ಪಟ್ಟೇರಿಲ್ ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಡಾ. ಲಾರೆನ್ಸ್ ಮುಕ್ಕುಯಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬಳಿಕ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೇಮ್ಸ್ ಪಟ್ಟೇರಿಲ್ ಪ್ರಾಥ೯ನಾ‌ ವಿಧಿಯನ್ನು ನೆರವೇರಿಸಿ, ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಮಂಗಳೂರು ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬದ್ಯಾರು ಸೈಂಟ್ ರಾಫೆಲ್ ಚರ್ಚ್ ಧರ್ಮಗುರು ಫಾ| ರೋಶನ್ ಕ್ರಾಸ್ತ , ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಸುರೇಶ್ ಬಂಗೇರ ಎಂ.ಡಿ., ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೊ, ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಚೇಯರ್‌ಮೆನ್ ಸಯ್ಯದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಸುಗಂಧಿ, ಸಿಕ್ವೇರಾ ಕಾಂಪ್ಲೆಕ್ಸ್ ಮಾಲಕ ಕ್ಲಿಟಸ್ ವಿಜಯ್ ವಿಲ್ಪ್ರೆಡ್ ಸಿಕ್ವೇರಾ, ಬೆಳ್ತಂಗಡಿ ಧರ್ಮಪ್ರಾಂತ್ಯ ಕೆಪಿಸಿಡಿಸಿ ಸಂಯೋಜಕ ಜೈಸನ್ ಪಟ್ಟೇರಿ, ಕೆಎಸ್‌ಎಂಸಿಎ ಬೆಳ್ತಂಗಡಿ ಘಟಕ ಅಧ್ಯಕ್ಷ ರೆಜಿ ಜಾರ್ಜ್ ಉಪಸ್ಥಿತರಿದ್ದರು.

ಆಡಳಿತ ಪಾಲುದಾರರಾದ ಯೇಸುದಾಸ್ ಎನ್.ಜೆ., ಶ್ರೀಮತಿ ಡಯಾನಾ ಮತ್ತು ಜೀವನ್ ಜೀಸನ್, ಜಿಸ್ನಾ (ಆನ್ ಮರಿಯ) ಆಗಮಿಸಿದ ಅತಿಥಿ-ಗಣ್ಯರನ್ನು ಗೌರವಿಸಿದರು. ಫ್ರಾನ್ಸಿಸ್ ವಿ.ವಿ ಮಡಂತ್ಯಾರು ಕಾಯ೯ಕ್ರಮ ನಿರೂಪಿಸಿದರು. ಜೀವನ್ ಧನ್ಯವಾದವಿತ್ತರು.

ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯ: ನೂತನ ಸಂಸ್ಥೆಯಲ್ಲಿ ಹೋಲ್‌ಸೇಲ್ ಹಾಗೂ ರಖಂ ದರದಲ್ಲಿ ಇರುವ ಉತ್ಪನ್ನಗಳು ಪ್ಲೈವುಡ್, ಬ್ಲಾಕ್ ಬೋರ್ಡ್, ಫ್ಲಶ್ ಡೋರ್, ಲ್ಯಾಮಿನೇಟ್, ಹಾರ್ಡ್ವೇರ್, ವೆನೀರ್, MDF&HDMR ಬೋರ್ಡ್ಗಳು, ಪಿವಿಸಿ ಫೋಮ್ ಬೋರ್ಡ್, WPC ಡೋರ್ ಮತ್ತು ಫ್ರೇಮ್, ಮೆಂಬರನೇ ಡೋರ್, WPC ಬೋರ್ಡ್ಗಳು, ಪಾರ್ಟಿಕಲ್ ಬೋರ್ಡ್ಗಳು ಇತ್ಯಾದಿ ಲಭ್ಯವಿದೆ.

Related posts

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya

ಮಾ.16: ಕನ್ಯಾಡಿ ಸೇವಾಭಾರತಿ 20ನೇ ವರ್ಷದ ಸಂಭ್ರಮ ಹಾಗೂ ರಕ್ತದಾನ ಶಿಬಿರ ಸಾಧನ ಸಲಕರಣೆಗಳ ವಿತರಣೆ , ಸಾಧಕರಿಗೆ ಗೌರವ ಸಮರ್ಪಣೆ ಮತ್ತು ನೂತನ ಟ್ರಸ್ಟಿಗಳ ಸೇರ್ಪಡೆ

Suddi Udaya

ನಿಡ್ಲೆ ಗ್ರಾ.ಪಂ. ನಲ್ಲಿ ರೋಜ್ ಗಾರ್ ದಿನಾಚರಣೆ

Suddi Udaya

25 ಕೋಟಿ ವೆಚ್ಚದಲ್ಲಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ: ಮುಂದಿನ ಮಾರ್ಚ್ ತಿಂಗಳಿನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಂಕಲ್ಪ

Suddi Udaya

ಚೋಳಮಂಡಲಮ್ ಇನ್ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ‌ ಬೆಳ್ತಂಗಡಿಯಲ್ಲಿ ಕಾರ್ಯಾರಂಭ

Suddi Udaya

ಯೂಟ್ಯೂಬ್ ಚಾನಲ್ ನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರ ನಿಂದಿಸಿದ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಇವರ ಮೇಲೆ ಕೇಸು

Suddi Udaya
error: Content is protected !!