27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಿತ್ತಬಾಗಿಲು: ಹೆಚ್ಚಿದ ಕಾಡಾನೆ ಹಾವಳಿ: ಗ್ರಾಮಸ್ಥರಲ್ಲಿ ಆತಂಕ

ಮಿತ್ತಬಾಗಿಲು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಇಲ್ಲಿನ ಜನರಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಕಳೆದ ಹಲವು ದಿನಗಳಿಂದ ಇಲ್ಲಿನ ಒಂದಲ್ಲ ಒಂದು ಭಾಗದಲ್ಲಿ ಕಾಡಾನೆಗಳ ಹಿಂಡು ಕಂಡುಬರುತ್ತಿದೆ. ಸ್ಥಳೀಯರ ಪ್ರಕಾರ ಇಲ್ಲಿ ಎರಡು ಮರಿಯಾನೆ ಸಹಿತ 13 ಆನೆಗಳು ಓಡಾಡುತ್ತಿವೆ. ಕೃಷಿ ನಾಶದ ಜತೆಗೆ ಜನನಿಬಿಡ ಪ್ರದೇಶಗಳವರೆಗೂ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.

ನ.7ರಂದು ಸಂಜೆ 6:30 ಸಮಯ ಇಲ್ಲಿನ ಮಲೆಜೋಡಿ ಎಂಬಲ್ಲಿ ಒಂದು ಮರಿಯಾನೆ ಸಹಿತ ಎಂಟು ಕಾಡಾನೆಗಳು ಕಂಡು ಬಂದಿದೆ. ಇಲ್ಲಿಂದ ಮುಂದುವರಿದ ಹಿಂಡು ಕೋಡಿ,ಅಮೈ,ಕೂಡಾಲ,ಬೆಡಿಗುತ್ತು ಪರಿಸರಗಳಲ್ಲಿ ಓಡಾಟ ನಡೆಸಿದೆ.
ಅರಣ್ಯ ಇಲಾಖೆ ಮತ್ತು ಸ್ಥಳೀಯರು ಸೇರಿ ಕಾಡಾನೆಗಳನ್ನು ಓಡಿಸಿದ ಕಾರಣ ಹೆಚ್ಚಿನ ಕೃಷಿಹಾನಿ ಸಂಭವಿಸಿಲ್ಲ. ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಗ್ರಾಮಗಳು ಒಂದಕ್ಕೊಂದು ಹತ್ತಿರವಿದ್ದು ಇಲ್ಲೆಲ್ಲ ಈ ಕಾಡಾನೆಗಳ ಹಿಂಡು ಸಂಚಾರ ನಡೆಸುತ್ತಿದೆ.
ಮಿತ್ತಬಾಗಿಲು ಗ್ರಾಪಂನಿಂದ ಸ್ಥಳೀಯರಿಗೆ ಅರಣ್ಯ ಪ್ರದೇಶಗಳಲ್ಲಿ ಓಡಾಡದಂತೆ ಈಗಾಗಲೇ ಎಚ್ಚರಿಕೆ ನೀಡಿದ್ದು ಹಗಲಿನ ಹೊತ್ತು ಮುಂಜಾಗ್ರತೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.

ಈ ಗ್ರಾಮಗಳಲ್ಲಿ ಕಳೆದ 15 ವರ್ಷಗಳಿಂದ ಕಾಡಾನೆಗಳ ಕಾಟವಿದ್ದು ಇತ್ತೀಚಿನ ದಿನಗಳಲ್ಲಿ ಇದು ವಿಪರೀತವಾಗಿ ಸಾಕಷ್ಟು ಕೃಷಿ ಹಾನಿ ಜತೆಗೆ ಜನರು ಭಯದಲ್ಲಿ ಜೀವನ ನಡೆಸುವಂತಾಗಿದೆ ಕಾಡಾನೆಗಳ ಕಾಟಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕನ್ನಡ ಭಾಷಣ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಅ. ಪ್ರೌ. ಶಾಲೆ ಶಾಲೆಯ ವಿದ್ಯಾರ್ಥಿನಿ ಕು| ಪ್ರಜ್ಞಾ ದ್ವಿತೀಯ ಸ್ಥಾನ

Suddi Udaya

ಚಿಬಿದ್ರೆಯಲ್ಲಿ ಆನೆ ಹಾವಳಿ: ತೋಟತ್ತಾಡಿಯಲ್ಲಿ ಸಾಕು ನಾಯಿಯ ಮೇಲೆ ಚಿರತೆ ದಾಳಿ

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಯ ಸಾಫ್ಟ್ ವೇರ್ ತಂಡದಿಂದ ಶಾಲೆಗೆ ಬಣ್ಣ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಸ್ಪೆಷಲ್ ಡಿಸ್ಕೌಂಟ್ ಸೇಲ್, ಸಾರಿ ಮೇಳ : ನೇರವಾಗಿ ಫ್ಯಾಕ್ಟರಿಯಿಂದ ಖರೀದಿ, ಗ್ರಾಹಕರಿಗೆ ಶೇ.20 ರಿಯಾಯಿತಿ ದರದಲ್ಲಿ ಮಾರಾಟ

Suddi Udaya

ತೋಟತ್ತಾಡಿ ಚರ್ಚ್ ನಲ್ಲಿ ಯುವಕರಿಂದ ತಯಾರಿಸಲ್ಪಟ್ಟ ೨೨ ಅಡಿ ಎತ್ತರದ ಕ್ರಿಸ್‌ಮಸ್ ನಕ್ಷತ್ರ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ‘ಸಾಧನಾ ಪ್ರಶಸ್ತಿ’

Suddi Udaya
error: Content is protected !!