ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್. ಆಯ್ಕೆಯಾಗಿದ್ದಾರೆ. ದ.ಕ.ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ನ.9ರಂದು ನಡೆದ ಚುನಾವಣೆಯಲ್ಲಿ 2025-28ನೆ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪುಷ್ಪರಾಜ್ 187 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ಬೆಳ್ತಂಗಡಿ ತಾಲೂಕಿನ ಶ್ರವಣ್ ಕುಮಾರ್ ನಾಳ 144 ಮತಗಳನ್ನು ಪಡೆದರು.
ಸುಮಾರು ಮೂರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಪುಷ್ಪರಾಜ್ ೧೯೯೦-೯೧ರಿಂದ ಸಾಕ್ಷರತಾ ಚಟುವಟಿಕೆ, ಶೈಕ್ಷಣಿಕ ಜಾಗೃತಿಯೊಂದಿಗೆ ಮಾಧ್ಯಮ ರಂಗದ ಮೂಲಕ ಪುತ್ತೂರು ತಾಲೂಕು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸಕ್ರಿಯರಾಗಿದ್ದರು. ಬಳಿಕ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ, ಕೋಶಾಧಿಕಾರಿ ಸಹಿತ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿದ್ದರು.
ಉಪಾಧ್ಯಕ್ಷ ಸ್ಥಾನ: ಉಪಾಧ್ಯಕ್ಷರಾಗಿ ವಿಲ್‌ಫ್ರೆಡ್ ಡಿಸೋಜಾ (177) ಮುಹಮ್ಮದ್ ಆರೀಫ್ (180) ಹಾಗೂ ರಾಜೇಶ್ ಶೆಟ್ಟಿ (147) ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಐ.ಬಿ. ಸಂದೀಪ್ ಕುಮಾರ್ (126) ಹಾಗೂ ಗಂಗಾಧರ ಕಲ್ಲಪಳ್ಳಿ (126) ಮತ ಪಡೆದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನ: ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಶ್ರೀನಿವಾಸ ನಾಯಕ್ ಕೆ. (204) ಮತಗಳಿಂದ ಗೆಲುವು ಪಡೆದರು ಅವರ ಪ್ರತಿ ಸ್ಪರ್ಧಿ ಮುಹಮ್ಮದ್ ಅನ್ಸಾರ್ ಇನೋಳಿ (124) ಮತ ಪಡೆದರು.
ಕಾರ್ಯದರ್ಶಿ ಸ್ಥಾನ: ಕಾರ್ಯದರ್ಶಿಯಾಗಿ ಎ.ಸಿದ್ದಿಕ್ ನೀರಾಜೆ (165), ಸುರೇಶ್ ಡಿ.ಪಳ್ಳಿ (218), ಸತೀಶ್ ಇರಾ (256) ಮತಗಳನ್ನು ಪಡೆದರು ಇವರುಗಳ ಪ್ರತಿ ಸ್ಪರ್ಧಿ ರಾಜೇಶ್ ಕುಮಾರ್ ಡಿ. (139) ಮತಗಳನ್ನು ಗಳಿಸಿದರು. ಕೋಶಾಧಿಕಾರಿಯಾಗಿ ವಿಜಯ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನ:
ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅಶೋಕ್ ಶೆಟ್ಟಿ ಬಿ.ಎನ್. (೧೩೫), ಸಂದೇಶ್ ಜಾರ (೧೯೫), ಸಂದೀಪ್ ಕುಮಾರ್ ಎಂ. (೧೪೫), ಲಕ್ಷ್ಮೀ ನಾರಾಯಣ ರಾವ್ (೧೬೩), ಹರೀಶ್ ಮೋಟುಕಾನ (೧೮೬), ದಿವಾಕರ ಪದ್ಮುಂಜ (೨೦೧), ಕಿರಣ್ ಯು. ಸಿರ್ಸೀಕರ್ (೧೨೨), ಅಭಿಷೇಕ್ ಎಚ್.ಎಸ್. (೧೨೬), ಜಯಶ್ರೀ (೧೮೪), ಭುವನೇಶ್ವರ ಜಿ. (೧೯೯), ಸಂದೀಪ್ ವಾಗ್ಲೆ (೨೧೭), ಹರೀಶ್ ಕೆ ಆದೂರ್ (೧೫೨), ಗಿರೀಶ್ ಅಡ್ಡಂಗಾಯ (೧೪೧), ಸಂದೀಪ್ ಸಾಲ್ಯಾನ್(೧೭೧) ಹಾಗೂ ಆರೀಫ್ ಕಲ್ಕಟ್ಟಿ (೧೩೩) ಮತಗಳನ್ನು ಪಡೆದರು ಇವರುಗಳ ಪ್ರತಿ ಸ್ಪರ್ಧಿ ಪ್ರಕಾಶ್ ಸುವರ್ಣ (೧೧೭), ಶಶಿಧರ ಬಂಗೇರ (೧೧೫), ಮಂಜುನಾಥ್ ಕೆ.ಪಿ (೪೯), ಪ್ರವೀಣ್ ರಾಜ್ ಕೆ.ಎಸ್.(೧೧೪), ಲೋಕೇಶ್ ಸುರತ್ಕಲ್ (೧೧೬) ಹಾಗೂ ಶೇಕ್ ಜೈನುದ್ದೀನ್(೯೪) ಮತಗಳನ್ನು ಪಡೆದರು.
ಸಮಿತಿಯಲ್ಲಿ ಬೆಳ್ತಂಗಡಿಯ ಪತ್ರರ್ಕತರು:
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೆಳ್ತಂಗಡಿ ತಾಲೂಕಿನ ನಾಳದ ಶ್ರವಣ್ ಕುಮಾರ್ ಸ್ಪರ್ಧಿಸಿದ್ದರು. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ತಾಲೂಕಿನ ಭುವನೇಶ್ ಗೇರುಕಟ್ಟೆ, ದಿವಾಕರ ಪದ್ಮುಂಜ ಹಾಗೂ ಹೊಸಂಗಡಿ ಸಮೀಪದ ಪೆರಿಂಜೆಯ ಹರೀಶ್ ಆದೂರು ಆಯ್ಕೆಯಾಗಿದ್ದಾರೆ. ಪ್ರಧನಾ ಕಾರ್ಯದರ್ಶಿಯಾಗಿ ತಾಲೂಕಿನ ಕಿಲ್ಲೂರಿನ ರಾಜೇಶ್ ಕೆ. ಅವಿರೋಧವಾಗಿ ಆಯ್ಕೆಯಾದರು.











