September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಿತ್ತಬಾಗಿಲು ವಿಭಾಷ್ ಮತ್ತು ವಿಭಾ – ಕರಾಟೆ ಅಖಾಡದಲ್ಲಿ ಚಾಂಪಿಯನ್‌ಶಿಪ್‌ ದ್ವಿರತ್ನ ಸಾಧನೆ

ಬೆಳ್ತಂಗಡಿ: ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಮತ್ತು ಒಕಿನಾವನ್ ಶೋಟೋಕನ್ ಕರಾಟೆ-ಡೋ ಇಂಟರ್ನ್ಯಾಷನಲ್ ಅವರ ಆಶ್ರಯದಲ್ಲಿ ನಡೆದ 4ನೇ ದಕ್ಷಿಣ ಭಾರತ ಓಪನ್ ಕರಾಟೆ ಚಾಂಪಿಯನ್‌ಶಿಪ್ – 2025 ಸ್ಪರ್ಧೆ, ನ.9ರಂದು ಜೆ.ಪಿ.ನಗರದ ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಜೆ. ಪಿ ನಗರ, ಬೆಂಗಳೂರು ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಸ್ಪರ್ಧೆಯಲ್ಲಿ ಜೆ.ಪಿ.ನಗರದ ಯಲೆಚೆನಹಳ್ಳಿಯ ಸನ್ ಜ್ಯುಪಿಟರ್ ಇಂಟರ್‌ನ್ಯಾಷನಲ್ ಶಾಲೆಯ 3ನೇ ತರಗತಿ ವಿದ್ಯಾರ್ಥಿಗಳು ಎ. ವಿಭಾಷ್ ವಿನಯಚಂದ್ರ ಮತ್ತು ಎ. ವಿಭಾ ವಿನಯಚಂದ್ರ (ಹಳದಿ ಬೆಲ್ಟ್, ಕಿರಿಯ ವಿಭಾಗ) ಅವರು ಭಾಗವಹಿಸಿ, ತಲಾ ಎರಡು ಟ್ರೋಫಿಗಳನ್ನು ಗೆದ್ದು ತಮ್ಮ ಅಪಾರ ಪ್ರತಿಭೆ ಮತ್ತು ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು.

ಮಿತ್ತಬಾಗಿಲು ಗ್ರಾಮದ ಆಚಾರಿಬೆಟ್ಟು ಮನೆಯ ಈ ಅವಳಿ ಮಕ್ಕಳು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇವರ ಪೋಷಕರು ವಿನಯಚಂದ್ರ (ವಕೀಲರು, ಕರ್ನಾಟಕ ಹೈಕೋರ್ಟ್) ಮತ್ತು ಶ್ರೀಮತಿ ಅಮಿತಾ. ಈ ಇಬ್ಬರ ಅದ್ಭುತ ಪ್ರದರ್ಶನವು ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಇವರ ತರಬೇತಿದಾರರಾದ ರಾಜೇಂದ್ರ ಬಾಬು ಮತ್ತು ಗೀತಾ ಅವರು ಮಾರ್ಗದರ್ಶನ ನೀಡಿದರು.

Related posts

ಬೆಳ್ತಂಗಡಿಯ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಕೊಲ್ಲಿ: ನೋಣಯ್ಯ ದೇವಾಡಿಗ ನಿಧನ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದಿಂದ ಆಟಿದ ಪೊಲಬು

Suddi Udaya

ಮೊಗ್ರು: ಶ್ರೀರಾಮ ಶಿಶು ಮಂದಿರದಲ್ಲಿ ವನಮಹೋತ್ಸವ

Suddi Udaya

ಸಂಗೀತ ಜೂನಿಯರ್ ಪರೀಕ್ಷೆ: ಬೆಳ್ತಂಗಡಿ ಎಸ್. ಡಿ. ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಪ್ರಾಪ್ತಿ ವಿ. ಶೆಟ್ಟಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya

ಬಿಜೆಪಿ ಕಳೆಂಜ ಬೂತ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya
error: Content is protected !!