ಬೆಳ್ತಂಗಡಿ: ಮಂಗಳೂರು ವಿಲ್ಲಂಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ-ಉಜಿರೆ ಸಂಪರ್ಕ ರಸ್ತೆಯಲ್ಲಿ ತೇಪೆ ಕಾರ್ಯ ಹಾಕುತ್ತೀರುವ ಪರಿಣಾಮ ಬೆಳ್ತಂಗಡಿ ಪಟ್ಟಣದಿಂದ ಕೊಯ್ಯೂರು ಕ್ರಾಸ್ ವರೆಗೆ ವಾಹನ ದಟ್ಟಣೆ ಹೆಚ್ಚಾದ ಘಟನೆ ನ.10 ರಂದು ಸಂಭವಿಸಿದೆ.


ಸೋಮವಾರ ಬೆಳ್ತಂಗಡಿಯಲ್ಲಿ ವಾರದ ಸಂತೆ ವ್ಯಾಪಾರ ನಡೆಯುತ್ತದೆ ಇದರ ಪರಿಣಾಮ ಆಗಾಗ ಸೋಮವಾರ ಟ್ರಾಫಿಕ್ ಜಾಮ್ ಆಗುವುದು ಸರ್ವೇ ಸಾಮಾನ್ಯ ಆದರೆ ಹಿಂದೆ ತೇಪೆ ಕಾರ್ಯ ಕೈಗೊಂಡಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.











