ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” — ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್‌ನಿಂದ ಸಿಯೋನ್ ಆಶ್ರಮಕ್ಕೆ ನೆರವು

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಚರ್ಚ್ ತೊಡಂಬಿಲ, ಚರ್ಚ್‌ನ ಧರ್ಮಗುರುಗಳಾದ ವಂದನೀಯ ಅಂತೋನಿ ಲೋಬೊರವರ ಮಾರ್ಗದರ್ಶನದಲ್ಲಿ, ಕಾರ್ಮಿಕ, ಪರಿಸರ ಮತ್ತು ಅಂತರ್ಧರ್ಮೀಯ ಆಯೋಗಗಳ ಸಂಯುಕ್ತ ಪೋಷಕತ್ವದಲ್ಲಿ, “ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” ಎಂಬ ಪರಿಕಲ್ಪನೆಯಡಿ ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲಿನ ಅಸಹಾಯಕರಿಗೆ ಸುಮಾರು ರೂ. 2 ಲಕ್ಷ ಮೌಲ್ಯದ ನಿತ್ಯೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್ ರವರಿಗೆ ಹಸ್ತಾಂತರಿಸಲಾಯಿತು.

ಈ ಉತ್ತಮ ಸೇವಾ ಚಟುವಟಿಕೆಯನ್ನು ಶ್ಲಾಘಿಸಿದ ಡಾ. ಯು.ಸಿ. ಪೌಲೋಸ್ ರವರು ಮಾತನಾಡಿ, “ ಅಸಹಾಯಕರಿಗೆ ಹೃದಯಗಳ ಬಾಂಧವ್ಯತೆ ನಿರ್ಮಿಸಲು ಇದು ದಾನಭಾವನೆಯ ಸುಂದರ ನಿದರ್ಶನ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಚರ್ಚ್‌ನ ಪಾಲನಾ ಮಂಡಳಿ ಸದಸ್ಯರು, ವಿವಿಧ ಆಯೋಗ ಸದಸ್ಯರು ಹಾಗೂ ಚರ್ಚ್‌ನ ಭಕ್ತಜನರು ಉಪಸ್ಥಿತರಿದ್ದರು.

Related posts

ಉಜಿರೆ: ಎಸ್.ಡಿ.ಎಂ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಅಭಿರಾಮ್ ಹೆಚ್.ವೈ. ರಿಗೆ ಡಿ. ಹರ್ಷೇಂದ್ರ ಕುಮಾರ್ ರವರು ಉಚಿತ ಲ್ಯಾಪ್‌ಟಾಪ್ ನೀಡಿ ಪ್ರೋತ್ಸಾಹ

Suddi Udaya

ಭಾರತೀಯ ಸೇನೆಗೆ ನೇಮಕಗೊಂಡಿರುವ ಬಳಂಜದ ಯುವಕ ಮನೋಹರ್ ಪೂಜಾರಿಯವರಿಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗೌರವಾರ್ಪಣೆ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಪಿಎಮ್ ಕಿಸಾನ್ ಯೋಜನೆಯ ಇ-ಕೆವೈಸಿ ಕಾರ್ಯಕ್ರಮ

Suddi Udaya

ಹೊಕ್ಕಾಡಿಗೋಳಿ ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಇದರ ಆಶ್ರಯದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕು| ಮಾನ್ವಿ ಪ್ರಥಮ ಸ್ಥಾನ

Suddi Udaya

ಜೆಸಿಐ ವಲಯ 15 ರ ತರಬೇತಿ ವಿಭಾಗಕ್ಕೆ ಜೆಸಿಐ ಬೆಳ್ತಂಗಡಿಯ ಆಶಾಲತಾ ಪ್ರಶಾಂತ್ ಸಂಯೋಜಕರಾಗಿ ನಿಯೋಜನೆ

Suddi Udaya
error: Content is protected !!