32.9 C
ಪುತ್ತೂರು, ಬೆಳ್ತಂಗಡಿ
March 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಾಜ್ಯ”ಮಿನಿ ಒಲಿಂಪಿಕ್“: ಶಿಶಿರ್ ಜಯವಿಕ್ರಮ್ ನಾಯಕತ್ವದ ದ.ಕ. ವಾಲಿಬಾಲ್ ತಂಡ ಪ್ರಥಮ ಸ್ಥಾನ

ಬೆಳ್ತಂಗಡಿ: ಕರ್ನಾಟಕ ರಾಜ್ಯ”ಮಿನಿ ಒಲಿಂಪಿಕ್“ ಹದಿನಾಲ್ಕು ವರ್ಷ ಕೆಳಗಿನ ವಯೋಮಿತಿಯ ಪಂದ್ಯಾ ಕೂಟದಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾರ್ಥಿ ಶಿಶಿರ್ ಜಯವಿಕ್ರಮ್ ನಾಯಕತ್ವದ ದಕ್ಷಿಣ ಕನ್ನಡ ವಾಲಿಬಾಲ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ನ 5 ರಿಂದ 7 ರ ವರೆಗೆ ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ “ಮಿನಿ ಒಲಿಂಪಿಕ್ “ಕ್ರೀಡಾಕೂಟದಲ್ಲಿ ರಾಜ್ಯದ ಎಂಟು ಪ್ರತಿಷ್ಠಿತ ತಂಡಗಳಾದ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಹಾಸನ, ಕಲಬುರ್ಗಿ,ಉತ್ತರ ಕನ್ನಡ, ಕೋಲಾರ, ಬಳ್ಳಾರಿ ತಂಡಗಳನ್ನು ಒಳಗೊಂಡ ಲೀಗ್ ಮಾದರಿಯ ಪಂದ್ಯಾ ಕೂಟದಲ್ಲಿ ದಕ್ಷಿಣ ಕನ್ನಡ ತಂಡವು ಫೈನಲ್ ನ ಜಿದ್ದಾಜಿದ್ದಿನ ಐದು ಸೆಟ್ಟಿನ ಪಂದ್ಯದಲ್ಲಿ ಸತತ ಮೂರು ಸೆಟ್ಟನ್ನು ಗೆಲ್ಲುವ ಮೂಲಕ ಪ್ರಥಮ ಸ್ಥಾನವನ್ನು ಪಡೆದು ಟ್ರೋಫಿಯನ್ನು ತನ್ನದಾಗಿಸಿಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದೆ.

ತಂಡದ ಮುಖ್ಯ ಕೋಚ್ ಆಗಿ ನೆಲ್ಯಾಡಿಯ ಬೆಥನಿ ಶಾಲೆಯ ದೈಹಿಕ ಶಿಕ್ಷಕರಾದ ಮನೋಜ್ ರವರು ಕಾರ್ಯ ನಿರ್ವಹಿಸಿದರು ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರೀಯ ಆಟಗಾರ ಲಕ್ಷ್ಮೀನಾರಾಯಣ, ಜಾಗಿರ್ದಾರ್, ಬಸವರಾಜ ಮುಂಡಗೋಳ, ವಾಲಿಬಾಲ್ ಅಸೋಸಿಯೇಷನ್ ನ ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ,ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related posts

ಉಜಿರೆ ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಚಿಣ್ಣರ ಯೋಗ ಶಿಬಿರ ಉದ್ಘಾಟನೆ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಮಾದಕ ವಸ್ತುಗಳ ವಿರೋಧಿ ದಿನಾಚರಣೆ

Suddi Udaya

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಜನಾರ್ದನ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ: ರೈತರು ಫ್ರುಟ್ಸ್ ಐ.ಡಿ. ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಮನವಿ

Suddi Udaya

ಮನೆಗೆ ಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತೆರವು ಕಾರ್ಯ

Suddi Udaya

ಎಸ್.ಡಿ.ಎಂ ಐಟಿ ಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಮಿನಿ ಪ್ರಾಜೆಕ್ಟ್ ಪ್ರದರ್ಶನ

Suddi Udaya
error: Content is protected !!