24.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನ.15: ಉಜಿರೆಯ ಶ್ರೀ ಧ.ಮ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಹಳೇ ನಾಣ್ಯಗಳು ಹಾಗೂ ಪುರಾತನ ವಸ್ತುಗಳ ಪ್ರದರ್ಶನ

ಉಜಿರೆ: ಶ್ರೀ ಧ.ಮ. ಶಿಕ್ಷಣ ಸಂಸ್ಥೆ , ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಮಂಗಳೂರಿನ ಶಕ್ತಿ ನಗರದಲ್ಲಿರುವ ದಕ್ಷಿಣ ಕನ್ನಡ ಫಿಲೇಟೆಲಿ ಮತ್ತು ನ್ಯೂಮಿಸ್ಮ್ಯಾಟಿಕ್ ಅಸೋಸಿಯೇಷನ್ (DKPANA)ಇವರು ಜಂಟಿಯಾಗಿ ನ.15 ರಂದು ಉಜಿರೆಯ ಶ್ರೀ ಧ.ಮ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ವಸ್ತು ಪ್ರದರ್ಶನದಲ್ಲಿ, ಹಳೇ ನಾಣ್ಯಗಳು, ಸ್ಟಾಂ ಗಳು, ಅನೇಕ ಪುರಾತನ ವಸ್ತುಗಳು, ಅವುಗಳ ಜತೆಗೆ ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಸಂಗ್ರಹದ ಕೆಲವು ವಸ್ತುಗಳ ಪ್ರದರ್ಶನ ನಡೆಯಲಿದೆ. ವಿದ್ಯಾರ್ಥಿಗಳಿಗೆ ಅತೀ ಉಪಯುಕ್ತ ಮಾಹಿತಿ ಸಿಗಲಿರುವ ಈ ವಸ್ತು ಪ್ರದರ್ಶನ, ಆ ದಿನ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯ ವರೇಗೆ ನಡೆಯಲಿರುವುದು.
ಶ್ರೀ ಧ.ಮ. ಎಜುಕೇಷನಲ್ ಸೊಸೈಟಿಯ ಐಟಿ ವಿಭಾಗದ ಸಿ. ಇ.ಓ ಪೂರಣ್ ವರ್ಮರವರು ವಸ್ತು ಪ್ರದರ್ಶನದ ಉದ್ಘಾಟನೆ ಮಾಡಲಿರುವರು. ಮುಖ್ಯ ಅತಿಥಿಗಳಾಗಿ DKPANA ಅಧ್ಯಕ್ಷ ಮರ್ಕಡ್ ಪ್ರಭಾಕರ ಕಾಮತ್, ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು, ಕಾರ್ಯದರ್ಶಿ ರೊ. ಡಾ. ಎಂ.ಎಂ ದಯಾಕರ್ ಉಪಸ್ಥಿತರಿವರು.

ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ಕಾರ್ಯಕ್ರಮದ ಸಂಚಾಲಕಿ ಡಾ. ವಿದ್ಯಾ ಶ್ರೀಹರಿಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಕಲ್ಮಂಜ: ನಿಡಿಗಲ್ ನಿವಾಸಿ ಶರೀಫ್ ಚಮ್ಮು ನಿಧನ

Suddi Udaya

ಜೀವ ಬೆದರಿಕೆ ಆರೋಪ : ಕೆ.ಎನ್ ಗೌಡರಿಂದ ಠಾಣೆಗೆ ದೂರು

Suddi Udaya

ಮುಂಡಾಜೆ: ಮೊಬೈಲ್ ಟವರ್ ಕುಸಿಯುವ ಭೀತಿ-ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Suddi Udaya

ಉಜಿರೆ: ನಿನ್ನಿಕಲ್ಲು ನಿವಾಸಿ ಶಿವರಾಮ ಕಾರಂತ್ ನಿಧನ

Suddi Udaya

ಧರ್ಮಸ್ಥಳದಲ್ಲಿ ನೂತನ ಶಿಲಾಮಯ ಧ್ವಜಸ್ತಂಭಕ್ಕೆ ಭವ್ಯ ಸ್ವಾಗತ

Suddi Udaya

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ -ಕಾಲೇಜು ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!