25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಲಿಂಗ ಸಮಾನತಾ ಪ್ರೇರಣಾ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿ

ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಿಂದ ನಡೆಸುತ್ತಿರುವ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿರುವ ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿಯನ್ನು ಜ್ಞಾನ ನಿಲಯ ಬೆಳ್ತಂಗಡಿ ಇಲ್ಲಿ ನ.10 ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಿನಿ ರಾಜ್ಯ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಜೋನ್ ವಹಿಸಿದ್ದರು. ಉದ್ಘಾಟನೆಯನ್ನು ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ. ಬಿನೋಯಿ ಎ.ಜೆ ನೆರವೇರಿಸಿದರು. ಕ್ರಾಸ್ ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕ ರಾಜಶೇಖರ್ ರವರು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಸಂಪದ ಸಂಸ್ಥೆಯ ಸಂಯೋಜಕ ಸ್ಟ್ಯಾನ್ಲಿ ಫೆರ್ನಾಂಡಿಸ್ ರವರು ಲಿಂಗ ಸಮಾನತೆ ಬಗ್ಗೆ ತಿಳಿದುಕೊಂಡು ಕುಟುಂಬ ಮತ್ತು ಸಮುದಾಯದ ಬೆಳವಣಿಗೆಗೆ ಶ್ರಮಿಸಬೇಕು. ಬದಲಾವಣೆಗಳು ನಮ್ಮಿಂದ ಆಗಬೇಕು, ಮಕ್ಕಳನ್ನು ಗಂಡು ಮತ್ತು ಹೆಣ್ಣು ಎಂಬ ಭೇದವಿಲ್ಲದೆ ಸಮಾನವಾಗಿ ಬೆಳೆಸಬೇಕು, ಆಗ ಮಾತ್ರ ಘನತೆ ಮತ್ತು ಗೌರವದ ಜೀವನ ನಡೆಸಲು ಸಾಧ್ಯ ಎಂಬ ಬಗ್ಗೆ ತರಬೇತಿಯನ್ನು ನೀಡಿದರು. ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಎಲಿಯಮ್ಮ ತೋಮಸ್ ಸ್ವಾಗತಿಸಿದರು. ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಂಜುಳಾ ವಂದಿಸಿದರು. ಯೋಜನಾ ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೋ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರು ಹಾಗೂ ಮಹಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Related posts

ಜೆ ಸಿ ಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಎಸ್. ಎಸ್.ಎಲ್.ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮೇಘನಾ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ : ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನ: ಶ್ರೀ ಧ. ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಅಮೃತಾ 622 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ

Suddi Udaya

ಬೆಳ್ತಂಗಡಿ: ತುಳುನಾಡ್ ಒಕ್ಕೂಟ ಸಂಘಟನೆಯ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ವಸಂತ ಬಂಗೇರರ ಉತ್ತರಕ್ರಿಯೆ ಅಂಗವಾಗಿ ಅಭಿಮಾನಿಗಳ ಸಮಾಲೋಚನಾ ಸಭೆ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೀಲೇಶ್ವರದ ತಂತ್ರಿವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಗಳ ಭೇಟಿ

Suddi Udaya
error: Content is protected !!