25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಇಳಂತಿಲ: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಇಳಂತಿಲ: ಎಸ್ ಎಸ್ ಎಲ್ ಸಿ ವಿಧ್ಯಾರ್ಥಿನಿಯೊಬ್ಬಳು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಘಟನೆ ನ.12ರಂದು ನಡೆದಿದೆ.

ಘಟನೆ ವಿವರ: ಇಳಂತಿಲ ಪಾರಡ್ಕ ಮನೆ, ನಿವಾಸಿ ತಂದೆ ಶ್ರೀಧರ ಕುಂಬಾರ ರವರ ದೂರಿನಂತೆ ಹರ್ಷಿತಾ, ( 15 ವರ್ಷ) ಉಪ್ಪಿನಂಗಡಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದು, ನ.04 ರಂದು ತಲೆನೋವು ಎಂದು ಹೇಳಿ ಶಾಲೆಗೆ ಹೋಗದೇ ಇಳಂತಿಲ ಗ್ರಾಮದ ಪಾರಡ್ಕ ಎಂಬಲ್ಲಿ ಮನೆಯಲ್ಲಿದ್ದವಳು ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡವಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನ.12 ರಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾಳೆ. ಹರ್ಷಿತಾಳಿಗೆ ಕಡಬದ ರಾಜೇಶ್ ಎಂಬಾತನು ಫೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇರುವುದರಿಂದ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯವಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Related posts

ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಉಜಿರೆಯಲ್ಲಿ ಭವ್ಯ ಸ್ವಾಗತ: ಶ್ರೀಗಳಿಂದ ಜನಾರ್ದನ ದೇವರ ದರ್ಶನ,ಸ್ವಾಮೀಜಿಯವರಿಗೆ ಪೌರ ಸನ್ಮಾನ: ಕೇರಳ ಶೈಲಿಯ ಚಂಡೆ ವಾದನ, ವಯೊಲಿನ್, 22 ತಂಡಗಳಿಂದ ಭಜನೆ, ಸ್ಯಾಕ್ಸೋಫೋನ್ ವಾದನದೊಂದಿಗೆ ಮೆರವಣಿಗೆ

Suddi Udaya

ಡಾ. ಯಶೋವರ್ಮರ ಸ್ಮರಣಾರ್ಥ ಪರಿಸರ ನಿರ್ವಹಣಾ ಕಾರ್ಯಾಗಾರ

Suddi Udaya

ಯಕ್ಷಭಾರತಿ ಸಂಸ್ಥೆಯ ವತಿಯಿಂದ ಕೋಳ್ಯೂರು ರಾಮಚಂದ್ರ ರಾವ್ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

Suddi Udaya

ಹೊಚ್ಚ ಹೊಸ ಸಂಗ್ರಹದೊಂದಿಗೆ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್ 10% ಡಿಸ್ಕೌಂಟ್ ಸೇಲ್

Suddi Udaya

ಎಸೆಸೆಲ್ಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರೇ ಮೇಲುಗೈ

Suddi Udaya
error: Content is protected !!