July 23, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ನಲ್ಲಿ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಜ್ಯೋತ್ಸವ ಆಚರಣೆ ಎಕ್ಸೆಲ್ ವಿದ್ಯಾಸಂಸ್ಥೆ ಸದಾ ಕನ್ನಡದ ಸೇವೆಗೆ ಸಿದ್ಧ: ಸುಮಂತ್ ಕುಮಾರ್ ಜೈನ್

ಗುರುವಾಯನಕೆರೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಘಟಕ ಹಾಗೂ ಎಕ್ಸೆಲ್ ಪದವಿಪೂರ್ವ ಕಾಲೇಜು, ಗುರುವಾಯನಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯು ನ.12ರಂದು ವಿಜೃಂಭಣೆಯಿಂದ ಜರುಗಿತು.

ಈ ಕಾರ್ಯಕ್ರಮವನ್ನು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆ, ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿರು. ಹಾಗೂ ಅತಿಥಿ ಅಭ್ಯಾಗತರೊಂದಿಗೆ ಕನ್ನಡ ನಾಡದೇವಿ ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಿದರು. ಇವರು ಉದ್ಘಾಟನಾ ಭಾಷಣದಲ್ಲಿ ” ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸುದರೊಂದಿಗೆ ಎಕ್ಸೆಲ್ ವಿದ್ಯಾಸಂಸ್ಥೆ ಸದಾ ಕನ್ನಡದ ಸೇವೆಗೆ ಸಿದ್ಧ, ಈ ಹಿಂದಿನಿಂದಲೂ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಿತ್ತಾ ಬಂದಿದ್ದೇವೆ ಇನ್ನು ಮುಂದೆ ಕೂಡ ಕನ್ನಡದ ಕಾರ್ಯಕ್ರಮಗಳನ್ನು ನಡೆಸೆಕೊಂಡು ಬರಲಿದ್ದೇವೆ. ಇದೇ ನವೆಂಬರ್ 27 ರಂದು ಅಕ್ಷರೋತ್ಸವ- ಕವಿಗೋಷ್ಠಿ ಅದ್ದೂರಿಯಾಗಿ ನಡೆಸಲಿದ್ದೇವೆ. ಎಲ್ಲರೂ ಕೂಡ ಭಾಷಾ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು” ತಿಳಿಸಿದರು. ನಂತರ ಶ್ರೀಯುತರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ಘಟಕ ಇವರ ವತಿಯಿಂದ ಗೌರವ ಸಮರ್ಪಣೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಹಾವೀರ ಜೈನ್, ಕನ್ನಡ ಉಪನ್ಯಾಸಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು, ಉಜಿರೆ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ” ಕನ್ನಡದ ನೆಲ ಜಲ ಬಳಸಿಕೊಳ್ಳುವ ನಾವು ಕನ್ನಡದ ನೆಲಕ್ಕೆ ನಿಷ್ಠರಾಗಿರಬೇಕು ಆಗಿರಬೇಕು, ಜಗತ್ತಿನ 6,000 ಭಾಷೆಗಳಲ್ಲಿ 3000 ಭಾಷೆಗಳು ಭಾರತದಲ್ಲಿವೆ ಅವುಗಳಲ್ಲಿ ನಮ್ಮ ಕನ್ನಡವು ಒಂದು ಭಾಷೆ ಕೇವಲ ಭಾವನೆಗಳನ್ನು ಹಂಚಿಕೊಳ್ಳುವ ಮಾಧ್ಯಮ ಮಾತ್ರವಲ್ಲ ಅದು ಸಂಸ್ಕಾರ ನಿರ್ಮಿಸಿಕೊಳ್ಳುವ ವ್ಯವಸ್ಥೆ, ಬದುಕಿನಲ್ಲಿ ತಾಳ್ಮೆ ಮುಖ್ಯ ಒಬ್ಬ ವ್ಯಕ್ತಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುವುದು ಅವನ ಆಕಾರ ಸೌಂದರ್ಯ ಜಾತಿಯಿಂದಲ್ಲ ಅವನಲ್ಲಿ ಹುದುಗಿರುವ ಸಂಸ್ಕಾರದಿಂದ ವ್ಯಕ್ತಿತ್ವದಿಂದ ಹಾಗಾಗಿ ವಿದ್ಯಾರ್ಥಿಗಳಾದ ನೀವು ಗುರುತಿಸಿಕೊಳ್ಳಬೇಕಾದದ್ದು ನಿಮ್ಮ ಸಂಸ್ಕೃತಿ ವ್ಯಕ್ತಿತ್ವ ಹಾಗೂ ಪ್ರತಿಭೆಯಿಂದ, ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಬೇಕು ಆದರೆ ರಿಮಾರ್ಕ್ ಇಲ್ಲದಂತೆ ಬದುಕಬೇಕು ಆದ್ದರಿಂದ ಎಲ್ಲರೂ ಗುರುಹಿರಿಯರಿಗೆ ಬಾಗುವುದನ್ನು ಕಲಿಯಬೇಕು” ಎಂದು ಸದುಪದೇಶ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಘಟಕ ಇದರ ಅಧ್ಯಕ್ಷರಾದ ಡಿ. ಯದುಪತಿ ಗೌಡ ಇವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ” ಭಾಷೆ ಸಂಸ್ಕೃತಿಯ ಒಂದು ಪನ್ನ, ಕರ್ನಾಟಕ ಸಂಸ್ಕೃತಿಯಲ್ಲಿ ಬೇರೆ ಬೇರೆ ಸಂಸ್ಕೃತಿಗಳಿವೆ ಅದರಲ್ಲಿ ಕನ್ನಡ ಸಂಸ್ಕೃತಿಯು ಒಂದು ಅಂದರೆ ಕನ್ನಡ ಭಾಷೆ ಒಳಗೊಂಡಿರುವ ಸಂಸ್ಕೃತಿ, ಒಂದು ಭಾಷೆ ಅಳಿದರೆ ಒಂದು ಸಂಸ್ಕೃತಿ ಅಳಿದರೆ ಹಾಗೆ, ಭಾಷೆ ಒಂದು ಸಂಸ್ಕೃತಿಯ ಉತ್ಪನ್ನ, ಹಾಗಾಗಿ ಒಂದು ಭಾಷೆ ಉಳಿದರೆ ಒಂದು ಸಂಸ್ಕೃತಿ ಉಳಿದಂತೆ, ಆದ್ದರಿಂದ ನಾವು ನೀವೆಲ್ಲ ಕನ್ನಡ ಭಾಷೆಯನ್ನು ಬಳಸಿ ಬೆಳೆಸುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜು, ಗುರುವಾಯನಕೆರೆ, ಇಲ್ಲಿನ ಅರಮಲೆ ಬೆಟ್ಟ ಕ್ಯಾಂಪಸ್‌ನ ಪ್ರಾಂಶುಪಾಲರಾದ ಡಾ. ಪ್ರಜ್ವಲ್ ಜೆ. ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಶ್ರೀಮತಿ ಶೀಲಾ ಎಸ್. ಹೆಗಡೆ ಇವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕನ್ನಡ ಉಪನ್ಯಾಸಕರಾದ ಶ್ರೀ ತಿಪ್ಪೇಸ್ವಾಮಿ ಎಸ್. ಇವರು ಸ್ವಾಗತಿಸಿದರು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಹೋಬಳಿ ಘಟಕ ಇದರ ಅಧ್ಯಕ್ಷರಾದ ಡಾ. ದಿವಾ ಕೊಕ್ಕಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಎಲ್ಲರನ್ನು ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಪ್ರಸನ್ನ ಭೋಜ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಉರುವಾಲು: ಶ್ರೀ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಶಟಲ್ ಬ್ಯಾಡ್ಮಿಂಟನ್: ವಾಣಿ ಆಂ.ಮಾ. ಶಾಲೆಯ ಪ್ರಾಥಮಿಕ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ನಾರಾವಿಯ ಶರತ್ ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ಆಯ್ಕೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಗಣೇಶ ಚತುರ್ಥಿ ದಿನದಂದು ಸೇವಾ ರಶೀದಿಗಳಿಂದ ಒಟ್ಟು ರೂ. 16,62,947 ಹಣ ಸಂಗ್ರಹ : 8000 ಭಕ್ತರಿಂದ ಅನ್ನ ಪ್ರಸಾದ ಸ್ವೀಕಾರ

Suddi Udaya

ಜೆಸಿಐ ಮಧ್ಯಂತರ ಸಮ್ಮೇಳನದಲ್ಲಿ ಉಜಿರೆ ಜೆಸಿಐ ಸಿಟಿಗೆ ಹೊಸ ಘಟಕ ಔಟ್ ಸ್ಟ್ಯಾಂಡಿಂಗ್ ವಿನ್ನರ್ ಅವಾರ್ಡ್ ನೊಂದಿಗೆ ಹಲವು ಮನ್ನಣೆಗಳು

Suddi Udaya

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ: ಪ್ರಧಾನಮಂತ್ರಿ, ಉಪರಾಷ್ಟ್ರಪತಿ ಹಾಗೂ ವಿವಿಧ ಗಣ್ಯರಿಂದ ಶುಭಾಶಯ

Suddi Udaya
error: Content is protected !!