22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿರ್ಲಾಲು ನಲ್ಲಿ ಮೂಲ್ಯರ ಯಾನೆ ಕುಲಾಲರ ಸಂಘದಿಂದ ಕೆಸರುಡೊಂಜಿ ದಿನ

ಬೆಳ್ತಂಗಡಿ: ತುಳುನಾಡಿನ ಸಂಸ್ಕತಿ, ಸಂಸ್ಕಾರ ಮತ್ತು ಕ್ರೀಡಿಗಳನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಶಿರ್ಲಾಲು ಕುಲಾಲ ಸಮಾಜ ಬಾಂಧವರು ಕೆಸರುಡೊಂಜಿ ಕ್ರೀಡಾಕೂಟ ಮಾಡುತ್ತಿರುವುದು ಅಭಿನಂದನೀಯ. ಕುಲಾಲ ಸಮುದಾಯ ಹಿಂದಿನಿಂದಲೂ ದೈವ ದೇವರ ಸೇವೆಯಲ್ಲಿ ತೊಡಗಿಸಿಕೊಂಡ ಸಮುದಾಯವಾಗಿದೆ ಎಂದು ದಾರ್ಮಿಕ ಮುಖಂಡ ಕಿರಣ್ ಪುಷ್ಪಗಿರಿ ಹೇಳಿದರು.

ಅವರು ಶಿರ್ಲಾಲು ನಲ್ಲಿ ಮೂಲ್ಯರ ಯಾನೆ ಕುಲಾಲರ ಸಂಘ ಆಯೋಜಿಸಿದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ ಇಂತಹ ಕ್ರೀಡಾ ಕೂಟಗಳು ನಗರಪ್ರದೇಶದಲ್ಲೂ ವಿಸ್ತರಿಸಬೇಕು ಆಗ ನಗರವಾಸಿಗಳಿಗೂ ತುಳುನಾಡ ಕ್ರೀಡೆಯ ಪರಿಚಯವಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಕೆಸರುಡೊಂಜಿ ದಿನ ಕ್ರೀಡಾಕೂಟ ನಡೆಸಬೇಕು ಎಂದರು. ಉದ್ಯಮಿ ಗಣೇಶ್ ಕುಲಾಲ್ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿ ಸಮಾಜಬಾಂಧವರು ಒಟ್ಟಾಗಿ ಸೇರಲು ಇಂತಹ ಕ್ರೀಡಾ ಕೂಟ ಅಗತ್ಯ ಎಂದರು. ಮೂಲ್ಯರ ಯಾನೆ ಕುಲಾಲ ಸಂಘ ಅಳದಂಗಡಿ, ಶಿರ್ಲಾಲು ಇದರ ಅದ್ಯಕ್ಷ ಪ್ರಭಾಕರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಸಿ ಎ ಬ್ಯಾಂಕ್ ನ ಸತೀಶ್ ಕುಲಾಲ್, ಪ್ರಗತಿಪರ ಕ್ರುಷಿಕ ಮೋಂಟ ಮೂಲ್ಯ, ಶಿರ್ಲಾಲು ಕುಲಾಲ್ ಸಂಘದ ಮಾಜಿ ಅದ್ಯಕ್ಷ ಬಾಲಕೃಷ್ಣ ನೂಜಿಗೆ, ಪ್ರಗತಿಪರ ಕ್ರುಷಿಕ ರಾಮ ಬಂಗೇರ ಕಾಯರೊಟ್ಟು, ಉಪನ್ಯಾಸಕ ಅವಿನಾಶ್ ಕುಲಾಲ್ ಮಾಣಿಲ, ಶಿರ್ಲಾಲ್ ಸಿ ಎ ಬ್ಯಾಂಕ್ ನ ಲೆಕ್ಕಿಗ ರಾಜೇಶ್ ಎನ್ ನೂಜಿಗ, ಉದ್ಯಮಿಗಳಾದ ಬೇಬಿ ಮೂಲ್ಯ ಬೈರೊಟ್ಟು, ಸುರೇಶ್ ಕುಲಾಲ್ ಕಂಬಳದಡ್ಡ, ಪ್ರಗತಿಪರ ಕ್ರುಷಿಕ ಮೋನಪ್ಪ ಮೂಲ್ಯ ನಲ್ಲಾರಗುತ್ತು, ಗುರಿಕಾರ ವಸಂತ ಕುಲಾಲ್ ಕುರೇವೂರು ಉಪಸ್ಥಿತರಿದ್ದರು. ರಾಜೇಶ್ ನೋಜಿಗ ಸ್ವಾಗತಿಸಿ ನಿರೂಪಿಸಿದರು. ಪ್ರಸಾದ್ ನಲ್ಲಾರ ಗುತ್ತು ವಂದಿಸಿದರು. ಸಮಾಜಬಾಂಧವರ ಮಕ್ಕಳಿಗೆ, ಸಾರ್ವಜನಿಕನಿಕರಿಗೆ ವಿವಿಧ ಸ್ಪರ್ದೆಗಳನ್ನು ಅಯೋಜಿಸಲಾಗಿತ್ತು.

Related posts

ಸುಲ್ಕೇರಿ ಶ್ರೀ ರಾಮ ಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ಉದ್ಘಾಟನೆ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಮಾದಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋಧಿ ದಿನಾಚರಣೆ

Suddi Udaya

ಪಡ್ಡಂದಡ್ಕ: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Suddi Udaya

ಕೊಕ್ಕಡ: ಮೈಪಾಲ ಸೇತುವೆ ಬಳಿ ನೀರಿನ ಟ್ರಾಕ್ಟರ್‌ ಪಲ್ಟಿಯಾಗಿ ಕಾರ್ಮಿಕ ಸಾವು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಣಿಯೂರು ಗ್ರಾಮ ಪಂಚಾಯತಿಯಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಕಳೆಂಜ: ಹೂದೋಟ ನಿರ್ಮಾಣ, ಸ್ವಚ್ಛತಾ ಆಂದೋಲನ

Suddi Udaya
error: Content is protected !!